ಮಡಿವಾಳ ಸಮುದಾಯವನ್ನು ಸರ್ಕಾರ ಕಡೆಗನಿಸಿದೆ ಜಿಲ್ಲಾಧ್ಯಕ್ಷ: ರಾಜಗೋಪಾಲ್

Jun 14, 2026 - 10:55
 0  141
ಮಡಿವಾಳ ಸಮುದಾಯವನ್ನು ಸರ್ಕಾರ ಕಡೆಗನಿಸಿದೆ ಜಿಲ್ಲಾಧ್ಯಕ್ಷ: ರಾಜಗೋಪಾಲ್
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಕೆಜಿಎಫ್: ಮಡಿವಾಳ ಸಮುದಾಯವನ್ನು ಸರ್ಕಾರ ಕಡೆಗಣಿಸುತ್ತಿದೆ. ನಮ್ಮ ಸಮುದಾಯಕ್ಕೆ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲ. ಎಂದು. ಕೆಜಿಎಫ್ ನಲ್ಲಿ ಮಡಿವಾಳ ಸಮುದಾಯ ತಾಲೂಕು ಸಂಘಟನಾ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರು. ರಾಜಗೋಪಾಲ್ ಆರೋಪಿಸಿದರು. 

ಮಡಿವಾಳ ಸಮುದಾಯದ ಜಿಲ್ಲಾ ಕಾರ್ಯದರ್ಶಿಗಳು ಆಗಿರುವ. ಆಂಜಪ್ಪ ಮಾತನಾಡಿ ಮಡಿವಾಳ ಸಮುದಾಯವನ್ನು ಪ್ರತಿಯೊಂದು ತಾಲೂಕಿನಲ್ಲಿ ಸಂಘಟನೆ ಮಾಡುವ ಮೂಲಕ ಸರ್ಕಾರ ನೀಡುವ ಸೌಲಭ್ಯಗಳು ನಮಗೂ ಸಿಗಬೇಕು. ನಮ್ಮ ಬೇಡಿಕೆಗಳು. ನಮ್ಮ ರಾಜ್ಯದಲ್ಲಿ ಮಡಿವಾಳ ಸಮುದಾಯಕ್ಕೆ ಎಸ್ಸಿ ಮೀಸಲಾತಿ ನೀಡಬೇಕು. ಇಲ್ಲದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಡಿಸಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. 

ತಾಲೂಕು ಅಧ್ಯಕ್ಷರು. ರವಿಕುಮಾರ್ ಮಾತನಾಡಿ. ನಮ್ಮ ಸಮುದಾಯಕ್ಕೆ ನಗರಸಭೆ ವತಿಯಿಂದ 1993 ರಲ್ಲಿ ಕೆಜಿಎಫ್ ನಲ್ಲಿ ಪರಂಡಹಳ್ಳಿ ಗ್ರಾಮದಲ್ಲಿ ದೊಡ್ಡ ನಿವೇಶನವನ್ನು ನೀಡಿದ್ದಾರೆ.ಈಗ ಅಲ್ಲಿ ಕಸ ಸುರಿಯುವ ಸ್ಥಳವಾಗಿದೆ ಆದ್ದರಿಂದ ಪರ್ಯಾಯವಾಗಿ ಬದಲಿ ಜಾಗವನ್ನು ನೀಡಬೇಕು.

ಮತ್ತು ಅಗಸರಿಗೆ ಸುಸ್ತಜ್ಜಿತವಾದ ದೋಬಿ ಘಾಟ್ ನಿರ್ಮಾಣ ಮಾಡಬೇಕು.ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಗುವಸೌಲಭ್ಯಗಳನ್ನು ನಮಗೆ ತಲುಪಿಸಬೇಕು.ನಮ್ಮ ಶಾಸಕರು.ರೂಪಕಲಾ ಶಶಿಧರ್ ,ನಮ್ಮ ಸಮುದಾಯದ ಪರ ಸದನದಲ್ಲಿ ಧ್ವನಿ ಎತ್ತಬೇಕು.ಎಂದು ಒತ್ತಾಯಿಸಿದರು.

ನಮ್ಮ ಸಮುದಾಯವನ್ನು ಬಲಪಡಿಸಲು ತಿಂಗಳಿಗೆ ಒಂದು ಬಾರಿ ನಮ್ಮ ಪದಾಧಿಕಾರಿಗಳು ಸಭೆ ಸೇರಿಮುಂದಿನ ಹೋರಾಟಗಳ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿಗಳು ಭೀಮರಾಜ್. ಮುಳಬಾಗಲು ಪ್ರಧಾನ ಕಾರ್ಯದರ್ಶಿ. ಕೋದಂಡಪ್ಪ. ಸತ್ಯನಾರಾಯಣ. ಮುನಿಯಪ್ಪ. ರಾಮು. ನಾಗಪ್ಪ. ಸುರೇಶ್. ಕುಮಾರ್. ನಾಗರಾಜಪ್ಪ. ಮುನಿಯಪ್ಪ ಮೊದಲಾದವರು ಇದ್ದರು.

What's Your Reaction?

like

dislike

love

funny

angry

sad

wow

Suddi Kirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268, 9686665456 #suddikiranatv #suddikiranaott