ಜಯಮಂಗಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಶಾಖೆ ರಚನೆ: 30ಕ್ಕೂ ಹೆಚ್ಚು ಮಹಿಳೆಯರ ಸೇರ್ಪಡೆ

ಜಯಮಂಗಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಶಾಖೆ ರಚನೆ: 30ಕ್ಕೂ ಹೆಚ್ಚು ಮಹಿಳೆಯರ ಸೇರ್ಪಡೆ

       ಬೇತಮಂಗಲ: ಹೋಬಳಿಯ ಟಿ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಯಮಂಗಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ನೂತನ ಶಾಖೆಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮಹಿಳೆಯರು ದಲಿತ ಸಂಘರ್ಷ ಸಮಿತಿಗೆ ಸೇರ್ಪಡೆಗೊಂಡು ಸಂಘಟನೆಯ ಬಲವರ್ಧನೆಗೆ ಕೈಜೋಡಿಸಿದರು.

ಈ ವೇಳೆ ತಾಲ್ಲೂಕು ಸಮಿತಿಯ ಸಂಚಾಲಕ ರಾಮಪ್ಪ ಮಾತನಾಡಿ, ಸಮಾಜದಲ್ಲಿನ ಶೋಷಿತರು ದಲಿತರು ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆಗೆ ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಸಂಘಟನೆಯ ಬಲವರ್ಧನೆಯಿಂದ ಸಾಮಾಜಿಕ ನ್ಯಾಯಕ್ಕಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗೆ ಸೇರ್ಪಡೆಯಾಗಿರುವುದು ಸಂತಸದ ವಿಷಯವಾಗಿದ್ದು, ಮಹಿಳೆಯರ ಸಬಲೀಕರಣ ಹಾಗೂ ಸಾಮಾಜಿಕ ಜಾಗೃತಿಗೆ ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ತಾಲ್ಲೂಕು ಸಂಚಾಲಕರಾದ ರಾಮಪ್ಪ, ಪದಾಧಿಕಾರಿಗಳಾದ ಯಲ್ಲಮ್ಮ, ರಾಮ ಪ್ರಸನ್ನ, ಸುಬ್ಬರಾಯಪ್ಪ, ರವಿಚಂದ್ರ, ವೆಂಕಟೇಶಪ್ಪ, ರಾದಮ್ಮ, ಅಳುವೇಲಮ್ಮ, ಶಿವಮೂರ್ತಿ, ದೀಪ, ಸುಬ್ಬು, ಆಯೇಷಾ ಬೇಗಂ, ಸೇರಿದಂತೆ ಉಪಸ್ಥಿತರಿದ್ದರು.