"ಸಾಹಿತ್ಯವನ್ನು ಜಾತಿ ಆಧಾರದ ಮೇಲೆ ವರ್ಗೀಕರಿಸುವ ಕುರಿತಂತೆ"

Oct 11, 2025 - 12:56
 0  3
"ಸಾಹಿತ್ಯವನ್ನು ಜಾತಿ ಆಧಾರದ ಮೇಲೆ ವರ್ಗೀಕರಿಸುವ ಕುರಿತಂತೆ"

ನಾನು ಹಲವಾರು ಯುವ ಬರಹಗಾರರ, ದಲಿತ ಬಂಡಾಯ ಸಾಹಿತ್ಯ ಕಮ್ಮಟಗಳಲ್ಲಿ ಕುಳಿತು ಕೇಳಿದ್ದೇನೆ.ಅಲ್ಲೆಲ್ಲಾ ತಮ್ಮ ಬರವಣಿಗೆಯ ರಾಜಕೀಯ ಮತ್ತು ಸಾಮಾಜಿಕ  ಆಯಾಮಗಳ ಕುರಿತು ಮಾತನಾಡುತ್ತಾರೆಯೇ ಹೊರತು ಸಾಹಿತ್ಯ  ಒಂದು ಲಲಿತ ಕಲೆ, ತಮ್ಮ  ಕಲಾಭಿಭಿವ್ಯಕ್ತಿ ಭಾಷೆಯಲ್ಲಿ  ಅಭಿವ್ಯಕ್ತಿಯಾಗಿ ರೂಪುಗೊಳ್ಳುವಾಗ ಪಡೆಯುವ ಆಕಾರಗಳೇನು ? ಹಿಂದಿನ ಸಾಹಿತ್ಯಕ್ಕೂ ತಮಗೂ ಸಾಮ್ಯಗಳೇನು ? ವ್ಯತ್ಯಾಸಗಳೇನು ? ಇತ್ಯಾದಿಗಳ ಬಗ್ಗೆ ಅವರು ಚಿಂತಿಸಿದಂತೆ ಕಾಣಲಿಲ್ಲ. 

ದಲಿತ ಎನ್ನುವ ಪಾರಿಭಾಷಿಕ ಶಬ್ದವನ್ನು  ಅವರು ಜಾತಿ ಸೂಚಕವಾಗಿ ಬಳಸುತ್ತಾರೋ ಅಥವಾ ವರ್ಗ ಸೂಚಕವಾಗಿ ಬಳಸುತ್ತಾರೋ ಅಥವಾ ಹೊಸ ಸಾಹಿತ್ಯಾಂದೋಳನವಾಗಿ ಪರಿಭಾವಿಸಿದ್ದಾರೋ ತಿಳಿಯುತ್ತಿಲ್ಲ.

ಕುವೆಂಪು ಬರೆದಿದ್ದು,ಮಾಸ್ತಿ ಬರೆದಿದ್ದು ಒಕ್ಕಲಿಗ ಅಥವಾ ಅಯ್ಯಂಗಾರ್ ಸಾಹಿತ್ಯವಾಗದೆ ಕನ್ನಡ ಸಾಹಿತ್ಯವಾಗಿರಬೇಕಾದರೆ ಇವರದ್ದು ಮಾತ್ರ ಹೇಗೆ ದಲಿತ ಸಾಹಿತ್ಯವಾಗುತ್ತದೆ ? ಸಾಹಿತ್ಯದಲ್ಲಿ ಎಂದೂ ಮೀಸಲಾತಿ ಪ್ರಶ್ನೆ ಬರುವುದಿಲ್ಲ. ನಮ್ಮ  ಜಾತಿ ಆಧಾರದ ಮೇಲೆ ವಿಶೇಷ ಸೌಲಭ್ಯ ಯಾಚಿಸುವುದಕ್ಕಿಂತ ವಿಶ್ವದ ಶ್ರೇಷ್ಠ ಬರಹಗಾರರೊಡನೆ ಹೋಲಿಸಿ ಎರಡನೆ ಅಥವಾ ಮೂರನೆ ದರ್ಜೆ ಬರಹಗಾರನಾದರೂ ಒಳಿತೆಂಬುದು ನನ್ನ ನಿಲುವು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0