ಉದ್ಯೋಗಖಾತರಿ ಕೂಲಿ ಕಾರ್ಮಿಕರಿಗೆ ಹಣ ಪಾವತಿ ಮಾಡಲು ಅಧ್ಯಕ್ಷೆ ಪತಿ ಮಂಜೇಗೌಡ ಇಂದ ವಿವಿಧ ಬೇಡಿಕೆ
ಕೃಷ್ಣರಾಜಪೇಟೆ ತಾಲ್ಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವನಹಳ್ಳಿ ಗ್ರಾಮದ ಅಮಾನಿಕೆರೆ ಅಭಿವೃದ್ಧಿ ಮತ್ತು ಹೊಳೇತ್ತವ ಕಾಮಗಾರಿಯನ್ನು ಸುಮಾರು 100 ಹೆಚ್ವು ಮಹಿಳಾ ಕೂಲಿ ಕಾರ್ಮಿಕರು ಉದ್ಯೋಗ ಖಾತರಿ ಯೋಜನೆಯಡಿ ಕಳೆದ ಒಂದು ತಿಂಗಳಿಂದ ಕೆಲಸ ಮಾಡುತ್ತಿದ್ದು ಕಳೆದ ಮೂರುವಾದಿಂದ ತಮ್ಮ ಕೂಲಿ ಹಣವನ್ನು ಬಿಡುಗಡೆ ಮಾಡಲು (ಬೆರಳಚ್ಚು) ನೀಡುಲು ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾದ ನಂದಿನಿ ರವರ ಪತಿ ಮಂಜೇಗೌಡ ವಿವಿಧ ಬೇಡಿಕೆಗಳನ್ನು ಇಟ್ಟು ತೊಂದರೆ ನೀಡುತ್ತಿದ್ದರೆ ಎಂದು ಕೂಲಿ ಕಾರ್ಮಿಕರು ಆರೋಪಿಸಿದ್ರು...
ಮಂದಗರೆ ಸುತ್ತಮುತ್ತಾಲಿನ ಗ್ರಾಮಗಳ ಅನೇಕ ಕೂಲಿ ಕಾರ್ಮಿಕರು ಬೇವನಹಳ್ಳಿ ಕೆರೆಯ ಹೊಳೆತ್ತುವ ಕೆಲಸ ಮಾಡುತ್ತಿದ್ದು ಮೂರು ವಾರದ ಕೂಲಿ ಹಣಕ್ಕೆ ಅಧ್ಯಕ್ಷ ಹೆಬ್ಬೆಟ್ಟು ನೀಡುವಂತೆ ಕೂಲಿ ಕಾರ್ಮಿಕರು ತಿಳಿಸಿದ್ರೆ ನಿಮ್ಮ ಕೆಲಸಕ್ಕೆ ನಾನು 15 ಜನರ ಜಾಬ್ ಕಾರ್ಡ್ ನೀಡುತ್ತೇನೆ ಇದನ್ನು ನಿಮ್ಮೊಂದಿಗೆ ಸೇರಿಸಿದ್ರೆ ಆಗ ಮಾತ್ರ ನಿಮ್ಮಗೆ ಹಣ ಬಿಡುಗಡೆ ಮಾಡಲು ನನ್ನ ಪತ್ನಿ ನಂದಿನಿ ಬೆರಳಚ್ಚು ನೀಡುತ್ತಾರೆ ಇಲ್ಲವಾದರೆ ನಿಮ್ಮ ಕೂಲಿ ಹಣ ಹೇಗೆ ಪಡೆದುಕೊಳ್ಳುವಿರಾ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ರು... ಅದಲ್ಲದೆ ಕೆಲ ಬಲಾಂಡ್ಯರು ಉದ್ಯೂಗಖಾತ್ರಿ ಯೋಜನೆಯ ಕೆಲಸವನ್ನು ಜೆ.ಸಿ.ಬಿ ಯಂತ್ರದಲ್ಲಿ ಕೆಲಸ ಮಾಡಿ ಎಲ್ಲಾ ಅಧಿಕಾರಿಗಳಿಗೂ ಕಮಿಷನ್ ನೀಡಿ ಸಂಪೂರ್ಣ ಬಿಲ್ ಪಡೆದುಕೊಂಡಿದ್ದು ಇದರ ಬಗ್ಗೆ ಇಂಜಿನೆಯರ್ ಪಾರ್ಥ ರವರನ್ನು ವಿಚಾರಿಸಿದ್ರೆ ಯಂತ್ರದಲ್ಲಿ ಕೆಲಸ ಮಾಡಿಲ್ಲ ಜೆ.ಸಿ.ಬಿ ಯಂತ್ರವನ್ನು ಕೆರೆಯಲ್ಲಿ ಸುಮ್ಮನೆ ನಿಲ್ಲಿಸಿದ್ದಾರೆ ಎಂದು ಉಡಾಪೆ ಉತ್ತರ ನೀಡುತ್ತಿದ್ದು ಹಲವು ಅನುಮಾನಗಳು ಎದ್ದು ಕಾಣುತ್ತಿದೆ..
ಇಷ್ಟು ಪ್ರಾಮಾಣಿಕ ಕೆಲಸ ಮಾಡುತ್ತಿರುದ್ರು ಕೂಲಿಕಾರ್ಮಿಕರು ದಿನಕ್ಕೆ ಎಂಟು ಗಂಟೆಗಳ ಕಾಲ ಕೆಲಸ ಮಾಡಬೇಕು ಒತ್ತಡ ನೀಡುತಿದ್ದು ನಮ್ಮ ಕೂಲಿ ಹಣವನ್ನು ಬಿಡುಗಡೆ ಮಾಡದಿದ್ದರೆ ಗ್ರಾಮ ಪಂಚಾಯತಿ ವಿರುದ್ದ ಪ್ರತಿಭಟನೆ ನೆಡೆಸುವುದಾಗಿ ಎಚ್ಚರಿಗೆ ನೀಡಿದ್ರು..
ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ್ಯ ಕೂಲಿ ಕಾರ್ಮಿಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಗೋಪಾಲ್, ಮುಖಂಡರಾದ ಚಿಕ್ಕಮಂದಗರೆ ಸುರೇಶ್, ಕೂಲಿಕಾರ್ಮಿಕರಾದ ಕಾಂತಮಣಿ, ನೀಲಮ್ಮ, ಕಾವ್ಯ, ಪವಿತ್ರ, ರಾಧ, ಯೋಶೋದಮ್ಮ, ಸಾಕಮ್ಮ, ಸೇರಿದಂತೆ ನೂರಾರು ಕಾರ್ಮಿಕರು ಇದ್ದರು..
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
