ನೂತನ ದೇವಸ್ಥಾನದ ಜೀರ್ಣೋದ್ಧಾರಕ್ಕೆ 2,00,000ರೂ ಸಹಾಯ ಹಸ್ತ
ನೂತನ ದೇವಸ್ಥಾನದ ಜೀರ್ಣೋದ್ಧಾರಕ್ಕೆ 2,00,000ರೂ ಸಹಾಯ ಹಸ್ತ

ಹೊಸಹಳ್ಳಿ ತಾಲೂಕಿನ ಬುದನೂರು ವಲಯದ ಕನ್ನಲ್ಲಿ ಕಾರ್ಯಕ್ಷೇತ್ರದ ಶ್ರೀ ಮೇರುಪಟಲದಮ್ಮ ಮತ್ತು ಕಣಿ ರಕ್ಕಸಮ್ಮ ನೂತನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ 2,00,000 ಮೊತ್ತದ ಡಿ.ಡಿ. ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಡ್ಯ ಜಿಲ್ಲೆಯ ಹೊಸಹಳ್ಳಿ ತಾಲೂಕು ಯೋಜನಾಧಿಕಾರಿ ರವಿ ರವರು ದೇವಸ್ಥಾನದ ಸಮಿತಿಯವರಿಗೆ ಹಸ್ತಾoತರ ಮಾಡಿದರು. ಇದೆ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷರು ಭೈರವ ದೇವಸ್ಥಾನಕ್ಕೆ ಬಹುದೊಡ್ಡ ಅನುದಾನ ನೀಡಿದ ಪರಮ ಪೂಜ್ಯರಿಗೆ ದೇವಸ್ಥಾನದ ಸಮಿತಿಯವರು ಹಾಗೂ ಊರಿನವರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೊಸಹಳ್ಳಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ರವಿ, ದೇವಸ್ಥಾನದ ಆಡಳಿತ ಮಂಡಳಿಯವರು, ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಊರಿನ ಮುಖಂಡರು ವಕೀಲರು ಕೆಂಪಯ್ಯ, ವಲಯ ಮೇಲ್ವಿಚಾರಕರು ಅಶೋಕ್, ಸೇವಾ ಪ್ರತಿನಿಧಿ, ಸ್ವಸಹಾಯ ಮತ್ತು ಪ್ರಗತಿ ಬಂದು ಸಂಘದ ಸದಸ್ಯರು ಉಪಸ್ಥಿತರಿದ್ದರು.