ನಕಲಿ ದಾಖಲೆಗಳ ಸೃಷ್ಠಿಸಿದ ಆರೋಪದಡಿ ಬಿಜೆಪಿ ಮುಖಂಡ ಸಿ.ಮುನಿರಾಜು ವಿರುದ್ದ ಎಫ್‌ಐಆರ್ ದಾಖಲು

Jul 19, 2025 - 15:28
 0  11
ನಕಲಿ ದಾಖಲೆಗಳ ಸೃಷ್ಠಿಸಿದ ಆರೋಪದಡಿ ಬಿಜೆಪಿ ಮುಖಂಡ ಸಿ.ಮುನಿರಾಜು ವಿರುದ್ದ ಎಫ್‌ಐಆರ್ ದಾಖಲು

ಬಾಗ್ಯನಗರ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರನ್ನು ತೇಜೋವದೆ ಮಾಡಿ ಜನಪ್ರಿಯತೆಯನ್ನು ಕುಗ್ಗಿಸುವ ನಿಟ್ಟಿನಲ್ಲಿ ಇತರರು ಮೋಸ ಮಾಡುವ ಉದ್ದೇಶದಿಂದ ಒಳಸಂಚು ಮಾಡಿ ನಕಲಿ ದಾಖಲೆಗಳನ್ನು ಸೃಷ್ಠಿಸಿದ ಆರೋಪದ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಸಿ.ಮುನಿರಾಜು ವಿರುದ್ದ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಈ ಸಂಬoದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದು ಕಳೆದ ಜೂನ್ 25 ರಂದು ನನ್ನ ಸ್ನೇಹಿತರೊಬ್ಬರು ಕೆಲವು ದಾಖಲಾತಿಗಳನ್ನು ನನ್ನ ದೂರವಾಣಿ ಸಂಖ್ಯೆಯ ವಾಟ್ಸ್ಪ್ ಮುಖಾಂತರ ನನಗೆ ಕಳುಹಿಸಿದ್ದು ಅವುಗಳನ್ನು ಪರಿಶೀಲಿಸಿದಾಗ ನನ್ನ ಮತ್ತು ನನ್ನ ಪತ್ನಿಯ ಹೆಸರನ್ನು ಉಲ್ಲೇಖ ಮಾಡಿರುವುದು ಕಂಡುಬoದಿರುತ್ತದೆ.

ಮೊದಲ ಪುಟದಲ್ಲಿ ರಾಮಸಾಮಿ ವೀರನ್, ‘ಗೋಪಿಯೋ ಇಂಟರ್ ನ್ಯಾಷನಲ್ ರಿನೋ ಎಟ್ರಪ್ರಿನ್ಯೂರ್ ಎಕ್ಸ್ಲೆನ್ಸ್ ಅವಾರ್ಡ 2010 ಮೊಬೈಲ್ ನೆಟ್‌ವರ್ಕ ವರ್ಚುಯಲ್ ನೆಟ್ ವರ್ಕ ಆಪರೇಟರ್’ ಎಂದು ನಮೂದಿಸಿದ್ದು ಉಳಿದ ಪುಟಗಳಲ್ಲಿ ಹಾಂಗ್ ಕಾಂಗ್, ಮಲೇಷಿಯಾ ಮತ್ತು ಇತರೆ ದೇಶಗಳ ದಾಖಲೆಗಳಿದ್ದು ಆ ದಾಖಲೆಗಳು ಅರ್ಥವಾಗದ ಭಾಷೆಯಲ್ಲಿ ನನ್ನ ಹೆಸರನ್ನು ಬಳಕೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.

ವಿದೇಶಗಳಲ್ಲಿ ಆಸ್ತಿ,ಬ್ಯಾಂಕ್ ವ್ಯವಹಾರ ಮಾಡಿದಂತೆ ನಕಲಿ ದಾಖಲೆಗಳ ಸೃಷ್ಠಿಯಾಗಿದೆ ಇದು ನನಗೆ ಅರ್ಥವಾಗದ ಭಾಷೆಯಲ್ಲಿ ಇರುವ ಕೆಲ ದಾಖಲೆಗಳನ್ನು ಪರಿಶೀಲಿಸಿದಾಗ ಜರ್ಮನಿಯಲ್ಲಿ ನನ್ನ ಹೆಸರಿನಲ್ಲಿ ಬಿಎಂಡ್ಲೂö್ಯ ವಾಹನವನ್ನು ಖರೀದಿ ಮಾಡಿ ರಿಜಿಸ್ಟರ್ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಠಿಸಿರುವುದು ಕಂಡು ಬಂದಿರುತ್ತದೆ,ಜೊತೆಗೆ ಸಿಂಗಾಪುರದ ಒಸಿಬಿಸಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವುದಾಗಿ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಠಿಸಿರುವುದು ಕಂಡು ಬಂದಿರುತ್ತದೆ.

