ಕೊನೆಗೂ ಹುಲ್ಲು ಮಾರುಕಟ್ಟೆ ಸಮಸ್ಯೆಯನ್ನು ಬಗೆಹರಿಸಿದ ಶಾಸಕಿ ರೂಪಕಲಾ ಶಶಿಧರ್

ಕೆಜಿಎಫ್: ನಗರವನ್ನು ಮಾದರಿ ನಗರವನ್ನಾಗಿ ಮಾಡಲು ನಗರಸಭೆ ಅಧಿಕಾರಿಗಳು ಪಣತೊಟ್ಟಿದ್ದು, ಇದರ ಹಿನ್ನೆಲೆಯಲ್ಲಿ ನಗರಸಭೆ ಸೇರಿದ ಇತಿಹಾಸದ ಹುಲ್ಲು ಮಾರುಕಟ್ಟೆ ತೆರವು ಕಾರ್ಯಾಚರಣೆ ಆರಂಭವಾಗಿತ್ತು.
ಅಲ್ಲಿನ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ನಗರಸಭೆ ವತಿಯಿಂದ ನಾಲ್ಕು ದಿನಗಳಿಂದ ತೆರೆವು ಕಾರ್ಯಾಚರಣೆ ನಡೆಸುತ್ತಿತ್ತು. ಇದರ ಬಗ್ಗೆ ಹಲವು ವಿರೋಧಗಳು ವ್ಯಕ್ತವಾಗಿತ್ತು. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಶಾಸಕಿ ರೂಪಕಲಾ ರವರು ಸ್ಥಳಕ್ಕೆ ಆಗಮಿಸಿ.
ಅಂಗಡಿ ಮಾಲೀಕರೊಂದಿಗೆ ಚರ್ಚಿಸಿ. ಯಾವುದೇ ಕಾರಣಕ್ಕೂ ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ. ನಗರವನ್ನು ಅಭಿವೃದ್ಧಿಪಡಿಸಬೇಕು. ಇಲ್ಲಿ ಕೈಗಾರಿಕೆಗಳು ಹಾಗೂ ಕೇಂದ್ರ ಪೊಲೀಸ್ ಮೀಸಲು ಪಡೆ ಕೇಂದ್ರ ಕಚೇರಿ ಅತಿ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುತ್ತದೆ. ಆಗ ಸುಮಾರು 20,000 ಕ್ಕೆ ಹೆಚ್ಚು ಕಾರ್ಮಿಕರು ಆಗಮಿಸುತ್ತಾರೆ.
ಅವರಿಗೆ ನಾವು ಒಳ್ಳೆ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಈ ಹಿನ್ನೆಲೆಯಲ್ಲಿ ತಾವುಗಳು ಸಹ ನನ್ನ ಜೊತೆಯಲ್ಲಿ ಕೈಜೋಡಿಸಬೇಕು. ಆಗ ಸುಂದರವಾದ ಮಾರುಕಟ್ಟೆ ನಿರ್ಮಾಣ ಮಾಡಿ. ಸೈಕಲ್ ಸ್ಟ್ಯಾಂಡ್ ಹಾಗೂ ಕಾರ್ ಪಾರ್ಕಿಂಗ್ ಸುಂದರವಾದ ರಸ್ತೆ ಹೈಟೆಕ್ ಶೌಚಾಲಯ ನಿರ್ಮಾಣ ವ್ಯವಸ್ಥೆ ಕಲ್ಪಿಸುತ್ತೇವೆ.
ಇದರಿಂದ ಅಂಗಡಿ ಮಾಲೀಕರಿಗೆ ವ್ಯಾಪಾರ ವೃದ್ಧಿಯಾಗುತ್ತದೆ. ಇದೇ ನನ್ನ ಮುಖ್ಯ ಉದ್ದೇಶ. ದಯಮಾಡಿ ತಾವುಗಳು ಅಂಗಡಿಗಳನ್ನು ಬಿಟ್ಟುಕೊಟ್ಟು. ಸಹಕಾರ ನೀಡಬೇಕು ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇಲ್ಲಿ ಏನು 54 ಅಂಗಡಿ ಇದೆ ಅವರಿಗೆ ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸುವ ಕಟ್ಟಡದಲ್ಲಿ ನಿಮಗೆ ಮೊದಲ ಆದ್ಯತೆ ನೀಡುತ್ತೇನೆ ನಗರಸಭೆ ವತಿಯಿಂದ ತಮಗೆ ಪತ್ರದ ಬರವಣಿಗೆಯಲ್ಲಿ ಬರೆದುಕೊಟ್ಟು ಗ್ಯಾರೆಂಟಿ ಕೊಡುತ್ತೇವೆ ಎಂದರು.
ನಗರ ಅಭಿವೃದ್ಧಿಯನ್ನು ಕೆಲವರು ಸಹಿತದೆ ನಿಮ್ಮಂತ ಅಮಾಯಕರನ್ನು ಬಲಿಪಶು ಮಾಡುತ್ತಿದ್ದಾರೆ. ನೀವು ಯಾರನ್ನು ನಂಬಿಕೊಂಡು ಅವರ ಹಿಂದೆಗಡೆ ಹೋಗಬೇಡಿ ಯಾವುದೇ ಕಾರಣಕ್ಕೂ ಇಲ್ಲಿರುವ ಹತ್ತು ಸಾವಿರ ವ್ಯಾಪಾರಸ್ಥರ ಕುಟುಂಬಗಳಿಗೆ ನಾನು ಅನ್ಯಾಯ ಮಾಡುವುದಿಲ್ಲ ಧೈರ್ಯವಾಗಿರಿ ಎಂದು ಆಶ್ವಾಸನೆ ನೀಡಿದರು.
ಇದಕ್ಕೆ ಅಲ್ಲಿ ಸೇರಿದ ವರ್ತಕರು ತಾವು ಯಾವ ಕಮ ಕೈಗೊಂಡರು ಅದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಆಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಂಗಡಿ ಮಾಲೀಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡಬಾರದು ಆ ರೀತಿ ನನಗೆ ಮಾಹಿತಿ ಬಂದರೆ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ವರ್ಗಾವಣೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ತಾವುಗಳು ಮಾಡುವ ತಪ್ಪಿಗೆ ಅಂಗಡಿ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು. ವಲ್ಲಳ್ಳ ಮುನಿಸ್ವಾಮಿ.ಪೌರಾಯುಕ್ತರು ಆಂಜನೇಯಲು. ಡಿವೈಎಸ್ಪಿ. ಲಕ್ಷ್ಮಯ್ಯ. ನಗರಸಭೆ ಅಧಿಕಾರಿಗಳು ಶಶಿಕುಮಾರ್. ಜಯರಾಮ್. ಯಾಸಿನ್ ಬಾಯ್. ಸರ್ಕಲ್ ಇನ್ಸ್ಪೆಕ್ಟರ್. ನವೀನ್ ರೆಡ್ಡಿ. ಮೊದಲಾದವರಿದ್ದರು.
What's Your Reaction?






