ಸರ್ಕಾರದ ಸೌಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು: ಶಾಸಕ ಎ ಆರ್ ಕೆ

ಚಾಮರಾಜನಗರ: ತಾಲೋಕಿನ ಸಂತೆಮರಹಳ್ಳಿಯ ಎಪಿಎಂಸಿ ಆವರಣದಲ್ಲಿ ಅಂಬೇಡ್ಕರ್ ನಿಗಮ ಸೇರಿದಂತೆ ವಿವಿಧ ಇಲಾಖೆ ನಿಗಮಗಗಳ ಇಲಾಖೆಯಿಂದ ಅರ್ಹ ಫಲನುಭವಿಗಳಿಗೆ ವೈಯಕ್ತಿಕ ಸೌಲತ್ತನ್ನು ವಿತರಿಸಿ ಮಾತನಾಡಿದ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಮಾತನಾಡಿ ಬಡ ಕುಟುಂಬಗಳು ಸ್ವಾವಲಂಬಿಯಾಗಿ ಬದುಕಲು ಸರ್ಕಾರದ ಸೌಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.ಈ ಈ ವೇಳೆಯಲ್ಲಿ ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ 235 ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಿ ಮಹಿಳೆಯರು ತಮ್ಮ ಸ್ವಂತ ದುಡಿಮೆಯಿಂದ ಕುಟುಂಬ ನಿರ್ವಹಣೆ ಮಾಡಲು ಸರ್ಕಾರದಿಂದ ಇಂತಹ ಸೌಲತ್ತುಗಳನ್ನು ಪ್ರತಿವರ್ಷ ನೀಡುತ್ತದೆ ಇದನ್ನು ದುರುಪಯೋಗ ಮಾಡಿಕೊಳ್ಳದೆ ಸ್ವಂತ ಕಾಲಿನ ಮೇಲೆ ನಿಂತು ಜೀವನ ನಡೆಸಬೇಕೆಂದು ಮಹಿಳೆಯರಿಗೆ ಸಲಹೆ ನೀಡಿದರು. ಜಾತಿಗೊಂದು ನಿಗಮ ಬಂದು ಗುರಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ದೂರು ಬಂದಿದ್ದು ಹಾಗಾಗಿ ಮುಂದಿನಗಳಲ್ಲಿ ಎಲ್ಲಾ ಸಮುದಾಯವನ್ನು ಪರಿಗಣಿಸಿ ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಬೇಕು ಎಂದರು. ಈ ಸಂದರ್ಭದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲನುಭವಿಗಳಿಗೆ ಕೊಳವೆಬಾವಿ ಪರಿಕರಗಳನ್ನು ವಿತರಣೆ ಮಾಡಲಾಯಿತು.
ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಅವಧಿಯಲ್ಲಿ ಕೊಳ್ಳೇಗಾಲ ನೀರಾವರಿ ಕ್ಷೇತ್ರಕ್ಕೆ 500 ಕೋಟಿ ಹೆಚ್ಚು ಅನುದಾನ ನೀಡಲಗಿದೆ ಹಾಗೂ ಕ್ಷೇತ್ರದಲ್ಲಿ ನೂತನ ಆಸ್ಪತ್ರೆಗಳ ನಿರ್ಮಾಣ ಮತ್ತು ರೇಷ್ಮೆ ಕಾರ್ಖಾನೆಗಳ ಪುನಶ್ಚೇತನ ಹಾಗೂ ಸೇತುವೆಗಳು, ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಎಚ್ ವಿ ಚಂದ್ರು, ಚಾಮುಲ್ ನಿರ್ದೇಶಕ ರೇವಣ್ಣ, ಅಂಬೇಡ್ಕರ್ ನಿಗಮ ಮಂಡಳಿ ವ್ಯವಸ್ಥಾಪಕ ರಾಜು, ಗ್ರಾಮೀಣ ಕೈಗಾರಿಕೆ ಇಲಾಖೆ ಅಧಿಕಾರಿ ಪುಷ್ಪಲತಾ, ಸಾಮಾಜ ಕಲ್ಯಾಣ ಅಧಿಕಾರಿ ಕೇಶವಮೂರ್ತಿ ಉಪಸ್ಥಿತರಿದ್ದರು.
What's Your Reaction?






