ಈ ಬಾರಿಯ ಗಣೇಶೋತ್ಸವ ಆಚರಣೆಯು ಅರ್ಥಪೂರಕವಾಗಿರಲಿ: ಕನ್ನಡಾಭಿಮಾನಿಗಳಬಳಗ ಮನವಿ

Aug 25, 2025 - 17:17
 0  9
ಈ ಬಾರಿಯ ಗಣೇಶೋತ್ಸವ ಆಚರಣೆಯು ಅರ್ಥಪೂರಕವಾಗಿರಲಿ: ಕನ್ನಡಾಭಿಮಾನಿಗಳಬಳಗ ಮನವಿ

ಕೆಜಿಎಫ್: ಪ್ರತೀವರ್ಷವೂ ಗಣೇಶೋತ್ಸವದ ಆಚರಣೆಯಲ್ಲಿ ಭಾರತ ಸೇರಿದಂತೆ ಪ್ರಪಂಚದದ್ಯಾಂತ ಭಾಗಶಃ ಎಲ್ಲಾ ದೇಶಗಳಲ್ಲಿಯೂ ಸಹ ಗಣೇಶ ಚರ್ತುಥಿಯ ಅಬ್ಬರ ಜೋರಾಗಿಯೇ ಕಾಣಬಹುದಾರಿರುತ್ತದೆ. ಹಾಗೆಯೆ ಮಾರುಕಟ್ಟೆಗಳಲ್ಲಿ ಬಗೆಬಗೆಯ ವಿನೂತನ ಶೈಲಿಗಳಲ್ಲಿ ಗಣೇಶನ ಮೂರ್ತಿಗಳು ಮತ್ತು ಅಲಂಕಾರಿಕ ವಸ್ತುಗಳ ಮಾರಾಟ ಕೂಡ ನೊಡಬಹುದಾಗಿರುತ್ತದೆ. ಪರಿಸರ ಸ್ನೇಹಿ ಗಣೇಶನ ಮೂರ್ತಿಗಳಿಗಿಂತಲೂ ಪಿ.ಒ.ಪಿ ಗಣಪತಿ ಮೂರ್ತಿಗಳು ಬಹಳ ಆಕರ್ಷಣೀಯವಾಗಿದ್ದು ಜನಸಾಮಾನ್ಯರನ್ನು ಆಕರ್ಶಿಸುತ್ತಿದೆ. ಪಿ.ಒ.ಪಿ ಗಣಪತಿ ಮೂರ್ತಿಗಳಿಂದ ಮತ್ತು ಇದಕ್ಕೆ ಬಳಸುವ ಬಣ್ಣಗಳಿಂದಲೂ ಕೂಡ ಕಂಟಕ ತಂದಿಟ್ಟ ಭುತ್ತಿಯಾಗಿದೆ. ಪಿ.ಒ.ಪಿ ಗಣೇಶನ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿದ ನಂತರ ಕರಗದೇ ಬಹಳ ಕಾಲದವರೆ ಹಾಗೇಯೇ ಉಳಿದುಕೊಂಡಿದ್ದು, ನೀರಿನಲ್ಲಿ ಅನಾಥವಾಗಿ ಕಾಣುವುದಲ್ಲದೆ ನಾವು ವಿನಾಯಕನಿಗೆ ಮಾಡಿದ ಅವಮಾನವೇ ಸರಿ. ಅಲ್ಲದೆ ಪಿ.ಒ.ಪಿ ಮೂರ್ತಿಗಳಿಗೆ ಹಚ್ಚಿರುವ ಬಣ್ಣದಿಂದ ಜಲಚರಗಳಿಗೆ ಜೀವ ಕಂಟಕವಾಗಿರುವುದು ನಾವೇಲ್ಲೂರು ಈಗ ನೋಡಬಹುದಾಗಿರುತ್ತದೆ.
