ಸಂಜೆ ರಂಗಿನ ಆರತಿ

ಸೂರ್ಯಾಸ್ತ ವೀಕ್ಷಣೆಗೆ ಬಹುದೂರ ಹೋಗಬೇಕಿಲ್ಲ,
ಮಂಡ್ಯದಿಂದ ಕೊಳ್ಳೇಗಾಲಕ್ಕೆ ಹೋಗುವ ಮಾರ್ಗ ಸಂಪರ್ಕಿಸುವ ಸತ್ಯಗಾಲ
(ಹೊಸ ಸೇತುವೆ) ಸೇತುವೆಯಲ್ಲಿ ನಿಂತರೆ ಸಂಜೆಯ ಗೋಧೂಳಿ ಸಮಯದಲ್ಲಿ ಜುಳು ಜುಳು ಹರಿಯುವ ಕಾವೇರಿಯ ನಿನಾದದ ನಡುವೆ ಸೂರ್ಯ ಅಸ್ತಮಿಸುವ ಪ್ರತಿಕ್ಷಣ ಬಣ್ಣ ಬಣ್ಣದ
ರಂಗಿನ ಚಿತ್ತಾರ ವೀಕ್ಷಕರನ್ನು ಹಿಡಿದು ನಿಲ್ಲಿಸುತ್ತದೆ. ಆ ಬಣ್ಣದ ಸೊಬಗು ಕಿತ್ತಳೆ ಆಕಾರದಲ್ಲಿ ಸೂರ್ಯ ಅಸ್ತಮಿಸುವಾಗಿನ ಸೌಂದರ್ಯವನ್ನು ನೋಡಿಯೇ ಅನುಭವಿಸಬೇಕು.
ಚಿತ್ರವರದಿ: ಕೆ.ಪಿ.ಕುಮಾರ್, ಹೊಳಲು..
What's Your Reaction?






