ರಾಷ್ಟ್ರೀಯ ಹೆದ್ದಾರಿ ತಡೆದು ಭ್ರಷ್ಟ ಆರ್ ಟಿ ಓ ಅಧಿಕಾರಿಗಳ ವಿರುದ್ಧ ಧೂಳಖೇಡ ಚಕ್ ಫೋಷ್ಟ ಎದುರು ಧರಣಿ

ರಾಷ್ಟ್ರೀಯ ಹೆದ್ದಾರಿ ತಡೆದು ಭ್ರಷ್ಟ ಆರ್ ಟಿ ಓ ಅಧಿಕಾರಿಗಳ ವಿರುದ್ಧ ಧೂಳಖೇಡ ಚಕ್ ಫೋಷ್ಟ ಎದುರು ಧರಣಿ

Feb 8, 2024 - 11:37
 0  3
ರಾಷ್ಟ್ರೀಯ ಹೆದ್ದಾರಿ ತಡೆದು ಭ್ರಷ್ಟ ಆರ್ ಟಿ ಓ ಅಧಿಕಾರಿಗಳ ವಿರುದ್ಧ ಧೂಳಖೇಡ ಚಕ್ ಫೋಷ್ಟ ಎದುರು ಧರಣಿ
ಇಂಡಿ :ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಅಂಬೇಡ್ಕರ) ಘಟಕದ ಸರ್ವ ಸದಸ್ಯರು ಈ ಮೂಲಕ ಕೇಳಿಕೊಳ್ಳುವುದೆನೆಂದರೆ ಚಡಚಣ ತಾಲ್ಲೂಕಿನ ಧೂಳಖೇಡ ದ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ.52 ಅಲ್ಲಿ ಇರುವ ಆರ್.ಟಿ.ಓ ಚೆಕ್ ಮೊಸ್ಟ ಅಲ್ಲ 8 ಜನ ಆರ್.ಟಿ.ಓ ಗಳು ಹಗಲು ರಾತ್ರಿ ಯೆನ್ನದೆ ಸರಕು ಸಾಗಾಣಿಕೆ ಭಾರಿ ವಾಹನಗಳನು ತಡೆದು ಯಾವುದೆ ರಿತಿಯ ತಪಾಸಣೆ ಮಾಡದೆ ವಾಹನಗಳ ಚಾಲಕರಿಂದ 500 ರೂ ಯಿಂದ ಹಿಡಿದು ತಮ್ಮ ಮನ ಬಂದಂತೆ ಅಕ್ರಮವಾಗಿ  ಹಣ ತೆಗೆದುಕೊಂಡು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುವದು ಗೊತ್ತಿದರು ಸಹ ಅದನು ತಡೆಯದೆ ಯಾವುದೆ ತಪಾಸಣೆ ಮಾಡದೆ ಹೆಚ್ಚಿನ ಹಣ ಪಡೆದು ವಾಹನಗಳನ್ನು ಬಿಟ್ಟು ಕಳಿಸುತ್ತಾರೆ.

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಎಲ್ಲಾ ಅಕ್ರಮ ಮತ್ತು ಮಾದಕ ವಸ್ತುಗಳು ಬರಬೇಕಾದರೆ ಈ ಚಿಕ್ಕ ಪೊಸ್ಟ ಅಧಿಕಾರಿಗಳ ಅಧಿಕಾರಿಗಳೇ  ಕಾರಣ ಇಗ ಇರುವ 8 ಜನ ಆರ್.ಟಿ.ಓ ಗಳು ಮತ್ತು ಈ ಮೋದಲಿರುವ ಆರ್.ಟಿ.ಓ ಗಳು ಸಾಕಷ್ಟು ಭ್ರಷ್ಟಾಚಾರ ಮಾಡಿದ್ದು ಅಕ್ರಮವಾಗಿ ಆಸ್ತಿ ಸಂಪಾದನೆ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಮಾಡಿದು ಮೇಲ್ನೋಟಕ್ಕೆ ಕಂಡು ಬಂದಿದೆ  ಈ ಎಲ್ಲಾ ಅಧಿಕಾರಿಗಳ ಅಕ್ರಮ ಆಸ್ತಿ ಬಗ್ಗೆ ಮಾನ್ಯ ಲೋಕಾಯುಕ್ತರು ತನಿಖೆ ಮಾಡಿ ಹಾಗೂ ಈ ಚೆಕಪೊಸ್ಟ ಅಲ್ಲಿ ಮಾಡಿರುವ ಭ್ರಷ್ಟಾಚಾರ ಚಾಲಕರಿಂದ ಹಗಲು ರಾತ್ರಿ ಯೆನ್ನದೆ ಒಂದು ದಿನಕ್ಕೆ ಲಕ್ಷಾನುಗಟಲೆ ಹಣ ದರೋಡೆ ಮಾಡಿದು ಸಾಕಷ್ಟು ಭಾರಿ ಪತ್ರಿಕೆ ಹಾಗೂ ಮಾಧ್ಯಮ ದಲ್ಲಿ ಬಂದರು ಕೂಡಾ ಯಾವುದೆ ಪ್ರಯೋಜನ ವಾಗಿಲ್ಲ.

ಆದರಿಂದ ಈ ಎಲ್ಲಾ ಅಧಿಕಾರಿ ಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಚೆಕ್ ಪೋಸ್ಟ ಅಲ್ಲಿ ಇರುವ ಅಧಿಕಾರಿಗಳನ್ನು ವಜಾ ಮಾಡಬೇಕು ಹಾಗೂ ಇದಕ್ಕೆಲಾ ಕಡಿವಾಣ ಹಾಕಬೇಕು ಎಂದು ನಾವು ದಿನಾಂಕ: 13- 02- 2024 ದಂದು ರಾಷ್ಟ್ರೀಯ ಹೆದ್ದಾರಿ ತಡೆದು ಚೆಕ್ ಪೋಸ್ಟ ಮುಂದೆ ಧರಣಿ ಸತ್ಯಾಗ್ರಹ  ಮಾಡುತ್ತಿದ್ದೆವೆ.

ಈ ಸಂದರ್ಭದಲ್ಲಿ ಆರ್. ಪಿ. ಐ. ಅಂಬೇಡ್ಕರ್ ಘಟಕ ತಾಲೂಕ ಅಧ್ಯಕ್ಷರಾದ ಚಂದ್ರಶೇಖರ ಮೇಲಿನಮನಿ ಶಿವಾನಂದ ಹರಿಜನ ಪರಸು ಉಕ್ಕಲಿ ಅಶೋಕ್ ನಯ್ಕೊಡಿ ಅರವಿಂದ್ ಕಾಂಬ್ಳೆ ಮೇಘರಾಜ ವಾಲಿಕಾರ ಶಿವರಾಜಕುಮಾರ ವಾಲಿಕಾರ  ಇನ್ನಿತರ ಉಪಸ್ಥರಿದ್ದರು 

What's Your Reaction?

like

dislike

love

funny

angry

sad

wow