ಮಣ್ಣಿನ ಗಣಪ: ನಮ್ಮ ಸಂಸ್ಕೃತಿಯ ಪ್ರತೀಕ :
ಗಣೇಶ ಪರಿಸರದಿಂದಲೇ ಹುಟ್ಟಿದ ದೇವರು ಹಾಗಾಗಿ ಮಣ್ಣಿನ ಮೂರ್ತಿಗಳನ್ನು ಪೂಜಿಸುವುದು ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದ ಸಂಪ್ರದಾಯ. ಆದರೆ ಇತ್ತೀಚಿನ ವರ್ಷಗಳಲ್ಲಿ, ಸುಲಭ ಲಭ್ಯತೆ ಮತ್ತು ಆಕರ್ಷಕ ವಿನ್ಯಾಸಗಳ ಕಾರಣಕ್ಕೆ ಪಿ.ಓ.ಪಿ ಮೂರ್ತಿಗಳ ಬಳಕೆ ಹೆಚ್ಚಾಗಿದೆ. ಇವು ನೀರಿನಲ್ಲಿ ಕರಗುವುದಿಲ್ಲ. ಅದಕ್ಕೆ ಬಳಸಿದ ರಾಸಾಯನಿಕ ಬಣ್ಣಗಳು ಜಲ ಮೂಲಗಳನ್ನು ವಿಷಕಾರಿಯಾಗಿ ಮಾಡುತ್ತಿವೆ. ಇದರಿಂದಾಗಿ ಜಲಚರಗಳಾದ ಮೀನುಗಳು, ಕಪ್ಪೆಗಳು ಮತ್ತು ಇತರೆ ಜೀವಿಗಳ ಸಾವಿಗೆ ಕಾರಣವಾಗುತ್ತಿದೆ.
ಪಿ.ಒ.ಪಿ ಮೂರ್ತಿಗಳು ಕಂಟಕ :
ಕ್ಯಾಲ್ಸಿಯಂ ಸಲ್ವೇಟ್ ಹೆಮಿಹೈಡ್ರೆಟ್ ಇರುತ್ತದೆ, ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನಿಷಿಯಂ ಸೇರಿದಂತೆ ಹಲವು ಅಪಾಯಕಾರಿ ಅಂಶಗಳು ಅಡಗಿವೆ. ಜೊತೆಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲದಂತಹ ಭಾರಲೋಹಗಳನ್ನು ಹೊಂದಿದ ರಾಸಾಯನಿಕ ಬಣ್ಣಗಳನ್ನು ಲೇಪಿಸಲಾಗುತ್ತದೆ. ಇವು ಜಲಮೂಲಗಳನ್ನು ಸೇರಿ, ಜಲಚರಗಳು ಸೇರಿದಂತೆ ಜನರ ಆರೋಗ್ಯದ ಮೇಲೆಯು ಸಹ ಗಂಭೀರ ಪರಿಣಾಮ ಬೀರುತ್ತವೆ.
