ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಚಿತ್ರಕಲಾ ಸ್ಪರ್ಧೆ
ಶ್ರೀಶಾ ಕಲಾ ವೇದಿಕೆ ಶಂಕರಘಟ್ಟ ಶಿವಮೊಗ್ಗ ವೇದಿಕೆ ವತಿಯಿಂದ ದಿನಾಂಕ 08/06/2026 ರಂದು ವಿಶ್ವ ಪರಿಸರ ದಿನಾಚರಣೆ ಯನ್ನು ಆಚರಿಸಲಾಯಿತು ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು ಹಾಗೆ ಮನೆಗೊಂದು ಮರ ಯೋಜನೆಯಂತೆ ಮನೆ ಮುಂದೆ ಸಸಿಯನ್ನು ನೆಡಲಾಯಿತು. ನಂತರ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಮತ್ತು ಬಹುಮಾನವನ್ನು ವಿತರಿಸಲಾಯಿತು.
ಶ್ರೀಶಾ ಕಲಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಆಶಾ ಶ್ರೀಧರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗವಹಿಸಿದ್ದ ಶ್ರೀಮತಿ ಅಂಜಲಿ ಉಮೇಶ್ ಅವರು ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ. ಈಗಿನಿಂದಲೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಧೈರ್ಯ ಬರುತ್ತದೆ ಎಂದರು.
ಆಶಾ ಶ್ರೀಧರ್ ಅವರು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪರಿಸರ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ತಾವು ಬಿಡಿಸಿದ ಚೆತ್ರಗಳಲ್ಲಿಯೇ ಪರಿಸರಕ್ಕೆ ಹಾನಿಯುಂಟು ಮಾಡುವ ವಿವಿಧ ಮಾಲಿನ್ಯಗಳನ್ನು ತೋರಿಸಿದ್ದೀರಿ ಹಾಗೆಯೇ ಅದಕ್ಕೆ ಪರಿಹಾರಗಳನ್ಧೂ ಸಹ ಸೂಚಿಸಿದ್ದೀರಿ.
ಬಹಳ ಅರ್ಥಗರ್ಭಿತ ಚಿತ್ರಗಳನ್ನು ಚಿತ್ರಿಸಿದ್ದೀರಿ. ಇದು ಬಹಳ ಸಂತಸ ವಿಷಯ. ಹೀಗೇ ಎಲ್ಲಾ ವಿಷಯಗಳಲ್ಲೂ ತಮ್ಮ ಪ್ರತಿಭೆ ಮುಂದುವರೆಯಲಿ ಎಂದು ಹಾರೈಸಿದರು. ಮಕ್ಕಳಾದ ಇಂಬಾ, ಇನಿಕ, ಪರ್ಣಿಕ, ವರ್ಷಿಣಿ, ಸನ್ನಿಧಿ, ಸಮೃದ್ಧಿ, ಯಶ್ವಿನ್, ಸೋನಾಲ್, ಧೃತಿ, ಬೃಂದ , ಶ್ರೀ ಶ್ರೀಧರ್, ಶ್ರೀಮತಿ ನಳಿನ ಭಾಗವಹಿಸಿದ್ದರು.
What's Your Reaction?