ಗ್ರಾಮೀಣ ಪ್ರದೇಶದ ಪ್ರತಿಭೆ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಜಯ

Sep 12, 2025 - 17:36
 0  1
 ಗ್ರಾಮೀಣ ಪ್ರದೇಶದ ಪ್ರತಿಭೆ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಜಯ

ಚನ್ನರಾಯಪಟ್ಟಣ:ಇತ್ತೀಚೆಗೆ ಗೋವಾದ ರವೀಂದ್ರ ಭವನದಲ್ಲಿ ನಡೆದ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹೆಸರಾಂತ ಶ್ರೀ ನಾಟ್ಯ ಭೈರವಿ ನೃತ್ಯಶಾಲೆಯಲ್ಲಿ ಮೂರು ವರ್ಷದಿಂದ ನಿರಂತರವಾಗಿ ಭರತನಾಟ್ಯ ತರಬೇತಿ ಪಡೆಯುತ್ತಿರುವ ಬಾಲ ಪ್ರತಿಭೆ ಗ್ರಾಮೀಣ ಪ್ರದೇಶದ ಕು. ಹಿತಾನ್ಯ ಬಿ ವೈ ರವರು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ  ನೂರಾರು ಜನ ಪ್ರೇಕ್ಷಕರ ಮುಂದೆ ಪ್ರಸಂಸೆ ಪಡೆದ ಕು. ಹಿತಾನ್ಯ ರವರನ್ನು ಗುರುತಿಸಿ ಅಂತಿಮ ಸುತ್ತಿನವರೆಗೂ ಶ್ರದ್ದೆಯಿಂದ ನೃತ್ಯ ಪ್ರದರ್ಶನ ಮಾಡಿ ಸಾಧಿಸಿದ ಇವರಿಗೆ ಐ.ಟಿ.ಟಿ.ಸಂಸ್ಥೆಯವರು ಗ್ರಾಂಡ್ ಫಿನಾಲೆ ಅವಾರ್ಡ್ ನೀಡಿ ಗೌರವಿಸಿದ್ದಾರೆ, ಈ ಗೌರವದಿಂದ ಬಾಲ ಕಲಾವಿದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಬಾಲ್ಯದಲ್ಲೇ ಕೀರ್ತಿ ತಂದಿರುತ್ತಾರೆ ಇದನ್ನು ಗುರುತಿಸಿ ಶ್ರೀ ನಾಟ್ಯ ಭೈರವಿ ಶಾಲೆ ಹಾಗೂ ಶ್ರೀ ರಾಯರ ರಂಗ ಮಂದಿರ ಗಾಂಧಿ ಸರ್ಕಲ್ ಚನ್ನರಾಯಪಟ್ಟಣ ಇವರುಗಳ ವತಿಯಿಂದ ಬಾಲಕಲಾವಿದೆಗೆ ಅಭಿನಂದಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರಾಯರ ರಂಗಮಂದಿರದ ಮುಖ್ಯಸ್ಥರಾದ ಎಂ ಕೆ ಪ್ರಕಾಶ್, ಶ್ರೀಮತಿ ಅನಿತಾ, ಶ್ರೀಮತಿ ಸ್ವಾತಿ, ಸೇರಿದಂತೆ ಇತರರು ಹಾಜರಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0