ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಕ್ಕೆ ಅಧಿಕೃತವಾಗಿ ಚಾಲನೆ

ಕೆಜಿಎಫ್: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಜಿಲ್ಲಾ ಆಡಳಿತ ಕೋಲಾರ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ 2025 ಸಮೀಕ್ಷೆ ಕೆಜಿಎಫ್ ಪಾರಂಡಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಕಂದಾಯ ಅಧಿಕಾರಿಗಳಿಂದ ಚಾಲನೆ ನೀಡಲಾಯಿತು . ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್ ಎಚ್. ಜೆ. ಭರತ್. ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಹಾಗು ಶೈಕ್ಷಣಿಕ ಸಮೀಕ್ಷೆಯನ್ನು ಹಮ್ಮಿಕೊಂಡಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ತಮ್ಮ ಮನೆಯ ಹತ್ತಿರ ಬಂದು ಶಿಕ್ಷಕರು 60ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ನೀವು ಉತ್ತರಿಸಬೇಕು. ವಾಸ್ತವವಾಗಿ ಏನಿದೆ ಅದನ್ನು ನೀಡಬೇಕು. ಆಗ ಮಾತ್ರ ನಿಮಗೆ ಸಿಗುವ ಸೌಲಭ್ಯಗಳು ದೊರೆಯುತ್ತದೆ ಎಂದರು.
ಸರ್ಕಾರವು ಮಹತ್ವವಾದ ನಿರ್ಧಾರವನ್ನು ತೆಗೆದುಕೊಂಡು ಯಾವ ಸಮುದಾಯ ಹಿಂದುಳಿದಿದೆ ಆ ಸಮುದಾಯವನ್ನು ಗುರುತಿಸಿ ಆರ್ಥಿಕವಾಗಿ ಶಿಕ್ಷಣಿಕವಾಗಿ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
ಕೆಜಿಎಫ್ ತಾಲೂಕಿನಲ್ಲಿ ಒಟ್ಟು 468 ಬ್ಲಾಕ್ ಗಳನ್ನು ಗುರುತಿಸಿದ್ದು, ಒಂದು ಬ್ಲಾಕ್ ನಲ್ಲಿ 150 ಮನೆ ಬರಲಿದ್ದು ಒಬ್ಬ ಶಿಕ್ಷಕರನ್ನು ನೇಮಿಸಿರುತ್ತಾರೆ.
ಸೆಪ್ಟಂಬರ್ 22 ರಿಂದ ಅಕ್ಟೋಬರ್ 7 ರ ತನಕ ಸಮೀಕ್ಷೆ ನಡೆಯುತ್ತದೆ.
ಶಿಕ್ಷಕರಿಗೆ ಸಾರ್ವಜನಿಕರು ನೀಡುವ ಮಾಹಿತಿಯನ್ನು ಅಪ್ ಮೂಲಕ ಸರ್ಕಾರಕ್ಕೆ ಅಪ್ಲೋಡ್ ಮಾಡಲಾಗುತ್ತದೆ. ಸಾರ್ವಜನಿಕರು ನೀಡಿರುವ ತಮ್ಮ ಮಾಹಿತಿಯನ್ನು ತಮ್ಮ ಮೊಬೈಲ್ ಮೂಲಕ ಪರಿಶೀಲಿಸಬಹುದು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತರು. ಆಂಜನೇಯನ ಮಾತನಾಡಿ ಸರ್ಕಾರ ಈ ಸಮೀಕ್ಷೆಯನ್ನು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಈ ಸಮೀಕ್ಷೆ ಕಾರ್ಯ ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಆ ಮೂಲಕ ಸಿಗಬೇಕಾದ ಮೀಸಲಾತಿಯನ್ನು ಪಡೆಯಬಹುದು ಎಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ. ವೆಂಕಟೇಶಪ್ಪ ಮಾತನಾಡಿ ಸರ್ಕಾರ ಏಕಕಾಲದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಪ್ರತಿಯೊಬ್ಬರು. ನಮ್ಮ ಮಾಹಿತಿಯನ್ನು ನೀಡುವ ಮೂಲಕ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅನಿತಾ. ಮಾತನಾಡಿ ಸಮೀಕ್ಷೆಕ್ಕೆ ಶಿಕ್ಷಕರು ತಮ್ಮ ಮನೆ ಬಾಗಿಲಿಗೆ ಬರುವ ಸಂದರ್ಭದಲ್ಲಿ ಶಿಕ್ಷಕರು ಕೇಳುವ ದಾಖಲೆಗಳನ್ನು ನೀಡಿ ವಾಸ್ತವಾಂಶ ಏನಿದೆ ಅದನ್ನು ತಿಳಿಸಿ ಎಂದರು
ಶಿಕ್ಷಕಿ ಶಿಲ್ಪ ಮಾತನಾಡಿ ಮನೆಯ ಮಾಲೀಕರು ನೀಡುವ ಸಮೀಕ್ಷೆ ಅವರು ವೀಕ್ಷಣೆ ಮಾಡಬಹುದು ಎಂದರು. ಸಂದರ್ಭದಲ್ಲಿ ಪಿಡಿಒ ಮಂಜುನಾಥ್. ಬಿಲ್ ಕಲೆಕ್ಟರ್ ಗೋಪಿ. ಶಿಕ್ಷಕರು ಇದ್ದರು.
What's Your Reaction?






