ಸಂತೆಮರಹಳ್ಳಿ ಕುದೇರು ರಸ್ತೆ ಅಭಿವೃದ್ಧಿಪಡಿಸಬೇಕೆಂದು ಸಾರ್ವಜನಿಕರ ಅಗ್ರಹ
ಸಂತೆಮರಹಳ್ಳಿ: ಚಾಮರಾಜನಗರ ತಾಲೋಕಿನ ಸಂತೆಮರಹಳ್ಳಿಯಿಂದ ಕುದೇರು, ಉಮ್ಮತ್ತೂರಿಗೆ ಹಾದು ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು ಕೇಳೋರಿಲ್ಲ ಹೇಳೋರಿಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನ ಸವಾರರು ಈ ರಸ್ತೆ ಮೂಲಕ ವಾಹನ ಚಲಾಯಿಸಬೇಕಾದರೆ ವಾಹನ ಸವಾರರ ಗೋಳು ಅಷ್ಟಿಷ್ಟಲ್ಲ,
ಈ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನ ಓಡಾಡುತ್ತಿದ್ದ ವಾಹನ ವಾಹನ ಸವಾರರು ತಮ್ಮ ಜೀವ ಹಿಡಿದುಕೊಂಡು ವಾಹನ ಚಲಾಯಿಸಬೇಕಾಗುತ್ತದೆ.
ಏಕೆಂದರೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿ ಅಲ್ಲಲ್ಲಿ ಗುಂಡಿಗಳಿಂದ ಕೂಡಿದ್ದು ವಾಹನ ಸವಾರಾರು ರಸ್ತೆ ಯಾವುದು ಗುಂಡಿ ಯಾವುದು ಅಂತ ಗೊತ್ತಿಲದೇ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುವ ಇಲ್ಲಿನ ರಸ್ತೆ ಮರ್ಪಟ್ಟಿದೆ
ಅದರಲ್ಲೂ ಮಳೆಗಾಲದಲ್ಲಿ ದ್ವಿಚಕ್ರ ವಾಹನ ಸವಾರರ ಪಾಡು ಅಷ್ಟಿಷ್ಟಲ್ಲ ವಾಹನ ಚಲಾಯಿಸಲು ತಮ್ಮ ಜೀವ ಪಣಕ್ಕಿಟ್ಟು ರಈ ರಸ್ತೆ ಮಾರ್ಗವಾಗಿ ವಾಹನ ಚಲಾವಣೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು.
ಇನ್ನಾದರೂ ಸಂಬಂಧ ಪಟ್ಟ ಚುನಾಯಿತ ಪ್ರತಿನಿಧಿಗಳಾಗಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಈ ರಸ್ತೆ ಬಗ್ಗೆ ಗಮನ ಹರಿಸಿ ಈ ರಸ್ತೆ ಅಭಿವೃದ್ಧಿಪಡಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
