ವಿಶ್ವ ಹಿರಿಯ ದಿನಾಚರಣೆ ಅಂಗವಾಗಿ   ಎಸ್ ಪಿ ಬಿ ಗಾನ ಗಾಂಧರ್ವ ಕಲಾ ವೇದಿಕೆ  ವತಿಯಿಂದ ಸೀರೆ ವಿತರಣೆ

Sep 11, 2025 - 15:22
Sep 11, 2025 - 17:10
 0  6
ವಿಶ್ವ ಹಿರಿಯ ದಿನಾಚರಣೆ ಅಂಗವಾಗಿ   ಎಸ್ ಪಿ ಬಿ ಗಾನ ಗಾಂಧರ್ವ ಕಲಾ ವೇದಿಕೆ  ವತಿಯಿಂದ ಸೀರೆ ವಿತರಣೆ

 ಸಂತೆಮರಹಳ್ಳಿ: ಸಮೀಪದ ಮಂಗಲ ಹೊಸೂರು ಗ್ರಾಮದ ಶಿವನಸಮುದ್ರ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಡಾ ಎಸ್ ಪಿ ಬಾಲಸುಬ್ರಮಣ್ಯ ಗಾನ ಗಾಂಧರ್ವ ಸಾಂಸ್ಕೃತಿಕ ಕಾಲ ವೇದಿಕೆ ಚಾಮರಾಜನಗರ ಇವರ ವತಿಯಿಂದ ವಿಶ್ವ ಹಿರಿಯರ ದಿನಾಚರಣೆಯ ಅಂಗವಾಗಿ ಸೀರೆ ವಿತರಣೆ ಕಾರ್ಯಕ್ರಮ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.



ಈ ಸಂದರ್ಭದಲ್ಲಿ ಸಂತೆಮರಹಳ್ಳಿ ಪಿ ಎಸ್ ಐ ತಾಜುದ್ದೀನ್ ಮಾತನಾಡಿ ಸಾರ್ವಜನಿಕರು ಕಾನೂನಿನ ಬಗ್ಗೆ ತಿಳಿದುಕೊಳ್ಳುವಲ್ಲಿ ಮುಂದಾಗಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ ಹಾಗೂ ಪೋಕ್ಸೋ, ವರದಕ್ಷಿಣೆ ಕಾಯ್ದೆ ಬಗ್ಗೆ ಗ್ರಾಮಸ್ಥರಿಗೆ ಕಾನೂನು ಅರಿವು ಮೂಡಿಸಿದರು.



 ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಶಿಕ್ಷಣದ ಜ್ಞಾನ ಪಡೆದು ಕೊಳ್ಳುವಲ್ಲಿ ಮುಂದಾಗಬೇಕು ಎಂದು ಗ್ರಾಮಸ್ಥರಿಗೆ ಅರಿವು ಮೂಡಿಸಿದರು.

 ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ವಂಚನೆ ಮಾಡುವವರ ಬಗ್ಗೆ ತಿಳುವಳಿಕೆ ನೀಡುವುದರ ಜೊತೆಗೆ ಬಳಕೆಯಿಂದಾಗುವ ಅನುಹುತಗಳ ಬಗ್ಗೆ ವಿವರಣೆ ನೀಡಿದರು. ಪ್ರತಿಯೊಬ್ಬರೂ ಕಾನೂನುಗಳನ್ನ ಪಾಲಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ವಿಶ್ವ ಹಿರಿಯರ ದಿನಾಚರಣೆಯ ಅಂಗವಾಗಿ ಹಲವಾರು ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು.

ಉದ್ಯಮಿ ಶ್ರೀನಿಧಿ, ನಗರಸಭಾ ಸದಸ್ಯೆ ಚಿನ್ನಮ್ಮ , ಎಸ್ ಪಿ ಬಿ ಬಾಲಸುಬ್ರಮಣ್ಯ ಗಾನ ಗಾಂಧರ್ವ ಸಂಘದ ಅಧ್ಯಕ್ಷ ಶಿವಣ್ಣ, ಪದಾಧಿಕಾರಿಗಳಾದ ಸುರೇಶ್ ಗೌಡ, ವಸಂತ ಬಂಗಾರು ಗ್ರಾ ಪಂ ಸದಸ್ಯರಾದ ರಾಜು, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0