ಡಾ. ಶಿಲಾಸೂ ಅವರ "ದೀಡೆಕ್ರೆ ಹೊಲ" ಪುಟ್ಕತೆಗೆ ರಾಜ್ಯಮಟ್ಟದ ಅತ್ಯುತ್ತಮ ಸ್ಥಾನ

ಸಾಹಿತ್ಯ ಸೌರಭ ಫೌಂಡೇಶನ್ (ನೋಂ) ವಡಗೋಲ, ವೇದಿಕೆ ವತಿಯಿಂದ ದಿನಾಂಕ 05.10.2025 ರಂದು ಏರ್ಪಡಿಸಲಾದ ರಾಜ್ಯಮಟ್ಟದ ಸ್ವರಚಿತ "ಪುಟ್ಕತೆ" ರಚನೆ ಸ್ಪರ್ಧೆಯಲ್ಲಿ ಕಲಬುರಗಿಯ ಡಾ. ಶಿವಕುಮಾರ. ಲಾ. ಸೂರ್ಯವಂಶ, ರವರು ರೈತನ ಕುರಿತು ರಚಿಸಿದ "ದೀಡೆಕ್ರೆ ಹೊಲ" ಶೀರ್ಷಿಕೆಯ "ಪುಟ್ಕತೆ" ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸ್ಥಾನ ಪಡೆದುಕೊಂಡಿದೆ ಎಂದು, ಸಾಹಿತ್ಯ ಸೌರಭ ಫೌಂಡೇಶನ್, ಅಧ್ಯಕ್ಷರಾದ ಶ್ರೀ, ಶಿವಾನಂದ. ಆರ್. ಭಾಗಾಯಿ ಅವರು ತಿಳಿಸಿದ್ದಾರೆ.
ಪುಟ್ಕತೆ ರಚನೆಯಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಸ್ಥಾನ ಪಡೆದುಕೊಂಡಿರುವ ಡಾ. ಶಿಲಾಸೂ ಕಲಬುರಗಿ ಅವರಿಗೆ ಸಾಹಿತ್ಯ ಸೌರಭ ಫೌಂಡೇಶನ್ ವತಿಯಿಂದ ಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ, ಬಸವರಾಜ ಗಾರ್ಗಿ, ಹಿರಿಯ ಸಾಹಿತಿಗಳು ತಿಳಿಸಿದ್ದಾರೆ.
What's Your Reaction?






