ಬೇತಮಂಗಲದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕಿ ರೂಪಕಲಾ 

ಬೇತಮಂಗಲದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕಿ ರೂಪಕಲಾ 

   ಬೇತಮಂಗಲ: ಸಾರ್ವಜನಿಕರ ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶದಿಂದ  ಶಾಸಕಿ ರೂಪಕಲಾ ಅವರು ಬೇತಮಂಗಲ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಅಂಗನವಾಡಿ ಕೇಂದ್ರಗಳು ಹಾಗೂ ಹೈಮಾಸ್ ದೀಪಗಳನ್ನು ಉದ್ಘಾಟಿಸಿದರು.

ಪಟ್ಟಣದ ಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶಾಸಕಿ ರೂಪಕಲಾ ಪಟ್ಟಣದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಹಲವು ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಮತ್ತೊಂದು ಘಟಕವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭಿಸಲಾಗಿದೆ. ಶುದ್ಧ ನೀರಿನ ಬಳಕೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾರ್ವಜನಿಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ  ಅಡಿಯಲ್ಲಿ ನಿರ್ಮಿಸಲಾದ ಬ್ಲಾಕ್–01 ಸರ್ಕಾರಿ ಶಾಲೆ ಆವರಣ, ಬ್ಲಾಕ್–03 ಅಂಬೇಡ್ಕರ್ ನಗರ ಹಾಗೂ ಬ್ಲಾಕ್–04 ಹನುಮಂತ ನಗರದಲ್ಲಿನ ನೂತನ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟಿಸಿದರು.
ಇದರ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ಅಳವಡಿಸಲಾದ ಹೈಮಾಸ್ ದೀಪಗಳನ್ನು ಸಹ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಜಿಪಂ ಮಾಜಿ ಸದಸ್ಯ ಅ ಮು ಲಕ್ಷ್ಮೀ ನಾರಾಯಣ್, ಗ್ರಾಪಂ ಮಾಜಿ ಅಧ್ಯಕ್ಷ ವಿನೂ ಕಾರ್ತಿಕ್ ಹಂಗಳ ರಮೇಶ್, ರಾಮ್ ಬಾಬು, ಸ್ಕೂಲ್ ವೆಂಕಟೇಶಪ್ಪ, ಮುಖಂಡರಾದ ಚಂದ್ರ ಕಾಂತ್, ಬೆಟ್ಕೂರು ಸೀನ, ಮಂಜುನಾಥ್ ರೆಡ್ಡಿ, ಚಿದಂಬರಂ, ಸುರೇಂದ್ರ ಗೌಡ, ಎನ್ ಡಿ ಶಿವ, ಬನ್ನಿ, ಎಜಾಜ್ ಪಾಷ, ಸುಕನ್ಯಾ, ಕಮಲೇಶ್ ಸೇರಿದಂತೆ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು. 

ಚಿತ್ರ 01: ಬೇತಮಂಗಲದಲ್ಲಿ ಶಾಸಕಿ ರೂಪಕಲಾ ಅವರು ಶುದ್ಧ ಕುಡಿಯುವ ನೀರಿನ ಘಟಕ, ಅಂಗವಾಡಿ ಕೇಂದ್ರಗಳು ಮತ್ತು ಹೈ ಮಾಸ್ ಲೈಟ್ ಗಳನ್ನು ಉದ್ಘಾಟಿಸಿದರು.