ಹೊಸಮೋಳೆ ಗ್ರಾಮದಲ್ಲಿರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ

Aug 12, 2025 - 15:52
 0  64
ಹೊಸಮೋಳೆ ಗ್ರಾಮದಲ್ಲಿರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ

ಸಂತೆಮರಹಳ್ಳಿ: ಸಮೀಪದ ಹೊಸ ಮೋಳೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ವತಿಯಿಂದ ನೂತನವಾಗಿ ನಾಮಫಲಕ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಚಾಮರಾಜನಗರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಬಳಿಕ ಮಾತನಾಡಿ  ಎಷ್ಟೋ ಗ್ರಾಮಗಳಲ್ಲಿ ಸರ್ಕಾರದ ಸೌಲಭ್ಯಗಳೆ ಸಿಗದೇ ಪರದಾಡುತ್ತಿರುವ ರೈತರ ಹಿತ ಕಾಪಾಡುವ ಉದ್ದೇಶದಿಂದ ಇಂತಹ ರೈತ ಸಂಘಟನೆಗಳು ಬೇಕೆಂದು ತಿಳಿಸಿದರು. ರೈತರು ಸಂಘಟಿತರಾಗಿ ಜೀವನ ನಡೆಸಲು ಮುಂದಾಗಬೇಕು ರೈತ ಅಭಿವೃದ್ಧಿಯಾದರೆ ಈ ದೇಶ ಅಭಿವೃದ್ಧಿಯಾದಂತೆ,  ರೈತ ಯಾವ ಜಾತಿಗೂ ಸೀಮಿತವಲ್ಲ ಕೇವಲ ರೈತ ಒಂದೇ ಜಾತಿ ಎಂದರು.ಈ ಆಧುನಿಕ ಯುಗದಲ್ಲಿ ರೈತನ ವ್ಯವಸಾಯದಲ್ಲಿ  ಬದಲಾವಣೆಯುತ್ತ ಮುಖ ಮಾಡಬೇಕು ಎಂದರು. ಜಿಲ್ಲೆಯ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ತುರ್ತಾಗಿ ಆಗಬೇಕು ಹಾಗೂ ಬೇಸಿಗೆಯಲ್ಲಿ ನಾಲೆಗಳಿಗೆ ನೀರು ಹರಿಸಿ ರೈತರ ಹಿತ ಕಾಪಾಡಬೇಕು, ರೈತರಿಗೆ ಅನುಕೂಲವಾಗುವಂತಹ ಸಂಸ್ಕರಣೆ ಮತ್ತು ಶೀತಲ ಘಟಕಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗುವಂತೆ ಸರ್ಕಾರ ಕ್ರಮವಹಿಸಬೇಕು ಹಾಗೂ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಕಂದಾಯ ಆಗಲು ನಡೆಸುವ ಮೂಲಕ ರೈತರಿಗೆ ಕೃಷಿ ಭೂಮಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು, ಈಗಾಗಲೇ ಇರುವ ಗೋಮಾಳ ಗೋಮಾಳ ಜಾಗವನ್ನು ಗುರುತು ಮಾಡಿ ಒತ್ತುವರಿ ಮತ್ತು ಆಸ್ತಾಂತರವಾಗಿರುವ ಗೋಮಾಳದ ಜಾಗವನ್ನು ತೆರವುಗೊಳಿಸಿ ಕಂದಾಯ ಇಲಾಖೆಯ ಮೂಲಕ ಅಭಿವೃದ್ಧಿಪಡಿಸಿರುವ ಸರ್ಕಾರ ಮುಂದಾಗಬೇಕು  ಎಂದರು. ಆರ್ ಟಿ ಸಿ ಯಲ್ಲಿ ದಾಖಲಾದ ಬೆಳೆಗಳನ್ನು ಸರ್ಕಾರ ಖರೀದಿ ಮಾಡಲು ಎಪಿಎಂಸಿಗಳಲ್ಲಿ ಖರೀದಿ ಕೇಂದ್ರಗಳು ವರ್ಷ ಪೂರ್ತಿ ತೆರೆದಿರಬೇಕು ಮತ್ತು ಖರೀದಿಯ ಮಾನದಂಡಗಳಲ್ಲಿ ಬದಲಾವಣೆ ಮಾಡಬೇಕೆಂದು ತಿಳಿಸಿದರು. ರೈತರ ಪಂಪ್ ಸೆಟ್ ನೀಡಿರುವ ಟ್ರಾನ್ಸ್ಫರ್ ದುರಸ್ತಿಯಾದರೆ ಅದನ್ನು 24 ಗಂಟೆ ಯೊಳಗೆ ದುರಸ್ತಿ ಮಾಡಿಕೊಡುವಲ್ಲಿ ಮುಂದಾಗಬೇಕು ಹಾಗೂ ಪ್ರತಿಯೊಬ್ಬ ರೈತರು ಒಗ್ಗಟ್ಟಾಗಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅನಂತ ಸಿದ್ಧ ಆನಂದ್ ಗಿರೀಶ ನಾಗರಾಜ್ ಕೆಪಿ ರಾಜು ಎನ್ ಸೋಮಣ್ಣ ನಾಗ ಬಸವಣ್ಣ ಶ್ರೇಯಸ್ ನಾಗೇಂದ್ರ ನಂಜುಂಡ ಶೆಟ್ಟಿ ಮದನ್ ಬಂಗಾರ ಮಹೇಶ್ ಸತೀಶ್ ಮಹದೇವ್  ನೂತನವಾಗಿ ರೈತ ಸಂಘಟನೆಗೆ ಸೇರ್ಪಡೆಯಾದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0