ಕೆಜಿಎಫ್ ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ ಜೆಡಿಎಸ್ ಮುಖಂಡ ಕೆ. ರಾಜೇಂದ್ರನ್

Oct 11, 2025 - 12:53
 0  3
ಕೆಜಿಎಫ್ ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ ಜೆಡಿಎಸ್ ಮುಖಂಡ ಕೆ. ರಾಜೇಂದ್ರನ್

ಕೆಜಿಎಫ್: ಕೆಜಿಎಫ್ ಬಿಜಿಎಂಎಲ್ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದು ತಿಳಿಸಿದರು 

ಅವರು ನಗರದ ಹೊರವಲಯದ ರಾಜಸ್ ಕ್ಯಾಂಪ್ ಅವರ ತೋಟದಲ್ಲಿ ಮಾತನಾಡುತ್ತಾ ಬಿಜಿಎಂಎಲ್ ಕಾರ್ಮಿಕರ 25 ವರ್ಷಗಳ ಸಮಸ್ಯ ಆಗಿದ್ದು, ಇದಕ್ಕೆ ನಾವು ಶಾಶ್ವತ ಪರಿಹಾರ ಒದಗಿಸಿ ಕೊಡಬೇಕೆನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಉಕ್ಕು ಮತ್ತು ಸಣ್ಣ ಕೈಗಾರಿಕೆ ಸಚಿವರು ಆಗಿರುವ ಎಚ್. ಡಿ .ಕುಮಾರಸ್ವಾಮಿ ಅವರನ್ನು ನಮ್ಮ ನಾಯಕತ್ವದಲ್ಲಿ ಬಿಜಿಎಂಎಲ್ ಮಾಜಿ ನೌಕರರನ್ನು ಭೇಟಿ ಮಾಡಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. 

 

ಈ ಸಂದರ್ಭದಲ್ಲಿ ಕೆಜಿಎಫ್ ನ ಬಿಜಿಎಂಎಲ್ ಮಾಜಿ ನೌಕರರ ಸಂಘದ ವತಿಯಿಂದ ಹಲವು ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲಿ ಪ್ರಮುಖವಾಗಿ ಕಾರ್ಮಿಕರಿಗೆ ಬರಬೇಕಾಗಿರುವ ಗ್ರಾಜಿಟಿ ಹಣ. ಮತ್ತು ಎಸ್ ಡಿ ಬಿ ಪಿ ಕಾರ್ಮಿಕರ ಮನೆಗಳ ಹಕ್ಕು ಪತ್ರಗಳು. ಹಲವಾರು ವರ್ಷಗಳಿಂದ ಬಿಜಿನೆ ಕಾಲೋನಿಯಲ್ಲಿ ವಾಸವಾಗಿರುವ ಹತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಜ್ ಯೋಜನೆ ಅಡಿಯಲ್ಲಿ ಅವರಿಗೆ ವಾಸವಾಗಿರುವ ಅವರ ಮನೆಗಳನ್ನು ಅವರಿಗೆ ಮಂಜೂರು ಮಾಡಬೇಕೆಂದು. ನಗರಕ್ಕೆ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆ ರೂಪಿಸಬೇಕೆಂದು. ಇನ್ನು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಅದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ರವರು. ನಿಮ್ಮ ಬೇಡಿಕೆಗಳು ಏನಿದೆ ಅದನ್ನು ಲಿಖಿತ ರೂಪದಲ್ಲಿ ನೀಡಿ ಶಾಶ್ವತ ಪರಿಹಾರ ಒದಗಿಸಿ ಕೊಡುತ್ತೇವೆ ಎಂದರು.

