ಸರ್ಕಾರದಿಂದ ಪರಿಹಾರ ಪಡೆಯಲು ಭೂಮಾಲೀಕರು ಮೂಲ ದಾಖಲೆಗಳು ಒದಗಿಸಬೇಕು-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

Jul 25, 2025 - 16:56
 0  4
ಸರ್ಕಾರದಿಂದ ಪರಿಹಾರ ಪಡೆಯಲು ಭೂಮಾಲೀಕರು ಮೂಲ ದಾಖಲೆಗಳು ಒದಗಿಸಬೇಕು-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಭಾಗ್ಯನಗರ: ಕೊಂಡರೆಡ್ಡಿಪಲ್ಲಿ ಹಾಗೂ ಹೊಸಹುಡ್ಯ ಗ್ರಾಮಗಳ 625 -ಎಕರೆಯಲ್ಲಿ 429 ಎಕರೆ ಖರಾಬು ಹಾಗೂ ಉಳಿದ 197 ಎಕರೆ ಪ್ರದೇಶದ ಜಮೀನನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಭೂಸ್ವಾಧೀನ ಪಡಿಸಿಕೊಂಡಿದ್ದು, ಪರಿಹಾರ ಪಡೆಯಲು ಭೂಮಾಲೀಕರು ಮೂಲ ದಾಖಲೆ ಒದಗಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕೈಗಾರಿಕಾ ಪಂಚಾಯಿತಿ ತಹಶೀಲ್ದಾರ್, ಪ್ರದೇಶಾಭಿವೃದ್ದಿ ಅಧಿಕಾರಿಗಳ ಮತ್ತು  ರೈತರ ಜೊತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ಕರ್ಣಾಟಕ ಕೈಗಾರಿಕಾ ಪ್ರದೇ ಶಾಭಿವೃದ್ಧಿ ಕಾಯ್ದೆ 1916 ಅಡಿಯಲ್ಲಿ ಸರ್ಕಾರದ ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡಿದ್ದು ರೈತರು ಸಮಗ್ರ ದಾಖಲೆಗಳು ನೀಡಿ ಸಹಕರಿಸಬೇಕು ಹಾಗೂ ಜಿಮೀನು ನೀಡುವ ರೈತರು ಹಣಕ್ಕಿಂತ ಬೇರೆ ಜಮೀನು ಪಡೆದುಕೊಳ್ಳುವುದು ಉತ್ತಮ,ಹೊಸಹುಡ್ಯ ಗ್ರಾಮದ ಜಮೀನಿಗೆ ಎಕರೆಗೆ ₹70 ಲಕ್ಷ, ರಾಷ್ಟ್ರೀಯ ಹೆದ್ದಾರಿಗೆ మాందిమాండంకి 100 ವ್ಯಾಪ್ತಿಯೊಳಗೆ ಇರುವ ಜಮೀನುಗಳಿಗೆ ಎಕರೆಗೆ 21 ಕೋಟಿಯಂತೆ ಹಾಗೂ ಭೂ. ಪರಿವರ್ತನೆ ಆಗಿರುವ ಜಮೀನುಗಳಿಗೆ ಹೆಚ್ಚುವರಿಯಾಗಿ ₹5 ಲಕ್ಷ ಪರಿಹಾರ ಪಾವತಿಸಲು ಮಾಡಲಾಗಿದೆ ಎಂದರು.

ಭೂಮಾಲೀಕರು ಪರಿಹಾರ ಒಪ್ಪಂದ ದರದಲ್ಲಿ ಪಡೆಯಲು ಒಪ್ಪಿಗೆ ಇದ್ದಲ್ಲಿ, ಒಪ್ಪಿಗೆ ಪತ್ರದೊಂದಿಗೆ ಭೂದಾ ಖಲೆಗಳನ್ನು ನೋಟಿಸ್ ತಲುಪಿದ 15 ದಿನಗಳ ಒಳಗೆ ಸಲ್ಲಿಸಬೇಕು. ಆಕ್ಷೇಪಣೆ ಇದ್ದಲ್ಲಿ ಅರ್ಜಿಯನ್ನು 15 ದಿನಗಳ ಒಳಗೆ ಸಲ್ಲಿಸಬೇಕು ಎಂದರು.

ಬರಪೀಡಿತ ಹಾಗೂ ಹಿಂದುಳಿದ ಪಟ್ಟಿಯಲ್ಲಿ ಇರುವ ತಾಲ್ಲೂಕನ್ನು ಅಭಿವೃದ್ಧಿಯತ್ತ ಸಾಗಿಸಲು ಶಾಶ್ವತ ನೀರಾವರಿ ಹಾಗೂ ಕೈಗಾರಿಕಾ ಪ್ರದೇಶ ಇರಬೇಕು. ಕೈಗಾರಿಕಾ ಪ್ರದೇಶಕ್ಕೆ ರೈತರು ತಮ್ಮ ಭೂಮಿ ಸ್ವಾಧೀನಪಡಿಸಲು ಅವಕಾಶ ನೀಡಬೇಕು.

ತಾಲ್ಲೂಕಿನಲ್ಲಿ ದ್ದ ಕೈಗಾರಿಕೆಗಳನ್ನು ತಾಲ್ಲೂಕಿನಲ್ಲಿ ಆರಂಭಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ಕೈಗಾರಿಕಾ ಪ್ರದೇಶ ಆರಂಭಿಸಲು ಅನುಮತಿ ಹಾಗೂ ಅನುದಾನ ನೀಡಬೇಕು. ಈ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೈಗಾರಿಕಾ ಸಚಿವರ ಬಳಿ ಚರ್ಚಿಸಲಾಗು-ವುದು ಎಂದು ತಿಳಿಸಿದರು.

ತಹಶೀಲ್ದಾರ್ ಮನೀಷಾ ಎನ್.ಪತ್ರಿ ಮಾತನಾಡಿ, ರೈತರು ತಮ್ಮ ಒಪ್ಪಿಗೆ ಪತ್ರದ ಜೊತೆ ಅಗತ್ಯವಾದ ಮೂಲದಾಖಲೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ರೈತರಿಗೆ ತಿಳಿಸಲಾಗಿದೆ. ಯಾವುದೇ ವ್ಯಾಜ್ಯಗಳ ಹಾಗೂ ಸಮಸ್ಯೆಗಳ ಬಗ್ಗೆ ಇದ್ದರೆ, ಭೂಮಾಲೀಕರು ನೇರವಾಗಿ ಸಂಪರ್ಕಿಸ ಬಹುದು ಎಂದರು.

ಈ ಸಂಧರ್ಭದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹರೀಶ್, ಅಧಿಕಾರಿ ಶಿಲ್ಪ, ತಾಲ್ಲೂಕು ಪಂಚಾಯಿತಿ ಇಒ ಜಿ.ವಿ.ರರ್ಮೇಶ್,ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ,ಎಚ್.ಎಸ್. ನರೇಂದ್ರ, ಶ್ರೀನಿವಾಸ-ರೆಡ್ಡಿ,ಸೇರಿದಂತೆ ರೈತರು, ಭೂಮಾಲೀಕರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0