ರಾಮಸ್ವಾಮಿ ವೀರನ್ ಮೇ ಬ್ಯಾಂಕ್ ಖಾತೆಯಿಂದ ನನ್ನ ಧರ್ಮಪತ್ನಿ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಠಿಸಿದ್ದು ಸದರಿ ದಾಖಲೆಗಳಿಗೂ ನನ್ನ ಧರ್ಮಪತ್ನಿಗೂ ಯಾವುದೇ ಸಂಬoದ ಇರುವುದಿಲ್ಲ. ನಂತರದ 16 ಪುಟಗಳಲ್ಲಿ 3 ಇ ಮೇಲ್ ಐಡಿಗಳು ಅನಾಮದೇಯ ಹೆಸರುಗಳು ಇದ್ದು ನನ್ನ ಭಾವಚಿತ್ರ ಬಳಕೆ ಮಾಡಿಕೊಂಡಿರುವುದು ಕಂಡುಬoದಿದ್ದು ನನಗೆ ಸಂಬoಧಪಡದ ದಾಖಲೆಗಳಲ್ಲಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದು ಇವ್ಯಾವುವೂ ನನಗೆ ಸಂಬoಧಪಟ್ಟಿರುವುದಾಗಿರುವುದಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಎದುರು ಸ್ಪರ್ಧಿಸಿ ಪರಾಜಿತರಾಗಿರುವ ಸಿ.ಮುನಿರಾಜು ಎಂಬುವವರು ಘನ ಉಚ್ಛ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ದಾವೆಯನ್ನು ಹೂಡಿದ್ದು ನನ್ನ ಅಫಿಡೆವಿಟ್‌ನಲ್ಲಿ ಕೆಲವು ದೋಷಗಳಿರುವುದಾಗಿ ಮತ್ತು ಆಸ್ತಿಯನ್ನು ಮರೆ ಮಾಚಿರುವುದಾಗಿ ಸುಳ್ಳು ಆಪಾದನೆ ಮಾಡಿದ್ದು ಅದನ್ನು ಸತ್ಯ ಮಾಡುವ ದುರುದ್ದೇಶದಿಂದ ಮೇಲೆ ತಿಳಿಸಿದ ಎಲ್ಲಾ ನಕಲಿ ದಾಖಲೆಗಳನ್ನು ಸೃಷ್ಠಿಸಿರುವ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಆತನ ಮೊಬೈಲ್ ವಾಟ್ಸ್ಪ್ ನಿಂದಲೇ ನನ್ನ ಸ್ನೇಹಿತನ ಮೊಬೈಲ್‌ಗೆ ಕಳುಹಿಸಿದ್ದು,ನನ್ನ ವಿರುದ್ದ ಕ್ರಿಮಿನಲ್ ಪಿತೂರಿ(ಅಪರಾಧಿಕ ಒಳಸಂಚು), ನಕಲಿ ದಾಖಲೆಗಳ ಸೃಷ್ಠಿಸಿರುವುದೇ ಅಲ್ಲದೆ ಪೋರ್ಜರಿ ಮಾಡಿದ್ದು ಕಾನೂನು ಕ್ರಮ ಜರುಗಿಸುವಂತೆ ಪೊಲೀಸರನ್ನು ಕೋರಿದ್ದಾರೆ.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ನೀಡಿರುವ ಲಿಖಿತ ದೂರಿನ ಹಿನ್ನಲೆಯಲ್ಲಿ ಬಾಗೇಪಲ್ಲಿ ಪೊಲೀಸರು ಬಿಜೆಪಿ ಮುಖಂಡ ಸಿ.ಮುನಿರಾಜು ವಿರುದ್ದ ಭಾರತೀಯ ನೀತಿ ಸಂಹಿತೆ ಕಲಂ 61(1), 336(2), 336(3), 340(2) 318(4) 3(5) ನಕಲಿ ದಾಖಲೆ ಸೃಷ್ಠಿಸಿದ ಆರೋಪದಡಿ ಪರಜೀತ ಅಭ್ಯರ್ಥಿ ಬಿಜೆಪಿ ಸಿ.ಮುನಿರಾಜು ವಿರುದ್ಧ ಕ್ರಿಮಿನಲ್ ಸೆಕ್ಷನ್‌ಗಳಡಿಯಲ್ಲಿ  ಭಾಗ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456