ಬಾನಹಳ್ಳಿ ಪಿಎಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಣ ದುರುಪಯೋಗ ಮಾಡಿ ಪರಾರಿ
ಸಂತೆಮರಹಳ್ಳಿ : ಸಮೀಪದ ಬಾನಹಳ್ಳಿ ಪಿಎಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೇವಶ್ ಕುಮಾರ್ 5416954 ರೂ ಹಣ ದುರುಪಯೋಗ ಮಾಡಿ ನಕಲಿ ಬಿಲ್ ಕೊಟ್ಟ ಕಾಣಿಯಾಗಿರುವ ಘಟನೆ ಸಂಭವಿಸಿದೆ.
ಬಾನಹಳ್ಳಿ ಗ್ರಾಮಕ್ಕೆ ಸೇರಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೇವಶ್ ಕುಮಾರ್ ಪಿಎಸಿಸಿ ಬ್ಯಾಂಕ್ ನ 54 ಲಕ್ಷ ರೂ ಹಣ ದುರುಪಯೋಗ ಮಾಡಿ ಕಾಣಿಯಾಗಿದ್ದಾರೆ ಎಂದು ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಬಿ ಜಿ ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಹಲವಾರು ಬಾರಿ ಲಕ್ಷಾಂತರ ಹಣ ದುರುಪಯೋಗ ಮಾಡಿರುವ ಸಂದರ್ಭದಲ್ಲೂ ಮನವಿತೆ ದೃಷ್ಟಿಯಿಂದ ಮತ್ತೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿ ಕೊಟ್ಟ ಆಡಳಿತ ಮಂಡಳಿ ನಂಬಿಕೆ ಉಳಿಸಿಕೊಳ್ಳದೆ ಮತ್ತೆ ದ್ರೋಹ ಮಾಡಿ ರೈತರ ಹಣ ದುರುಪಯೋಗ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಹಲವಾರು ರೈತರಿಗೆ ರಸೀದಿ ಕೊಟ್ಟರು ಹಣ ಮಾತ್ರ ಬ್ಯಾಂಕ್ ಜಮಾವಣೆಯಾಗದೆ ಇರುವುದರಿಂದ ರೈತರು ಯಾರ ಬಳಿ ಹಣ ಕೇಳಬೇಕು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಕೋಪಗೊಂಡ ರೈತರು ಜಮಾಯಿಸಿ ಅಲ್ಲಿನ ಸಿಬ್ಬಂಗಳನ್ನ ತರಾಟೆಗೆ ತಗೆದುಕೊಂಡು ನಮ್ಮ ಹಣಕ್ಕೆ ಯಾರ ಹೊಣೆ ಎಂದು ಅಧಿಕಾರಿಗಳನ್ನ ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ MDCC ಬ್ಯಾಂಕ್ ಮ್ಯಾನೇಜರ್ ಪವಿತ್ರ ಧಾವಿಸಿ ತೆಳ್ಳನೂರು ಗ್ರಾಮದ ರೈತರನ್ನು ಪರಿಶೀಲನೆ ನಡೆಸಿ ಯಾವುದೇ ರೀತಿಯಲ್ಲಿ ರೈತರಿಗೆ ಅನ್ಯಾಯವಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
What's Your Reaction?
Like
1
Dislike
0
Love
0
Funny
0
Angry
1
Sad
0
Wow
1
