ಪೌರಕಾರ್ಮಿಕರ ಸೇವೆ ಅಪ್ರತಿಮ ಶಾಸಕಿ ರೂಪಕಲಾ ಶಶಿಧರ್

Sep 23, 2025 - 18:18
 0  4
ಪೌರಕಾರ್ಮಿಕರ ಸೇವೆ ಅಪ್ರತಿಮ ಶಾಸಕಿ ರೂಪಕಲಾ ಶಶಿಧರ್

ಕೆಜಿಎಫ್: ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ನೆನ್ನೆ ಕೆ.ಜಿ.ಎಫ್ ನಗರಸಭೆ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.  ಕಾರ್ಯಕ್ರಮದಲ್ಲಿ ಶಾಸಕ ರೂಪಕಲಾ ಎಂ. ಶಶಿಧರ್ ರವರು ಭಾಗವಹಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪೌರಕಾರ್ಮಿಕರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ ಶಾಸಕರು, ನಗರದ ಸ್ವಚ್ಛತೆಯೇ ಆರೋಗ್ಯದ ಮೂಲ. ಪ್ರತಿದಿನ ಬೆಳಿಗ್ಗೆ ಪೌರಕಾರ್ಮಿಕರು ದುಡಿಯುವ ಕಾರಣದಿಂದ ನಗರ ಸ್ವಚ್ಛವಾಗಿರುತ್ತದೆ.  ಅವರ ಸೇವೆ ಸಮಾಜಕ್ಕೆ ಅಪ್ರತಿಮ,ಎಂದು ಹೇಳಿದರು.

       ಸರ್ಕಾರವು ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿರುವುದರ ಜೊತೆಗೆ, ಸಾವಿರಾರು ತಾತ್ಕಾಲಿಕ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಹೊರಡಿಸಿರುವುದನ್ನು ನೆನಪಿಸಿದರು. ಆದಾಗ್ಯೂ, ಅವರ ಹಿತಕ್ಕಾಗಿ ಇನ್ನಷ್ಟು ಯೋಜನೆಗಳನ್ನು ಸರ್ಕಾರದಿಂದ ಕೈಗೊಳ್ಳಬೇಕಿದೆ ಎಂದು ಒತ್ತಿಹೇಳಿದರು. ಪೌರಕಾರ್ಮಿಕರು ತಮ್ಮ ಜೀವನವನ್ನು ನಗರದ ಸ್ವಚ್ಛತೆಗೆ ಮೀಸಲಿಟ್ಟರೂ, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಮುಂದುವರಿಸಲು ಶ್ರಮಿಸುತ್ತಿರುವುದು ಸಮಾಜಕ್ಕೆ ಹೆಮ್ಮೆ ನೀಡುವ ಸಂಗತಿ, ಎಂದು ಶಾಸಕರು ಹೇಳಿದರು. ಮುಂದುವರೆದು ಮಾತನಾಡಿ ನಗರದಲ್ಲಿ ಗೃಹಭಾಗ್ಯ ಯೋಜನೆಯಡಿ ಅನೇಕ ಪೌರಕಾರ್ಮಿಕರಿಗೆ ಮನೆ ಹಂಚಿಕೆ ಮಾಡಲಾಗಿದ್ದು, ಇನ್ನು ಸುಮಾರು 60 ಪೌರಕಾರ್ಮಿಕರಿಗೆ ಮನೆ ನೀಡಬೇಕಿದೆ. ಮುಂದಿನ ದಿನಗಳಲ್ಲಿ ಅವರಿಗೆ ಮನೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೌರಕಾರ್ಮಿಕರಿಗೆ ಶಾಸಕ ಶಶಿಧರ್ ಶುಭ ಹಾರೈಸಿ, ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತಿ ಆಂಜನೇಯಲು, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ,, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ. ನಗರ ಸಭೆ ಸದಸ್ಯರು. ಮೋಹನ್ ರಾಜ್. ಪಾಂಡಿಯನ್. ಕರುಣಾಕರನ್ .ನಗರಸಭೆ ಅಧಿಕಾರಿ ಶಶಿಕುಮಾರ್. ಜಯರಾಮ್. ಮಂಗಳ ಗೌರಿ. ಹಾಗೂ ಅನೇಕ ನಗರಸಭಾ ಸದಸ್ಯರು. ಪೌರಕಾರ್ಮಿಕರ ಸಂಘಟನೆ ಮುಖಂಡರುಗಳು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0