ಹೊರ ರಾಜ್ಯಕ್ಕೆ ಅಕ್ರಮ ರಸಗೊಬ್ಬರ ಸಾಗಿಸುತ್ತಿದ್ದ ವೇಳೆಯಲ್ಲಿ ಕೃಷಿ ಅಧಿಕಾರಿಗಳಿಂದ ದಾಳಿ 15 ಟನ್ ಗೊಬ್ಬರ ವಶ 

Aug 5, 2025 - 12:25
 0  30
ಹೊರ ರಾಜ್ಯಕ್ಕೆ ಅಕ್ರಮ ರಸಗೊಬ್ಬರ ಸಾಗಿಸುತ್ತಿದ್ದ ವೇಳೆಯಲ್ಲಿ ಕೃಷಿ ಅಧಿಕಾರಿಗಳಿಂದ ದಾಳಿ 15 ಟನ್ ಗೊಬ್ಬರ ವಶ 
ಚಾಮರಾಜನಗರ: ಗುಂಡ್ಲುಪೇಟೆ ಸಮೀಪ ಅಕ್ರಮವಾಗಿ ಹೊರ ರಾಜ್ಯ ಕೇರಳಕ್ಕೆ ಯೂರಿಯಾ ರಸಗೊಬ್ಬರ ಸಾಗಿಸುತ್ತಿದ್ದ ಲಾರಿ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ 15 ಟನ್ ರಸಗೊಬ್ಬರ ವಶಕ್ಕೆ ಪಡೆದಿರುವ ಘಟನೆ ಗುಂಡ್ಲುಪೇಟೆಯಲ್ಲಿ
 ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪೀಯ ಮೂಲೆಹೊಳೆ ಚೆಕ್ ಪೋಸ್ಟ್ ಹತ್ತಿರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಂಜನಗೂಡನಿಂದ ಕೇರಳದ ಸುಲ್ತಾನ್ ಬತ್ತೇರಿಗೆ 
ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಯೂರಿಯಾ ರಸಗೊಬ್ಬರದ ಲಾರಿಯನ್ನು ದಾಳಿ ಮಾಡಿ ಗುಂಡ್ಲುಪೇಟೆ ಪೋಲಿಸರಿಗೆ ಲಾರಿಯನ್ನು ಒಪ್ಪಿಸಿ ಪ್ರಕರಣವನ್ನು ದಾಖಲು ಮಾಡಲಾಗಿದೆ.
 
ದಾಳಿಯಲ್ಲಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶಶಿಧರ್, ಸಹಾಯಕ ಕೃಷಿ ನಿರ್ದೇಶಕ ಜಾರಿದಳ ರಮೇಶ್, ಕೃಷಿ ಅಧಿಕಾರಿ ಕಿರಣ್ ಕುಮಾರ್, ಪೊಲೀಸ್ ಪೇದೆ ಸಿದ್ದರಾಜು  ಹಾಗೂ ಕೃಷಿ ಇಲಾಖೆ ಸಿಬ್ಬಂದಿಗಳಾದ ಕುಮಾರ್, ಸ್ವಾಮಿ, ಗಣೇಶ್, ಶರಣ್ ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0