ಶ್ರೀ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಸಂಪನ್ನಗೊಂಡ ಎರಡು ದಿನದ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ 

ಶ್ರೀ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಸಂಪನ್ನಗೊಂಡ ಎರಡು ದಿನದ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ 

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಮತ್ತು ಮೈಸೂರು ನಾಡ ದೇವತೆ ಶ್ರೀ ಚಾಮುಂಡೇಶ್ವರಿ  ದೇವಸ್ಥಾನ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ ಏಪ್ರಿಲ್ 20 ಮತ್ತು 21ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6:00  ವರೆಗೆ ನಡೆದ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಭಾರತ ದೇಶದ ಚೆನ್ನೈ, ಆಂಧ್ರ ,ಪ್ರದೇಶ್, ಒರಿಸ್ಸಾ, ಗುಜರಾತ್ ,ಬಿಹಾರ್ ,ಉತ್ತರ ಪ್ರದೇಶ್ ಸೇರಿದಂತೆ ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ಭರತನಾಟ್ಯ, ಕುಚುಪುಡಿ, ಓಡಿಸಿ ,ಕಥಕ್ ,ಸೇರಿದಂತೆ ವಿವಿಧ ನೃತ್ಯಗಳನ್ನು ಪ್ರದರ್ಶನ ನೀಡಿ ದೇವಾಲಯಕ್ಕೆ ಬಂದಿದ್ದ ಸಾವಿರಾರು ಭಕ್ತಾದಿಗಳ ಮನಸೆಳೆದರು,  
ನಿರಂತರವಾಗಿ ಎರಡು ದಿನಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ನೃತ್ಯೋತ್ಸವ ಕಾರ್ಯಕ್ರಮ ಜನ ಮೆಚ್ಚುಗೆ ಪಾತ್ರವಾಯಿತು.
ಭಾರತೀಯ ಸಂಸ್ಕೃತಿಯ ಕಲೆಯಲ್ಲಿ ಶಾಸ್ತ್ರೀಯ ನೃತ್ಯಕ್ಕೆ ವಿಶೇಷ ಸ್ಥಾನಮಾನವಿದೆ ಎಂದರು. ಕಾರ್ಯಕ್ರಮಕ್ಕೆ ಬಂದಂತಹ ಹಲವಾರು ಗುರುಗಳು ತಮ್ಮ ಪ್ರದರ್ಶನವನ್ನು ಮಾಡುವುದರ ಮೂಲಕ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯು ಪ್ರಸಿದ್ಧ ದೇವಾಲಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕಲಿಯುವ ಕಲಿಯುತ್ತಿರುವ ಹಲವಾರು ಗುರುಗಳಿಗೆ ಸೇರಿದಂತೆ ಕಲಿತಂತಹ ನೃತ್ಯ ಪ್ರದರ್ಶನವನ್ನು ಭಗವಂತನ ಮುಂದೆ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿ ಕೊಡುತ್ತಿರುವುದು ಶ್ಲಾಘನೀಯವಾದದ್ದು  ಎಂದರು.ಕೊಯಂಬತ್ತೂರ್ ಹಿರಿಯ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಮೀರಾಬಾಯ್ ಮಾತನಾಡಿ ನೃತ್ಯ ಹಬ್ಬವನ್ನು ನಿರಂತರವಾಗಿ ಮಾಡುವುದರ ಮೂಲಕ ಹಲವಾರು ಪುಟ್ಟ ಪುಟ್ಟ ಮಕ್ಕಳು ಹಾಗೂ ಯುವ ನೃತ್ಯ ಪಟುಗಳನ್ನು ಬೆಳೆಸುವ ಜವಾಬ್ದಾರಿ ನಿಮ್ಮದಾಗಲಿ ಎಂದು ಶುಭ ಹಾರೈಸಿದರು, ಆಯೋಜನ ಕಾರ್ಯದರ್ಶಿ ಡಾ. ಸ್ವಾತಿ ಪಿ ಭಾರದ್ವಾಜ್  ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು, ಸುಪ್ರಸಿದ್ಧ ದೇವಾಲಯಗಳಲ್ಲಿ ನೃತ್ಯ ಮಾಡುವ ಅವಕಾಶವು ಎಲ್ಲಾ ಕಲಾವಿದರಿಗೆ ಸಿಗುವುದಿಲ್ಲ ಆದರೆ ಡಾ. ಸ್ವಾತಿ ರವರು ಸಾವಿರಾರು ಕಲಾವಿದರಿಗೆ ಭಗವಂತನ ಸನ್ನಿಧಿಯಲ್ಲಿ ಕಲಾ ಪ್ರದರ್ಶನವನ್ನು ನೀಡಲು ಅವಕಾಶ ಕಲ್ಪಿಸಿ ಕೊಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
 61ನೇ ರಾಷ್ಟ್ರೀಯ ನೃತ್ಯೋತ್ಸವದಲ್ಲಿ  ಕೊಯಂಬತ್ತೂರ್, ಚೆನ್ನೈ, ಬೆಂಗಳೂರು, ವಿಜಯವಾಡ, ಕೇರಳ, ಒಡಿಸ್ಸಾ ರಾಜ್ಯಗಳಿಂದ ಆಗಮಿಸಿದ ಹಿರಿಯ ನೃತ್ಯ ಗುರುಗಳಿಗೆ ಅಕಾಡೆಮಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು, ಕೇರಳ 50 ವರ್ಷ ಹಿರಿಯ ವೈದ್ಯಾಧಿಕಾರಿ ಡಾ.ಭದ್ರಾ ನಯನ್ ರವರ ನೃತ್ಯ ಪ್ರದರ್ಶನ ಪ್ರೆಕ್ಷಕರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಆಯೋಜನ ಕಾರ್ಯದರ್ಶಿ ಸ್ವಾತಿ ಪಿ ಭಾರದ್ವಾಜ್,ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಕೆ ಆರ್ ಅನಿತಾ ಪ್ರಕಾಶ್, ಸಮಾಜ ಸೇವಕರಾದ ಲಕ್ಷ್ಮಶ್ ಸೇರಿದಂತೆ ಇತರರು ಹಾಜರಿದ್ದರು.