ಬಡ ರೈತರನ್ನು ಗುರ್ತಿಸಿ ಸರ್ಕಾರಿ ಸೌಲಭ್ಯಗಳನ್ನು ವಿತರಸಿ-ಕೆ.ಪಿ.ಆರ್.ಎಸ್ ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ
ಭಾಗ್ಯನಗರ: ತಾಲ್ಲೂಕಿನಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಮುಂದಿನ ಬಿತ್ತನೆಗಾಗಿ ರೈತರು ತಮ್ಮ ಜಮೀನುಗಳನ್ನು ಹಸನು ಮಾಡಿಕೊಳ್ಳುವುದರಲ್ಲಿ ರೈತರು ನಿರತರಾಗಿದ್ದು,ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸೇರಿದಂತೆ ರೈತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕೃಷಿ ಇಲಾಖೆ ವತಿಯಿಂದ ಸಕಾಲಕ್ಕೆ ವಿತರಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ ಒತ್ತಾಯಿಸಿದರು.
ಪಟ್ಟಣದ ಸುಂದರಯ್ಯ ಭವನದಿಂದ ಕರ್ನಾಟಕ ಪ್ರಾಂತ ರೈತ ಸಂಘದಿಂದ ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳು ಸಕಾಲಕ್ಕೆ ವಿತರಿಸಬೇಕೆಂದು ಒತ್ತಾಯಿಸಿದ ರೈತ ಮುಖಂಡರು ಬೈಕ್ ರ‍್ಯಾಲಿ ಮೂಲಕ ಕೃಷಿ ಇಲಾಖೆ ಕಚೇರಿ ವರೆಗೂ ಬೈಕ್ ರ‍್ಯಾಲಿ ಮೂಲಕ ಪ್ರತಿಭಟನೆ ನಡೆಸಿದರು.
ನಂತರ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ ಮಾತನಾಡಿ ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರಗಳು ದೊರೆಯದೇ ರೈತರು ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿತ್ತು ಹಾಗೂ ಸರ್ಕಾರದಿಂದ ಉಚಿತವಾಗಿ ಸರಬರಾಜಾಗುವ ಬಿತ್ತನೆ ಬೀಜ ಹಾಗೂ ಕ್ರಿಮಿ ನಾಶಕಗಳನ್ನು ಕಳೆದ ಕೆಲವು ವರ್ಷಗಳಿಂದ ಕೇವಲ ಒಂದೇ ಹಳ್ಳಿಗೆ ಅಥವಾ ಆಯ್ದ ರೈತರಿಗಷ್ಟೇ ವಿತರಣೆ ಮಾಡಲಾಗುತ್ತಿದೆ,ಇದು ರೈತರ ಮಧ್ಯೆ ಪಕ್ಷಪಾತ ಧೋರಣೆಯಾಗಿ ಪರಿನಮಿಸಿದೆ, ಹಾಗೂ ರೈತರು ಖರೀದಿಸುವ ರಸಗೊಬ್ಬರಗಳ ಖರೀದಿಗಾಗಿ ಸರ್ಕಾರ ರೈತರಿಗೆ FID ಕಡ್ಡಾಯ ಮಾಡಿರುವುದು ದುರದೃಷ್ಟಕರ. ಎಷ್ಟೋ ಜನ ರೈತರು ತಮ್ಮ ಜಮೀನುಗಳ ಖಾತೆಗಳು ಅವರ ತಂದೆ ತಾಯಿ ಅಥವಾ ತಾತ-ಅಜ್ಜಂದಿಯರ ಹೆಸರಿನಲ್ಲೇ ಉಳಿದಿದ್ದು,ಇಂತಹ ಜಮೀನುಗಳ ಫವತಿವಾರಸು ಖಾತೆಗಳನ್ನು ಪರಿಷ್ಕರಿಸಬೇಕಿರುವುದು ಕಂದಾಯ ಇಲಾಖೆಯ ಜವಾಬ್ದಾರಿ. ಆದರೆ ಕಂದಾಯ ಇಲಾಖೆ ಈ ಬಗ್ಗೆ ವಿಶೇಷಅಭಿಯಾನ ಕೈಗೊಂಡಿದ್ದರೂ ಆಗಬೇಕಿರುವುದು ಇನ್ನೂ ಬಹಳಷ್ಟಿದೆ. ಇನ್ನು ಅನೇಕ ಭೂರಹಿತರು ಬೇರೆಯವರ ಜಮೀನುಗಳನ್ನು ಗುತ್ತಿಗೆ ಆಧಾರದ ಪದ್ಧತಿಯಲ್ಲಿ ಉಳುಮೆ ಮಾಡಿಕೊಂಡು ವ್ಯವಸಾಯ ಮಾಡುತ್ತಿರುವವರು FID ನಿಯಮದ ಮೂಲಕ ಪಡೆಯಲು ಹೇಗೆ ಸಾಧ್ಯ.? ಈ ಎಲ್ಲಾ ರೈತರ ಸಮಸ್ಯೆಗಳು ಸರ್ಕಾರಕ್ಕೆ ತಿಳಿದಿದ್ದರೂ ಸಹ FID ಕಡ್ಡಾಯ ಮಾಡಿರುವುದರಿಂದ ಅನೇಕ ರೈತರಿಗೆ ಸರ್ಕಾರಿ ಸೌಲಭ್ಯಗಳು ಲಭಿಸದಂತೆ ಆಗಿದೆ ಆದ್ದರಿಂದ ಕೂಡಲೇ ರೈತರು ಖರೀದಿಸುವ ರಸಗೊಬ್ಬರಗಳ ಖರೀದಿಗಾಗಿ ಸರ್ಕಾರ ರೈತರಿಗೆ FID ಕಡ್ಡಾಯ ಮಾಡಿರುವ ನಿಯಮವನ್ನು ವಾಪಾಸ್ ಪಡೆದು ತಾಲ್ಲೂಕಿನ ಅನ್ನದಾತರ ಹಿತದೃಷ್ಟಿಯಿಂದ ಸರ್ಕಾರದಿಂದ ಬರುವ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳು ಸಕಾಲಕ್ಕೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ
ಸಂಘಟನಾ ಕಾರ್ಯದರ್ಶಿ ಚನ್ನರಾಯಪ್ಪ ಖಜಾಂಚಿ ಕೃಷ್ಣಪ್ಪ. ಸಿಪಿಎಂ ತಾಲೂಕು ಸಮಿತಿ ಸದಸ್ಯರಾದ ವಾಲ್ಮೀಕಿ ಅಶ್ವತಪ್ಪ ನರಸಿಂಹರೆಡ್ಡಿ.ರಘುರಾಮರೆಡ್ಡಿ. ಮುನಿವೆಂಕಟಪ್ಪ.ನಾಗರಾಜಪ್ಪ.ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.. ವರದಿ ಸುಬ್ಬು ಭಾಗ್ಯನಗರ
What's Your Reaction?