ಕ್ಯಾಸಂಬಳ್ಳಿ ಕೃಷಿ ರೈತ ಉತ್ಪಾದಕ ಕಂಪನಿ ನಿಯಮಿತ ವತಿಯಿಂದ ವಾರ್ಷಿಕ ಸರ್ವ ಸದಸ್ಯರ ಸಭೆ

ಕೆಜಿಎಫ್: ತಾಲೂಕಿನ ಕ್ಯಾಸಂಬಳ್ಳಿ ಕೃಷಿ ರೈತ ಉತ್ಪಾದಕ ಕಂಪನಿ ನಿಯಮಿತ ವತಿಯಿಂದ 2024 -25 ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ತಾತಿರೆಡ್ಡಿ ಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘದ ಮುಖಂಡರು ಟಿ.ಜೆ. ರಾಮಕೃಷ್ಣ ರೆಡ್ಡಿ. ನಮ್ಮ ಕೃಷಿ ಉತ್ಪಾದಕ ಸಂಘ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಒಟ್ಟು 1110 ಶೇರು ದಾರರನ್ನು ಸಂಘ ಹೊಂದಿದೆ. 69 ಹಳ್ಳಿಗಳಿಂದ ರೈತರ ಭಾಗವಹಿಸಿದ್ದಾರೆ. ಕೃಷಿ ಉತ್ಪಾದಕ ಸಂಘದ ವತಿಯಿಂದ 510 ಜನರಿಗೆ ಅನುಕೂಲವಾಗಿದೆ.
ಈಗ ನೂತನವಾಗಿ ಹಸುಗಳಿಗೆ ಮೇವು ಸಹ ಉತ್ಪಾದನೆ ಮಾಡಿ ನಮ್ಮ ಸಂಘದ ರೈತರಿಗೆ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಅದೇ ರೀತಿ ತರಕಾರಿಯನ್ನು ಸಂಸ್ಕರಣ ಕೇಂದ್ರವನ್ನು ನಿರ್ಮಿಸಿದ್ದು, ಇದನ್ನು ಸಹ ರೈತರು ಬಳಕೆ ಮಾಡಿಕೊಳ್ಳಬಹುದು. ಇದರಿಂದ ಬರುವ ವರಮಾನ ನಮ್ಮ ಸಂಘ ಏಳ್ಗೆಗೆ ಪೂರಕವಾಗಲಿದೆ ಎಂದರು.
ಕೃಷಿ ಇಲಾಖೆ ಅಧಿಕಾರಿ ನಾರಾಯಣ ರೆಡ್ಡಿ ಮಾತನಾಡಿ ರೈತರು ಕೃಷಿ ಚಟುವಟಿಕೆ ಮಾಡುವಾಗ ಮಣ್ಣು ಪರೀಕ್ಷೆ ಮಾಡಿಕೊಳ್ಳಿ ಅದರಿಂದ ಯಾವ ಗೊಬ್ಬರ ಹಾಕಬೇಕೆಂದು ತಿಳಿಯುತ್ತದೆ. ಅದೇ ರೀತಿಯಾಗಿ ರೈತರು ಗೊಬ್ಬರವನ್ನು ಹಾಗೂ ಕೀಟನಾಶಗಳನ್ನು ಖರೀದಿ ಮಾಡುವಾಗ ತಪ್ಪದೆ ಅಂಗಡಿ ಮಾಲೀಕರ ಬಳಿ ರಸೀದಿ ಪಡೆಯಬೇಕು.
ಆಗ ನಿಮಗೆ ಏನೇ ಸಮಸ್ಯೆ ಇದ್ದರೂ ನಾವು ಅಂಗಡಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಹಕಾರ ಆಗುತ್ತದೆ ಎಂದರು.
ಯೂರಿಯಾ ಅಭಾವ ಇದೆ ಎಂದು ರೈತರು ಒಬ್ಬರು ಎರಡು ಮೂರು ಮೂಟೆ ತೆಗೆದುಕೊಂಡು ಹೋಗುತ್ತಾರೆ. ಈ ಮನೋಭಾವ ಬಿಡಬೇಕು. ಸರ್ಕಾರದಿಂದ ಯೂರಿಯಾ ಅಭಾವ ಎಂದಿಗೂ ಆಗುವುದಿಲ್ಲ. ರೈತರಿಗೆ ಏನೇ ಸಮಸ್ಯೆ ಇದ್ದರೂ ನನ್ನನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದರು. ಇದೆ ಸಂದರ್ಭದಲ್ಲಿ ಎಸ್ ಎಂ ಸೇಹಲ್ ಗಲ್ ಫೌಂಡೇಶನ್ ಅಧಿಕಾರಿ .ವಿಶ್ವ. ಸಿಇಓ. ಸೌಂದರ್ಯ. ಕ್ಯಾಸಂಬಳ್ಳಿ ಕೃಷಿ ರೈತ ಉತ್ಪನ್ನ ಸಂಘದ ಉಪಾಧ್ಯಕ್ಷರು. ಕೆ.ರಮೇಶ್. ನಿರ್ದೇಶಕರುಗಳು. ಸಿದ್ದೇಗೌಡ. ಶ್ರೀನಿವಾಸ ರೆಡ್ಡಿ. ಮುನಿರಾಜ್. ಭಾಸ್ಕರ್ ನಾಯ್ಡು. ಶ್ರೀರಾಮುಲು. ಬಲರಾಮ್ ರೆಡ್ಡಿ. ವೆಂಕಟರೆಡ್ಡಿ. ಮಹಿಳೆಯರು. ಶಕುಂತಲಮ್ಮ ಮೊದಲಾದವರು ಇದ್ದರು
What's Your Reaction?






