ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಜಗನ್ನಾಥ್ ಅವರ ಅದ್ಭುತ ಸಾಧನೆ
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದ ಸುಪುತ್ರ, ವಿಶೇಷಚೇತನ ಕ್ರೀಡಾಪಟು ಜಗನ್ನಾಥ್ ಅವರು ಪ್ಯಾರಾ ಟೇಬಲ್ ಟೆನಿಸ್ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.
ಮಧ್ಯ ಪ್ರದೇಶದ ಇಂಡೋರ್ನಲ್ಲಿ ನಡೆದ UTT ಪ್ಯಾರಾ ಸೀನಿಯರ್ ಟೇಬಲ್ ಟೆನಿಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ 2026ನಲ್ಲಿ ಭಾರತ ರ್ಯಾಂಕ್-1 ಆಟಗಾರರಾಗಿರುವ ಜಗನ್ನಾಥ್ ಅವರು ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾದಿಸಿದ್ದಾರೆ
-ಪುರುಷರ ಸಿಂಗಲ್ಸ್ – ಚಿನ್ನದ ಪದಕ
ಮಿಕ್ಸ್ ಡಬಲ್ಸ್ - ಚಿನ್ನದ ಪದಕ
ಪುರುಷರ ಡಬಲ್ಸ್ - ಬೆಳ್ಳಿ ಪದಕ
ಹೀಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಗಳಿಸಿ ನಮ್ಮ ಮಂಡ್ಯ ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಗೌರವವನ್ನು ಹೆಚ್ಚಿಸಿದ್ದಾರೆ.
ಅವರ ಕ್ರೀಡಾ ಪಯಣಕ್ಕೆ ನಮ್ಮ ಪ್ರೋತ್ಸಾಹ ಮತ್ತು ಬೆಂಬಲ ನಿರಂತರವಾಗಿ ಇರಲಿದೆ. ಇನ್ನಷ್ಟು ಉನ್ನತ ಸಾಧನೆಗಳತ್ತ ಅವರು ಸಾಗಲಿ ಎಂದು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆ ಶುಭ ಹಾರೈಸಿದ್ದಾರೆ..
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
