ಪರಮಪೂಜ್ಯ ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಗುರು ಕೋರಣ್ಯ

Aug 29, 2025 - 13:47
 0  12
ಪರಮಪೂಜ್ಯ ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಗುರು ಕೋರಣ್ಯ

ಕನಕಪುರ: ಪರಮಪೂಜ್ಯ ಶ್ರೀ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಕನಕಪುರ ನಗರದಲ್ಲಿ ಎರಡು ದಿನಗಳ ಕಾಲ ದೇಗುಲಮಠದಿಂದ ಗುರು ಕೋರಣ್ಯದಲ್ಲಿ ಶ್ರೀ ದೇಗುಲ ಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಹಾಗೂ ತೋಟಹಳ್ಳಿ ಮಠದ ಪೂಜ್ಯ ಶ್ರೀ ಬಸವಪ್ರಭು ಮಹಾಸ್ವಾಮಿಗಳು ಮತ್ತು ಮರಳವಾಡಿ ಮಠದ ಕಿರಿಯ ಪೂಜ್ಯ ಶ್ರೀ ಪ್ರಭುಕಿರೀಟ ಮಹಾಸ್ವಾಮಿಗಳು ಹಾಗು ಅತ್ತಹಳ್ಳಿ ಮಠದ ಕಿರಿಯ ಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು ಮತ್ತು ಬಿಲ್ವಪತ್ರೆ ಮಠದ ಇಮ್ಮಡಿ ಸದಾಶಿವ ಮಹಾಸ್ವಾಮಿಗಳು

ಕನಕಪುರ ನಗರದಲ್ಲಿ ಗುರು ಕೋರಣ್ಯವನ್ನು ನಡೆಸಿದರು. ಶ್ರೀ ದೇಗುಲಮಠದಿಂದ ಭಾದ್ರಪದ ಮಾಸದ ವಾರ್ಷಿಕ ಗುರುಕೋರಣ್ಯ ಕಾಯಕ ಬಹಳ ಹಿಂದಿನ ಸಂಪ್ರದಾಯ.ಯಾವುದೇ ಮಠವು ತನ್ನದೇ ಆದ ಆಸ್ತಿಯನ್ನು ಹೊಂದಿದ್ದರೂ ಅಲ್ಲಿ ನಡೆಯುವ ಅನ್ನದಾಸೋಹ, ವಿದ್ಯಾ ದಾಸೋಹ ಮತ್ತು ಜ್ಞಾನ ದಾಸೋಹಗಳನ್ನು ನಿರ್ವಹಿಸಲು ಗುರುಕೋರಣ್ಯ ಪದ್ಧತಿ ನಡೆದುಕೊಂಡು ಬಂದಿದ್ದು, ಈ ಪದ್ಧತಿಯನ್ನು ಬಹಳ ಹಿಂದಿ ನಿದಲೂ ಶ್ರೀ ದೇಗುಲಮಠದ ಗುರು ಪರಂಪರೆ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ. ವಿಶೇಷವಾಗಿ ಈ ಬಾರಿ ಐದು ಸ್ವಾಮೀಜಿಗಳು ಶ್ರೀ ದೇಗುಲ ಮಠಾಧ್ಯಕ್ಷರಾದ ಡಾ. ಶ್ರೀಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ನಡೆದ ಈ ಸಾಂಪ್ರದಾಯಿಕ ಕಾರ್ಯದಲ್ಲಿ ಶ್ರೀ ದೇಗುಲ ಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳವರು ಹಾಗೂ ತೋಟಹಳ್ಳಿ ಮಠದ ಶ್ರೀ ಬಸವ ಪ್ರಭು ಮಹಾಸ್ವಾಮಿಗಳು ಹಾಗು ಅತ್ತಹಳ್ಳಿ ಮಠದ ಕಿರಿಯ ಶ್ರೀ ನಿರಂಜನ ಮಹಾಸ್ವಾಮಿಗಳು ಮತ್ತು ಮರಳವಾಡಿ ಮಠದ ಕಿರಿಯ ಶ್ರೀ ಪ್ರಭುಕೀರಿಟ ಮಹಾಸ್ವಾಮಿಗಳವರು ಮತ್ತು

ಬಿಲ್ವಪತ್ರೆಮಠ ಶ್ರೀ ಇಮ್ಮಡಿ ಸದಾಶಿವ ಮಹಾಸ್ವಾಮಿಗಳು ಗುರುಕೋರಣ್ಯ ಕಾಯಕವನ್ನು ಕೈಗೊಂಡು ಕನಕಪುರ ನಗರದ ವಿವಿಧ ಬಡಾವಣೆಗಳಾದ ಕೋಟೆ, ಕೆಂಕೆರಮ್ಮ ರಸ್ತೆ, ಹೌಸಿಂಗ್ ಬೋರ್ಡ್, ಪೈಪ್ ಲೈನ್ ರಸ್ತೆ ಮಹದೇಶ್ವರ ಬಡಾವಣೆ ಎಂ ಜಿ ರಸ್ತೆ ಮುನಿಸಿಪಲ್ ಹೈಸ್ಕೂಲ್ ರಸ್ತೆ, ಹೀಗೆ ಅನೇಕ ಬಡಾವಣೆಗಳಲ್ಲಿಸಂಚರಿಸಿ ಕೋರಣ್ಯ ಮಾಡಿದರು. ಐವರು ಪೂಜ್ಯರನ್ನೂ ಭಕ್ತ ವೃಂದವು ಅನನ್ಯ ಭಕ್ತಿಭಾವದಿಂದ ಬರಮಾಡಿಕೊಡು, ಅವರವರ ಶಕ್ತಿಯ ಅನುಸಾರ ಕಾಣಿಕೆ ದವಸ ಧಾನ್ಯಗಳು, ಎಣ್ಣೆ, ತರಕಾರಿ ಇತ್ಯಾದಿ ದಾಸೋಹ ಪರಿಕರಗಳನ್ನು ಹಾಗೂ ಯಥಾಶಕ್ತಿ ಕಾಣಿಕೆಗಳನ್ನೂ ಸಮರ್ಪಿಸಿ ಶ್ರಿಗಳವರನ್ನು ಸತ್ಕರಿಸಿದರು. ಜೊತೆಗೆ ಭಜನೆ, ತಂಡಗಳು ಮುಚೂಣಯಲ್ಲಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಈ ಕಾರ್ಯದಲ್ಲಿ ಕನಕಪುರದ ನಗರದ ಭಕ್ತರು ಹಳೆ ವಿದ್ಯಾರ್ಥಿಗಳು ಎಲ್ಲಾ ಹಿರಿಯರು, ತರುಣರು, ಶಿಕ್ಷಕರು ಭಕ್ತವೃಂದ ಹಾಗು ನೌಕರವರ್ಗದವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456