ಹೊಳಲು ಗ್ರಾಮದಲ್ಲಿ ಶ್ರೀ ವಿನಾಯಕ ಮೂರ್ತಿಗೆ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ

ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ವಿನೂತನವಾಗಿ ವಿವಿಧ ರೀತಿಯ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಯನ್ನು ಕಾಣಬಹುದು.
ಪ್ರತಿದಿನ ವಿಶೇಷ ಪೂಜೆ, ವಿಶೇಷ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವು ನಡೆಯುತ್ತಿದೆ.
ಶ್ರೀಎಚ್ಚಮ್ಮ ನಾಯಕ ಗೆಳೆಯರ ಬಳಗದ ವತಿಯಿಂದ ಸರ್ಕಲ್ ನಲ್ಲಿ ಕೂರಿಸಿರುವ ವಿಘ್ನೇಶ್ವರನಿಗೆ ದಿನಾಂಕ:18.09.2025ನೇ ಗುರುವಾರ ಅಭಿನವ ಭಾರ್ಗವ ವಿಷ್ಣುವರ್ಧನ್ ಹುಟ್ಟು ಹಬ್ಬದ ಪ್ರಯುಕ್ತ ಅನ್ನಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ದಿನಾಂಕ: 20.09.2025 ನೇ
ಶನಿವಾರ ವಿನಾಯಕ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.ಎಂದು ಸಂಘದ ಸದಸ್ಯರಾದ
ರಂಜಿತ್ ಕುಮಾರ್ ತಿಳಿಸಿದ್ದಾರೆ.
ಸರ್.ಎಂ.ವಿಶ್ವೇಶ್ವರಯ್ಯ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಿರುವ ಸ್ಟಾರ್ ಬಾಯ್ಸ್ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ ವಿನಾಯಕನಿಗೆ ದಿನಾಂಕ:15.09.2025 ನೇ ಸೋಮವಾರ ಅನ್ನಸಂತರ್ಪಣೆ, ಹಾಗೂ
ದಿನಾಂಕ:18.09.2025 ನೇ ಗುರುವಾರ ವಿಸರ್ಜಿಸಲಾಗುತ್ತದೆ .ಎಂದು ಬಳಗದ ಸದಸ್ಯರು ತಿಳಿಸಿದ್ದಾರೆ.
ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ ಶ್ರೀ ಬಸವೇಶ್ವರ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ ವಿನಾಯಕನಿಗೆ
ದಿನಾಂಕ 07.09.2025 ನೇ ಭಾನುವಾರ ಅನ್ನ ಸಂತರ್ಪಣೆ,
ಹಾಗೂ ದಿನಾಂಕ:
14-09-2025ನೇ ಭಾನುವಾರ ವಿಸರ್ಜನೆ ಮಾಡಲಾಗಿದೆ ಎಂದು ಬಳಗದ ಸದಸ್ಯರಾದ ಪ್ರಮೋದ್ ಹಾಗೂ ವಿನೋದ್ ರಾಜ್ ತಿಳಿಸಿದ್ದಾರೆ.
ಚಿತ್ತಾನಳ್ಳಿ ಗ್ರಾಮದಲ್ಲಿ ವಕ್ರತುಂಡ ವಿನಾಯಕ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ ವಿನಾಯಕ ಮೂರ್ತಿಗೆ ದಿನಾಂಕ 04.09.2025ನೇ ಗುರುವಾರ ಸಂಜೆ 6 ಗಂಟೆಗೆ ವಿಶೇಷ ಪೂಜೆ ಹಾಗೂ ವಿಗ್ರಹೇಶ್ವರನ ಮೂರ್ತಿಯನ್ನ ಗ್ರಾಮದ ಟ್ರ್ಯಾಕ್ಟರ್ ಮೂಲಕ ಪ್ರಮುಖ ಬೀದಿಗಳಲ್ಲಿ ಡೊಳ್ಳು ನಗರಿ ಸಮೇತ ಹಾಗೂ ಜಾನಪದ ಕಲಾವಿದರಿಂದ
ಮೆರವಣಿಗೆ ಮಾಡಿ ಗ್ರಾಮದ ದೊಡ್ಡ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ
ಎಂದು ಗೆಳೆಯರ ಬಳಗದ ಸದಸ್ಯರಾದ ದರ್ಶನ್ ತಿಳಿಸಿದ್ದಾರೆ.
ಗ್ರಾಮದ ವಾಟರ್ ಟ್ಯಾಂಕ್ (ಶ್ರೀಬಸವೇಶ್ವರ )ಬೀದಿಯಲ್ಲಿ ಪ್ರತಿಷ್ಠಾಪಿಸಿರುವ
ಶ್ರೀ ವಿದ್ಯಾ ವಿನಾಯಕ ಗೆಳೆಯರ ಬಳಗದ ವತಿಯಿಂದ ವಿನಾಯಕಮೂರ್ತಿಯನ್ನು ದಿನಾಂಕ: 13-09-20025ನೇ ಶನಿವಾರ ಸಂಜೆ 6:00ಗೆ ವಿಸರ್ಜನೆ ಮಾಡುತ್ತೇವೆ. ಎಂದು ವಿನಾಯಕ ಗೆಳೆಯರ ಬಳಗದ ಸದಸ್ಯರಾದ ವಿಶ್ವ ತಿಳಿಸಿದ್ದಾರೆ.
ಆದರಿಂದ ಸಾರ್ವಜನಿಕರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
What's Your Reaction?






