ಚಾಲಕರ ಮೇಲಿನ ಕಾನೂನು ಹಿಂಪಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ

ಚಾಲಕರ ಮೇಲಿನ ಕಾನೂನು ಹಿಂಪಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ

Jan 22, 2024 - 13:03
 0  2
ಚಾಲಕರ ಮೇಲಿನ ಕಾನೂನು ಹಿಂಪಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ

ಇಂಡಿ:ಚಾಲಕರ ಮೇಲೆ ಕೇಂದ್ರ ಸರ್ಕಾರ ತಂದಿರುವ 10 ವರ್ಷ ಜೈಲು ಶಿಕ್ಷೆ,7 ಲಕ್ಷ ದಂಡ ವಿಧಿಸುವ ಹೊಸ ಕಾನೂನು ಹಿಂಪಡೆಯಬೇಕು.ಚಾಲಕರ ಮೇಲೆ ವಿಧಿಸಿರುವ ಈ ಕಾನೂನು ಚಾಲಕರನ್ನು ಬೀದಿಗೆ ಬಿಳುವಂತಾಗಿದೆ.ಕೂಡಲೆ ಚಾಲಕರು ಅಪಘಾತ ಮಾಡಿದರೆ ಅವರಿಗೆ ವಿಧಿಸುವ ಶಿಕ್ಷೆಯ ಕಾನೂನನ್ನು ಕೇಂದ್ರ ಸರ್ಕಾರ ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಶ್ರೀ ಶಾಂತೇಶ್ವರ ವಾಹನ ಮಾಲಕರು ಹಾಗೂ ಚಾಲಕರ ಕ್ಷೇಮಾಭಿವೃದ್ದಿ ಸಂಘ ಹಾಗೂ ಇಂಡಿ ತಾಲೂಕ ಲಾರಿ ಮಾಲಕರ ಸಂಘದ ಮುಖಂಡರು, ಪದಾಧಿಕಾರಿಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಟಿಪ್ಪುಸುಲ್ತಾನ, ಬಸವೇಶ್ವರ, ಅಂಬೇಡ್ಕರ, ಮಹಾವೀರ ಮೃತ್ತದ ಮೂಲಕ ನಡೆದು ಪುನ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ಮಿನಿ ವಿಧಾನಸೌಧದ ಮುಂದೆ ಧರಣಿ ನಡೆಸಿದರು. ಕೇಂದ್ರ ಸರ್ಕಾರವು ಭಾರತೀಯ ನ್ಯಾಯ ಸಂಹಿತೆ 2023 ಕಾಯ್ದೆಯನ್ನು ಎಪ್ರೀಲ್ ತಿಂಗಳಿನಿಂದ ಜಾರಿಗೆ ಬರುವಂತೆ ಹೊಸ ಕಾನೂನು ಜಾರಿಗೆ ತರುತ್ತಿದ್ದು, ಇದರಿಂದ ವಾಹನ ಉದ್ಯೆಮಕ್ಕೆ ಹಲವು ನಿಯಮಗಳು ತುಂಬಾ ಕಠಿಣವಾಗಿದ್ದು, ಅದರಲ್ಲೂ ಮುಖ್ಯವಾಗಿ ಸೆಕ್ಷನ್ 106(1),106(2) ಅಡಿಯಲ್ಲಿ ಯಾವುದೇ ವಾಹನ ಚಾಲಕ ಅಪಘಾತವನ್ನು ಮಾಡಿ ಯಾವುದೇ ನಾಗರಿಕರ ಸಾವಿಗೆ ಕಾರಣವಾದರೆ ಚಾಲಕನಿಗೆ ಸೆಕ್ಸೆನ್ 106(1 ಮತ್ತು 2) ಅನ್ವಯ 10 ವರ್ಷಗಳವರೆಗೆ ಕಠಿಣ ಕಾರ್ಯಾಗ್ರಹ ವಾಸ ಹಾಗೂ 7 ಲಕ್ಷಗಳವರೆಗೆ ದಂಡವನ್ನು ನ್ಯಾಯಾಲಯ ವಿಧಿಸಬಹುದು ಎಂಬ ಕಾನೂನು ಜಾರಿಗೆ ತಂದಿದ್ದು,ಇದರು ಚಾಲಕರಿಗೆ ಮರಣ ಶಾಸನವಾಗಿದೆ.ಕೂಡಲೆ ಕೇಂದ್ರ ಸರ್ಕಾರ ಈ ಕಾನೂನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

What's Your Reaction?

like

dislike

love

funny

angry

sad

wow