'ಪರಮ್ ಕಲ್ಚರ್' ಅರ್ಪಿಸುವ ಪರಂಪರಾ ಸರಣಿಯ ೦7 ನೇ ಕಾರ್ಯಕ್ರಮ 'ವಂದೇ ಮಾತರಮ್'
'ಪರಮ್ ಕಲ್ಚರ್' ಅರ್ಪಿಸುವ ಪರಂಪರಾ ಸರಣಿಯ ೦7 ನೇ ಕಾರ್ಯಕ್ರಮ 'ವಂದೇ ಮಾತರಮ್' ಅಗಸ್ಟ್ 14 ರಂದು, ಡಾ.ಸಿ ಅಶ್ವತ್ಥ್ ಕಲಾಭವನದಲ್ಲಿ ನಡೆಯಿತು. ಪರಮ್ ಕಲ್ಚರ್ ನ ನಿರ್ದೇಶಕರಾದ ಪಂ. ಪ್ರವೀಣ್ ಡಿ.ರಾವ್, ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಹೆಗಡೆ, ಗಾಯಕ ಶಂಕರ್ ಶಾನುಭೋಗ್ ಅವರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಶ್ರೀಯುತ ಶಂಕರ ಶಾನುಭೋಗ್ ಅವರ ತಂಡದಿಂದ ದೇಶಭಕ್ತಿಗೀತೆಗಳ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಆಕಾಶಕ್ಕೆದ್ದುನಿಂತ ಪರ್ವತಹಿಮಮೌನದಲ್ಲಿ, ತಾಯೆ ನಿನ್ನ ಮಡಿಲಲಿ, ಏ ಮೇರೆ ವತನ್‌ಕೆ ಲೋಗೊ, ವಂದೇ ಮಾತರಂ ರಾಷ್ಟ್ರ ಭಕ್ತಿಯನ್ನು ಗೀತೆ ಮೂಲಕ ಸಹೃದಯರ ಮನ ಸೂರೆಗೊಂಡಿತು. ಸಹಗಾಯನದಲ್ಲಿ ಕುಮಾರಿ ಮೇಘನಾ ಹಳಿಯಾಳ, ಕೀಬೋರ್ಡ್ ನಲ್ಲಿ ಶ್ರೀ ಕೃಷ್ಣ ಉಡುಪ, ತಬಲಾದಲ್ಲಿ
ಶ್ರೀ ಸುದತ್ತ ಎಲ್ ಶ್ರೀಪಾದ್, ಢೋಲಕ್ ನಲ್ಲಿ ಶ್ರೀ ಲೋಕೇಶ್ ಆರ್. ಕೊಳಲಿನಲ್ಲಿ ಶ್ರೀ ರಮೇಶ್ ಕುಮಾರ್ ಜಿ.ಎಲ್., ರಿದಂ ಪ್ಯಾಡ್ಸ್ ನಲ್ಲಿ ಶ್ರೀ ಪದ್ಮನಾಭ ಕಾಮತ್ ಅವರು ಸಹಕರಿಸಿದರು.
ಜೊತೆಯಲ್ಲಿ ಪತ್ರ ಬರೆಯುವ ಕಲೆಯನ್ನು ಪುನ: ನೆನಪಿಸುವ ಸಲುವಾಗಿ, ಇಂಡಿಯಾ ಪೋಸ್ಟ್ ನ ಸಹಯೋಗದೊಂದಿಗೆ, ನಮ್ಮಲ್ಲಿನ ಕಲಾವಿದರೇ ರಚಿಸಿದ ಬೆಳಗಿಗೆ ಅಷ್ಟಾಗಿ ಬಾರದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನೊಳಗೊಂಡ ಅಂಚೆ ಪತ್ರಗಳ ಪ್ರದರ್ಶನವೂ, ಮಾರಾಟವೂ ನಡೆಯಿತು. ಇದರಲ್ಲಿ ತಮ್ಮ ಆತ್ಮೀಯರಿಗೆ ಸಂದೇಶವನ್ನು ಬರೆದು ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