ಬಿಜಿಎಂಎಲ್ ಕಾರ್ಮಿಕರು ಪರಿಹಾರ ನೀಡಬೇಕೆಂದು ಕೋರ್ಟಿನಲ್ಲಿ ಕೇಸು ದಾಖಲು ಮಾಡಲಾಗಿತ್ತು. ಅದರಿಂದ ಸಮಸ್ಯೆಗಳು ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಒದಗಿಸಬೇಕೆಂದರೆ. ಕೋರ್ಟಿನಿಂದ ನೌಕರರು ಹಿಂದೆ ಸರಿದರೆ ಅವರಿಗೆ ನೀಡಬೇಕಾದ ಹಣವನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ. ಸರ್ಕಾರದಲ್ಲಿ ಹಣದ ಕೊರತೆ ಏನೂ ಇಲ್ಲ ಕಾನೂನು ತೊಡಕು ಎದುರಾಗುತ್ತಿದೆ ಅಷ್ಟೇ ಆದ್ದರಿಂದ ಎಲ್ಲಾ ನೌಕರರ ಸಂಘ ಸಂಸ್ಥೆಗಳು ಒಂದಾಗಿ ಒಂದು ನಿರ್ಧಾರ ತಗೊಂಡು ಬನ್ನಿ ಎಂದು ತಿಳಿಸಿದರು ಎಂದು ಮುಖಂಡ ಕೆ. ರಾಜೇಂದ್ರನ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜಿಎಂಎಲ್ ಆಸ್ಪತ್ರೆಯ ಇದ್ಯ ವೈದ್ಯರು ಆಗಿರುವ ರಾಜೇಂದ್ರ ಕುಮಾರ್ ಮಾತನಾಡಿ ನಾವು ಕೇಂದ್ರ ಎಚ್ ಡಿ. ಕುಮಾರಸ್ವಾಮಿ ರವರನ್ನು ಭೇಟಿ ಮಾಡಿ ಚರ್ಚಿಸಿದಾಗ ಅವರು ಒಳ್ಳೆ ರೀತಿಯಾಗಿ ನಮಗೆ ಮಾರ್ಗದರ್ಶನ ನೀಡಿದ್ದು, ಈ ಸಮಸ್ಯೆ ಜವಾಬ್ದಾರಿಯನ್ನು ನಾನೇ ಹೊತ್ತಿಕೊಳ್ಳುತ್ತೇನೆ. ಎಂದರು. 

ನಂತರ ಬಿಜಿಎಂಎಲ್ ಕಾರ್ಮಿಕರ ಸಮಸ್ಯೆಗಳೇ ಬೇರೆ ಅವರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ ಅವರಿಗೆ ವಿಶೇಷವಾದ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿಕೊಡುತ್ತೇನೆ. ಇದರ ಬಗ್ಗೆ ಬೇರೆ ಕಾರ್ಖಾನೆಯವರು ಚಕಾರ ಎತ್ತುತ್ತಾರೆ ಅನ್ನೋದು ಇದರ ವ್ಯಾಪ್ತಿಗೆ ಬರುವುದಿಲ್ಲ ಏಕೆಂದರೆ ಬಿಜಿಎಂಎಲ್ಎ ಬೇರೆ ಬೇರೆ ಕಾರ್ಖಾನೆಗಳಿಗೆ ಇದನ್ನು ಹೋಲಿಸಬಾರದು ನಮ್ಮ ನಿಯೋಗಕ್ಕೆ ತಿಳಿಸಿದರು.

ನಮ್ಮಲ್ಲಿ ಮುಂದಿನ ಆಯ್ಕೆ ಏನಿದ್ದರೂ ಕೋರ್ಟ್ ಆದೇಶದಲ್ಲಿ ಏನಿದೆ ಅದರಲ್ಲಿ ಮುಖ್ಯವಾದ ಕಾರ್ಮಿಕರಿಗೆ ಅನುಕೂಲವಾಗುವ ಬುಲೆಟ್ ಪಾಯಿಂಟ್ ಗಳನ್ನು ಗುರುತಿಸಿ ಅವರಿಗೆ ನೀಡಬೇಕು ಅಷ್ಟೇ ಆಗ ಎಲ್ಲಾ ಸರಿ ಹೋಗುತ್ತದೆ ಎಂದರು. 

ಮತ್ತೆ ಕೆ. ರಾಜೇಂದ್ರನ್ ಮಾತನಾಡಿ ಕಾರ್ಮಿಕ ಸಂಘಟನೆಗಳು. ಸರ್ಕಾರಕ್ಕೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ದಯಮಾಡಿ ಈ ರೀತಿಯಾದ ಕೆಲಸಗಳನ್ನು ಮಾಡಬೇಡಿ ಏನೇ ಇದ್ದರೂ ನೇರವಾಗಿ  ನನ್ನ ಹತ್ತಿರ ಬನ್ನಿ ನಿಮ್ಮನ್ನು ಸಚಿವರ ಹತ್ತಿರ ಕರೆದುಕೊಂಡು  ಹೋಗಿ ಇದಕ್ಕೆ ಶಾಶ್ವತ ಪರಿಹಾರ ಪಡೆಯೋಣ ಎಂದು ಮನವಿ ಮಾಡಿದರು. 

ಸಂದರ್ಭದಲ್ಲಿ ಕಾರ್ಮಿಕ ಮುಖಂಡರು ಚೆನ್ನ ಮಲ್ಲಿಗೆ. ಕಾರ್ಮಿಕ ಹಲವಾರು ಮುಖಂಡರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0