ತೆಳ್ಳನೂರು ಗ್ರಾಮದಲ್ಲಿ ವಿಪರೀತ ಮಳೆಗೆ ಗೋಡೆ ಕುಸಿತ, ಸಾಕಷ್ಟು ಪ್ರಮಾಣದ ವಸ್ತುಗಳು ಹಾನಿ

ಸಂತೆ ಮರಹಳ್ಳಿ: ಸಮೀಪದ ತೆಳ್ಳನೂರು ಗ್ರಾಮದಲ್ಲಿ ವಿಪರೀತ ಮಳೆಗೆ ಗ್ರಾಮದ ವಿಮಲಾ ಎಂಬುವರ ಮನೆ ಗೋಡೆ ಕುಸಿದ ಹಿನ್ನೆಲೆಯಲ್ಲಿ ಸಾವಿನಿಂದ ಪರಾಗುವುದರ ಜೊತೆಗೆ ಮನೆಯಲ್ಲಿರುವ ವಸ್ತುಗಳು ಸಂಪೂರ್ಣವಾಗಿ ಹಾನಿಯಾಗಿದೆ.
ಇತ್ತೀಚಿಗೆ ಹವಾಮಾನ ವೈಫಲ್ಯದಿಂದ ಕಳೆದ ಒಂದು ವಾರದಿಂದ ಸುರಿದ ಮಳೆಗೆ ವಾಸವಿದ್ದ ಮನೆ ಗೋಡೆ ಕುಸಿದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದ ವಸ್ತುಗಳು ಹನಿಯಾಗಿರುವುದಾಗಿ ನಿವಾಸಿ ವಿಮಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈಗಾಗಲೇ ಕಂದಾಯ ಇಲಾಖೆ ಅಧಿಕಾರಿ ರೇವಣ್ಣ ಭೇಟಿ ಪರಿಶೀಲನೆ ನಡೆಸಿದರು.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಿಸುವಲ್ಲಿ ಮುಂದಾಗಬೇಕು
What's Your Reaction?






