ಬಿ.ಜೆ.ಪಿ ಪಕ್ಷವು ದಲಿತ ವಿರೋಧಿ

ಬಿ.ಜೆ.ಪಿ ಪಕ್ಷವು ದಲಿತ ವಿರೋಧಿ

ಕೊರಟಗೆರೆ- ಬಿ.ಜೆ.ಪಿ ಪಕ್ಷವು ದಲಿತ ವಿರೋಧಿಯಾಗಿದ್ದು ದಲಿತ ನಾಯಕ ಮಂದಕೃಷ್ಣ ಮದಿಗ ರವರನ್ನು  ದಾರಿ ತಪ್ಪಿಸಿ ಸುಳ್ಳು ಹೇಳಿಸಿ  ದಲಿತ ಒಡೆದು ಆಳುವ ನೀತಿ ಮಾಡುತ್ತಿದೆ ಎಂದು ಮಾಜಿ ನಗರ ಸಭಾ ಉಪಾದ್ಯಕ್ಷ ಜಿಲ್ಲಾ ದಲಿತ ಮುಖಂಡ ವಾಲೆ ಚಂದ್ರಯ್ಯ ತಿಳಿಸಿದರು. ಅವರು ಪಟ್ಟಣದ ರಾಜೀವ ಭವನದಲ್ಲಿ ಪತ್ತಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ಮದಿಗ ಜನಾಂಗದ ರಾಷ್ಟೀಯ ಅದ್ಯಕ್ಷರಾದ ಮಂದಕೃಷ್ಣ ಮದಿಗ ರವರು ಕಾಂಗ್ರೆಸ್ ಸದಾಶಿವ ಆಯೋಗದ ವಿರೋದಿ ಎಂದು ಕೆಲವು ಬಿಜೆಪಿ ರಾಜಕಾರಣಿಗಳ ಜೋತೆಗೂಡಿ ತಿಳಿಸಿದ್ದಾರೆ,ಆದರೆ ಬಿಜೆಪಿ ಪಕ್ಷವು ಮೀಸಲಾತಿಯನ್ನೆ ತೆಗೆದು ಹಾಕುವ ಹುನ್ನಾರದಲ್ಲಿದೆ. ಸಂವಿಧಾನದ ವಿರೋಧಿ ದೋರಣೆಯನ್ನು ಬಿಜೆಪಿ ಪಕ್ಷವು ಮಾಡುತ್ತಿದ್ದು ದಲಿತರನ್ನು ಒಡೆದು ಅವರನ್ನು ತುಳಿಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರಗಳು ಮೀಸಲಾತಿಯನ್ನೆ ತೆಗೆದು ಹಾಕುವಾಗ ಇನ್ನು ಒಳಮೀಸಲಾತಿ ನೀಡುತ್ತಾರೆ ಎನ್ನುವ ಮಂದಕೃಷ್ಣ ಮಾದಿಗ ರವರ ಹೇಳಿಕೆ ತಪ್ಪು ಗ್ರಹಿಕೆಯಿಂದ ಅವರನ್ನು ದಾರಿ ತಪ್ಪಿಸುವ ಕೆಲಸ ಬಿಜೆಪಿ ಪಕ್ಷ ಮಾಡಿದೆ.ದಲಿತರ ಮೀಸಲಾತಿಗೆ ಮತ್ತು ಒಳಮೀಸಲಾತಿಗೆ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಾ ಜಿ ಪರಮೇಶ್ವರ್, ಮಹದೇವಪ್ಪ, ಮುನಿಯಪ್ಪ ನವರ ಕೊಡುಗೆ ಸಾಕಷ್ಟಿದೆ. ಇವರೆಲ್ಲರು ಒಳಮೀಸಲಾತಿ ಪರ ಮಾತನಾಡಿ, ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಬ್ಯಾಕ್‌ಲಾಗ್ ಹುದ್ದೆಗಳನ್ನು ಬಿಜೆಪಿ ಪಕ್ಷವು ದಲಿತರಿಗೆ  ಸಿಗದಂತೆ ತಡೆದಿದ್ದ ಸಂದರ್ಭದಲ್ಲಿ ಕಾಂಗ್ರೇಸ್ ಪಕ್‌ಷವು ಅದನ್ನುನಜಾರಿಗೆ ತರುವಲ್ಲಿ ಖರ್ಗೆ, ಡಾ ಜಿ ಪರಮೇಶ್ವರ್, ಮುನಿಯಪ್ಪ ರವರ ಶ್ರಮ ಬಹಳಷ್ಟಿದೆ. ಇಂತಹವರ ವಿರುದ್ದ ಕೆಲವು ಬಿಜೆಪಿ ನಾಯಕರು ಮಂದಕೃಷ್ಣ ಮಾದಿಗರನ್ನು ಮುಂದೆ ಬಿಟ್ಟು ಸುಳ್ಳು ಅಪವಾದ ಹೊರಿಸುತ್ತಿದ್ದಾರೆ. ಮೂಲ ಆರ್‌ಎಸ್‌ಎಸ್ ಕೈಗೊಂಬೆಯಾಗಿರುವ ಬಿಜೆಪಿ ಮಡಿವಂತಿಕೆ ಸಮಾಜದ ಕೈಗೊಂಬೆಯಾಗಿದೆ, ದಲಿತರ ವಿರೋದಿಯಾಗಿದೆ. ಆದ್ದರಿಂದ ಎಲ್ಲಾ ದಲಿತರು ಒಟ್ಟುಗೂಡಿ ಕಾಂಗ್ರೇಸ್ ಪಕ್ಷದ ಪರವಾಗಿದ್ದೇವೆ ಎಂದರು.ಮಾಜಿ ನಗರಸಭಾ ಸದಸ್ಯ ನರಸೀಯಪ್ಪ ಮಾತನಾಡಿ, ಮಂದಕೃಷ್ಣ ಮಾದಿಗ ರವರು ಕೋಮುವಾದಿಗಳ ಪರ ಪ್ರಚಾರ ಮಾಡುತ್ತಿರುವುದು ನಿಜಕ್ಕು ನೋವು ತಂದಿದೆ. ದಲಿತರನ್ನು ನಿಷ್ಕೃಷ್ಟರಾಗಿ ನೋಡುವ ದಲಿತರನ್ನೆ ಎರಡು ಭಾಗ ಮಾಡಿ ಅವರನ್ನು ದಮನ ಮಾಡಲು ಹೊಂಚು ಹಾಕುತ್ತಿರುವ ಬಿಜೆಪಿ ಪರ ಮಂದಕೃಷ್ಣ ಮಾದಿಗ ರವರು ನೀಡಿರುವ ಹೇಳಿಕೆ ಜಾರಿಗೆ ಬರದಿರುವುದು, ಕಾಂಗ್ರೇಸ್ ಪಕ್ಷವು ಮೀಸಲಾತಿ ಮುಂದುವರಿಸುತ್ತದೆ ಹಾಗೂ ಒಳ ಮೀಸಲಾತಿ ಜಾರಿಗೆ ತರುತ್ತದೆ. ಮಂದಕೃಷ್ಣ ಮಾದಿಗ ರವರು ಇದೇ ರೀತಿ ಬಿಜೆಪಿ ಪರ ಪ್ರಚಾರ ಮಾಡಿದರೆ ಗೋ ಬ್ಯಾಕ್ ಚಳುವಳಿಯನ್ನು ದಲಿತರು ಮಾಡಬೇಕಾಗಿರುತ್ತದೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ನರಸಿಂಹಮೂರ್ತಿ, ಜಯರಾಂ, ಸುರೇಶ್ , ದೊಡ್ಡಯ್ಯ, ಶಿವರಾಮಯ್ಯ, ನಂದೀಶ್, ಜಯಮೂರ್ತಿ, ನಾಗರಾಜು, ಹನುಮಂತರಾಯಪ್ಪ, ಹರೀಶ್, ಗೋಪಿನಾಥ್, ಸೇರಿದಂತೆ ಹಲವು ಮುಖಂಡರುಗಳು ಹಾಜರಿದ್ದರು