ಸುಭಾಷ್ ಚಂದ್ರ ಬೋಸ್ ಛಲ ಅದ್ಭುತ
ಸುಭಾಷ್ ಚಂದ್ರ ಬೋಸ್ ಛಲ ಅದ್ಭುತ
ಸಿಂದಗಿ: ‘ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಟ್ಟುಗೂಡಿಸಿ ಮುಂಚೂಣಿಯಲ್ಲಿರುತ್ತಿದ್ದ ಸುಭಾಷ್ ಚಂದ್ರ ಬೋಸ್ ಅವರನ್ನು ಎಲ್ಲರೂ ಕರೆಯುವುದು ‘ನೇತಾಜಿ’ ಎಂದು ಶಿಕ್ಷಕ ಸಾಹಿತಿ ಬಸವರಾಜ ರಾ ಅಗಸರ ಹೇಳಿದರು. ತಾಲ್ಲೂಕಿನ ಬಂದಾಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಪಾತ್ರ ಕೂಡಾ ಬಹಳ ಹಿರಿದು. ಅವರ ದೇಶಪ್ರೇಮ, ಎಲ್ಲರನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದ ಛಲ ಅದ್ಭುತ. ತಮ್ಮ ಸಿಡಿಲಬ್ಬರದ ಮಾತಿನಿಂದಲೇ ನೇತಾಜಿ ಎಲ್ಲರಲ್ಲೂ ದೇಶಪ್ರೇಮದ ಕಿಚ್ಚನ್ನು ಜಾಗೃತಗೊಳಿಸುತ್ತಿದ್ದರು. ಭಾರತವನ್ನು ಬ್ರಿಟಿಷರ ಬಂಧನದಿಂದ ಮುಕ್ತಗೊಳಿಸಬೇಕು ಎಂಬ ಕನಸು ಕಂಡಿದ್ದ ನೇತಾಜಿ ಅವರು ವಿದೇಶದಲ್ಲೂ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ್ದರು ಸ್ವಾತಂತ್ರ್ಯಕ್ಕೆ ದೊಡ್ಡ ಭದ್ರ ಬುನಾದಿಯನ್ನು ಹಾಕಿದ್ದರು. ಅವರ ದೇಶಭಕ್ತಿ, ದೇಶಕ್ಕಾಗಿ ತ್ಯಾಗ ಮಾಡುವ ಅವರ ಧ್ಯೇಯದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು. ಶಾಲೆಯ ಮುಖ್ಯಗುರು ನಿಂಗನಗೌಡ ಎಸ್ ಪಾಟೀಲ.ಹಿರಿಯ ಶಿಕ್ಷಕರಾದ ಎಂ.ಬಿ.ಕೋರವಾರ, ಚಂದ್ರಶೇಖರ ಬುಯ್ಯಾರ, ಸಿದ್ದಲಿಂಗಪ್ಪ ಪೊದ್ದಾರ, ಶಿಕ್ಷಕಿಯರಾದ ಶ್ರೀಮತಿ ಸುಮಂಗಲಾ ಕೆಂಬಾವಿ, ಶ್ರೀಮತಿ ಆಯ್ ಜಿ ನಾಗಠಾಣ, ದೈಹಿಕ ಶಿಕ್ಷಕಿ ಮಲ್ಲಮ್ಮ ಹಿಪ್ಪರಗಿ ಸೇರಿ ಹಲವರು ವಿದ್ಯಾರ್ಥಿಗಳು ಇದ್ದರು.