ಬದ್ಧಿವಂತ ನಾಗರಿಕರಾಗೋಣ :
ಹಬ್ಬದ ಸಂಭ್ರಮದಲ್ಲಿ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆದ್ದರಿಂದ, ಜವಾಬ್ದಾರಿಯುತ ವಿಧ್ಯಾವಂತ ನಾಗರಿಕರಾದ ನಾವು ಪ್ಲಾಸ್ಟಿಕ್ ನಿಂದ ತಯಾರಿಸಿದ ಅಲಂಕಾರಿಕ ವಸ್ತುಗಳನ್ನು ಖರೀದಿಸದೇ ಪರಿಸರ ಸ್ನೇಹಿಯಾಗಿ ಗಣೇಶ ಹಬ್ಬವನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛವಾದ ಪರಿಸರವನ್ನು ಉಳಿಸಿಕೊಡೊಣ. ಸನಾತನ ಧರ್ಮವು ಪ್ರಕೃತಿಯನ್ನು ಆರಾಧಿಸುತ್ತಿರುವುದು ನಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ ಹಾಗಾಗಿ ಸನಾತನ ಧರ್ಮಿಗಳಾದ ನಾವುಗಳು ಈ ಬಾರಿಯ ಗಣೇಶ ಚತುರ್ಥಿಯನ್ನು ಪ್ರಕೃತಿಗೆ ಪೂರಕ ಎಂಬಂತೆ ಆಚರಿಸೋಣ. ನಾವೆಲ್ಲರೂ ಒಗ್ಗೂಡಿ ಪ್ರಕೃತಿಗೆ ಮಾರಕ ಇರುವ ಸಾಮಗ್ರಿಗಳು ಅಂದರೆ ಪಿ.ಓ.ಪಿ ನಿಂದ ಮಾಡಿರುವ ಮೂರ್ತಿ ಮತ್ತು ಪ್ಲಾಸ್ಟಿಕ್ ನಿಂದ ತಯಾರಿಸಿದ ಹೂಗಳು  ಮತ್ತು ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಬಳಸದೆ ನೈಸರ್ಗಿಕವಾಗಿ ದೊರೆಯುವ ಸಾಮಗ್ರಿಗಳನ್ನು ಬಳಸಿಕೊಂಡು ನಮ್ಮ ಹಬ್ಬವನ್ನು ಅದ್ದೂರಿಯಾಗಿ ಆಚರಿಸೋಣ ಎಂದು ವಿನಂತಿಸುತ್ತಾ. ಜಿಲ್ಲಾಧಿಕಾರಿಗಳು ಈ ಬಗ್ಗೆ ನಗರ ಮತ್ತು ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿನ ಅಧಿಕಾರಿಗಳಿಗೆ ಆದೇಶಿಸಿ ವರ್ತಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಮತ್ತು ಪಿ.ಓ.ಪಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡದೆ ಹಾಗೂ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಸಹ ಬ್ಯಾನ್ ಮಾಡವುದು ಒಳಿತು.

ಕೇವಲ ಗಣೇಶನ ಮೂರ್ತಿಗಳಲ್ಲದೇನೇ ಪಿ.ಒ.ಪಿ ಅಲಂಕಾರಿ ವಸ್ತುಗಳನ್ನು ಮತ್ತು ಪಿ.ಒ.ಪಿ ಬೊಂಬೆಗಳ ತಯಾರಿಕೆ ಘಟಕಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತಿ ಕ್ರಮ ವಹಿಸಿ ಸದರಿ ಘಕಟಗಳನ್ನು ಬ್ಯಾನ್ ಮಾಡವುದು ಸೂಕ್ತ . ಈ ಬಾರಿ ಗಣೇಶ ಹಬ್ಬವನ್ನು ಸೈಸರ್ಗೀಯ ವಸ್ತುಗಳನ್ನು ಬಳಸಿಕೊಂಡು ಅಧ್ಧೂರಿಯಾಗಿ ಆಚರಣೆ ಮಾಡೋಣ

ಕನ್ನಡಾಭಿಮಾನಿಗಳಬಳಗದ ಅಧ್ಯಕ್ಷರು-ಪ್ರದೀಪ್ ಸಿಂಗ್ ರಾಣಾ. ಕೆ, ಕಾರ್ಯದರ್ಶಿ- ಸುಬ್ರಮಣಿ. ಏನ್. ನಾರಾಯಣಸ್ವಾಮಿ, ಎಂ, ಅಧ್ಯಕ್ಷರು, ಮಾಲೂರು. ಗಜೇಂದ್ರನಾಯಕ್, ವಿ.ಸಿ, ಅಧ್ಯಕ್ಷರು, ಟೇಕಲ್. ತ್ರಿವೇಣು, ವೈ.ಟಿ, ಅಧ್ಯಕ್ಷರು, ಬಂಗಾರಪೇಟೆ.  ಸಾಗರ್, ಎನ್, ಅಧ್ಯಕ್ಷರು, ಕೋಲಾರ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456