ಮಾರ್ಗೋನಹಳ್ಳಿ ಗ್ರಾಮಸ್ಥರಿಂದ ಪೋಲೀಸ್ ಠಾಣೆ ಎದುರು ಪ್ರತಿಭಟನೆ

ಗ್ರಾಮಸ್ಥರ ಮೇಲೆ ಪೊಲೀಸರಿಂದ ಅಕ್ರಮ FIR ಹಿನ್ನಲೆ.ಪೊಲೀಸರ ವಿರುದ್ದ ಸಿಡಿದೆದ್ದ ಗ್ರಾಮರಿಂದ ಠಾಣೆಗೆ ಮುತ್ತಿಗೆ.ಪೊಲೀಸ್ ಠಾಣೆ ಮುಂದೆ ಅನಿರ್ದಿಷ್ಟಾವಧಿ ಧರಣಿ ಕುಳಿತ ಗ್ರಾಮಸ್ಥರು.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ಘಟನೆ.
ಕಿಕ್ಕೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಠಾಣೆ ಮುಂದೆ ಧರಣಿ ಕುಳಿತ ಮಾರ್ಗೋನಹಳ್ಳಿ ಗ್ರಾಮಸ್ಥರು.ಇತ್ತೀಚೆಗೆ ಗ್ರಾಮದ ಸರ್ಕಾರಿ ಗೋಮಾಳ ಜಾಗದ ವಿರುದ್ದ ಗ್ರಾಮಸ್ಥರು ಹೋರಾಟ ಮಾಡಿದ್ರು.
90 ಎಕರೆ ಸರ್ಕಾರಿ ಗೋಮಾಳದ ಜಾಗವನ್ನು ಪೊಲೀಸ್ ಅಧಿಕಾರಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ರು.ಇದರ ವಿರುದ್ಧ ಇಡೀ ಗ್ರಾಮದ ಜನರು ಒಗ್ಗಟ್ಟಾಗಿ ಪ್ರತಿಭಟನೆ ಮಾಡಿದ್ರು.ಜನರ ಪ್ರತಿಭಟನೆ ಹತ್ತಿಕ್ಕಲು ಪೊಲೀಸ್ ಅಧಿಕಾರಿ ತನ್ನ ಪ್ರಭಾವ ಬಳಿಸಿ ಗ್ರಾಮದ 32 ಜನರ ಮೇಲೆ FIR ಹಾಕಿಸಿದ್ದ.FIR ಹಾಕಿದ್ದರ ವಿರುದ್ದ ತಿರುಗಿ ಬಿದ್ದ ಗ್ರಾಮಸ್ಥರಿಗೆ ಶಾಸಕರ ಸಮ್ಕುಖದಲ್ಲಿ ಸಂಧಾನ ಮಾಡಿ B ರಿಪೋರ್ಟ್ ಹಾಕುವ ಬಗ್ಗೆ DYSP ಭರವಸೆ.ಆದ್ರೆ ಈ ಬಗ್ಗೆ ಇದುವರೆಗೂ ಪ್ರಕರಣ ಬಿ ರಿಪೋರ್ಟ್ ಹಾಕದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು..ಇಂದು ಇಡೀ ಗ್ರಾಮದ ಜನರು ಕಿಕ್ಕೇರಿಗೆ ಬಂದು ಪ್ರತಿಭಟನೆ ನಡೆಸಿ ಠಾಣೆ ಮುಂದೆ ಮೌನ ಅನಿರ್ದಿಷ್ಟಾವಧಿ ಧರಣಿ.
What's Your Reaction?






