ಭೂ ಪರಿಹಾರ ವಿಳಂಬ:ಕೆ.ಆರ್.ಪೇಟೆ ಹೇಮಾವತಿ ಕಚೇರಿ ಜಪ್ತಿ

Jun 12, 2026 - 16:41
 0  15
ಭೂ ಪರಿಹಾರ ವಿಳಂಬ:ಕೆ.ಆರ್.ಪೇಟೆ ಹೇಮಾವತಿ ಕಚೇರಿ ಜಪ್ತಿ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಕೋರ್ಟ್ ಆದೇಶದಂತೆ ಕಚೇರಿ ಸಾಮಗ್ರಿ ವಶ,ನೊಂದ ರೈತರ ಕಣ್ಣೀರಿಗೆ ಸಿಕ್ಕ ನ್ಯಾಯ

ಕೆ.ಆರ್.ಪೇಟೆ:ತಾಲ್ಲೂಕಿನ ಹೊಸಹೊಳಲು ಮೇಲ್ಕಾಲುವೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡ 40 ರೈತರಿಗೆ ಭೂ ಪರಿಹಾರ ನೀಡಲು ವಿಳಂಬ ಮಾಡಿದ ಹೇಮಾವತಿ ಯೋಜನೆಯ ಹೆಚ್.ಎಲ್.ಬಿ.ಸಿ ನಂ.3 ಕಚೇರಿಯನ್ನು ಮಂಡ್ಯ ಜಿಲ್ಲಾ ಮತ್ತು ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೋರ್ಟ್ ಸಿಬ್ಬಂದಿಗಳು ಹಾಗೂ ವಕೀಲರ ಸಮ್ಮುಖದಲ್ಲಿ ಕಚೇರಿಯನ್ನ ಜಪ್ತಿ ಮಾಡಲಾಯಿತು.

ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಮೇಲ್ಕಾಲುವೆ ಯೋಜನೆಗಾಗಿ ಕೆ.ಆರ್.ಪೇಟೆ ತಾಲ್ಲೂಕಿನ 40.ಕ್ಕೂ ಹೆಚ್ಚು ರೈತರ ಫಲವತ್ತಾದ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು.ಕಾನೂನು ಪ್ರಕಾರ ನಿಗದಿತ ಅವಧಿಯಲ್ಲಿ ಭೂ ಪರಿಹಾರ ಪಾವತಿಯಾಗಬೇಕಿದ್ದರೂ, ವರ್ಷಗಳು ಕಳೆದರೂ ಹೇಮಾವತಿ ಇಲಾಖೆ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಇದರಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ನ್ಯಾಯಾಲಯದ ಮೊರೆ ಹೋಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಮಂಡ್ಯ ಜಿಲ್ಲಾ ಹಾಗೂ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯ, ರೈತರ ಪರವಾಗಿ ಆದೇಶ ನೀಡಿ ಭೂ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಎಚ್.ಎಲ್.ಬಿ.ಸಿ ನಂ.3 ಕಚೇರಿಯಲ್ಲಿರುವ ಸಾಮಗ್ರಿಗಳನ್ನು ಜಪ್ತಿ ಮಾಡಿ, ಪರಿಹಾರ ಮೊತ್ತ ವಸೂಲಿ ಮಾಡುವಂತೆ ನ್ಯಾಯಾಲಯದ ಸಿಬ್ಬಂದಿಗೆ ಸೂಚಿಸಿ ಕಚೇರಿಯನ್ನ ಜಪ್ತಿ ಮಾಡಲಾಯಿತು.

ಸಂತ್ರಸ್ತ ರೈತರ ನೋವು:  

ನಮ್ಮ ಜಮೀನು ಬಳಿ ಹೋಗಿರುವ ಹೊಸಹೊಳಲು ಮೇಲ್ಕಾಲುವೆ ನಮ್ಮ ಭಾಗದ ನೂರಕ್ಕೂ ಹೆಚ್ಚು ರೈತರು ಜಮೀನು ಕಾಲುವೆಗೆ ಹೋಗಿ ನಾವು ಬೀದಿಗೆ ಬಂದಿದ್ದೇವೆ ಪರಿಹಾರ ಕೇಳಲು ಕಚೇರಿಗೆ ಹೋದರೆ ಅಧಿಕಾರಿಗಳು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಇಂದು ನ್ಯಾಯಾಲಯ ಹಾಗೂ ನ್ಯಾಯದ ಪರ ನಿಂತ ನಮ್ಮ ವಕೀಲರಾದ ಧನಂಜಯ್ ಕುಮಾರ್ ನಮಗೆ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಸಂತ್ರಸ್ತ ರೈತ ವಿಷಕಂಠ ತಿಳಿಸಿದರು.

ಜಪ್ತಿ ಕಾರ್ಯಾಚರಣೆ:  

ಶುಕ್ರವಾರ ಬೆಳಿಗ್ಗೆ ನ್ಯಾಯಾಲಯದ ಸಿಬ್ಬಂದಿ, ಸಂತ್ರಸ್ತ ರೈತರು ಹಾಗೂ ಅವರ ವಕೀಲರ ಸಮ್ಮುಖದಲ್ಲಿ ಕೆ.ಆರ್.ಪೇಟೆಯಲ್ಲಿರುವ ಎಚ್.ಎಲ್.ಬಿ.ಸಿ ನಂ.3 ಕಚೇರಿಗೆ ಆಗಮಿಸಿದರು. ಕೋರ್ಟ್ ಆದೇಶದಂತೆ ಕಚೇರಿಯಲ್ಲಿದ್ದ ಕಂಪ್ಯೂಟರ್, ಪ್ರಿಂಟರ್, ಟೇಬಲ್, ಚೇರ್ ಸೇರಿದಂತೆ ಎಲ್ಲಾ ಪೀಠೋಪಕರಣಗಳನ್ನು ಪಂಚನಾಮೆ ನಡೆಸಿ ವಶಕ್ಕೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ರೈತ ಪರ ವಕೀಲ ವಿ.ಎಸ್ ಧನಂಜಯ್ ಕುಮಾರ್, ವಿಷಕಂಠ, ಕೃಷ್ಣೆಗೌಡ, ರಮೇಶ್, ಸ್ವಾಮಿ ಕೆ.ಎಸ್. ಶ್ರೀನಿವಾಸ್, ರಾಮಕೃಷ್ಣೆಗೌಡ, ಬೆಟ್ಟೇಗೌಡ,ಚಲುವಯ್ಯ,ಮಹೇಶ್ ಗೌಡ, ಬೋರಲಿಂಗೇಗೌಡ, ಮೊಗಣ್ಣೆಗೌಡ, ನಾಗರಾಜಯ್ಯ, ಎಂ.ಪಿ ಪುಟ್ಟರಾಜು, ಪಿ.ಜೆ ನಾರಾಯಣಸ್ವಾಮಿ, ಪ್ರಕಾಶ್, ಶಿವರಾಮು,ಜಗದೀಶ್, ಕುಳ್ಳೇಗೌಡ,ಸೋಮನಾಥ,ಸೇರಿದಂತೆ ರೈತರು ಇದ್ದರು.

What's Your Reaction?

like

dislike

love

funny

angry

sad

wow

Suddi Kirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268, 9686665456 #suddikiranatv #suddikiranaott