ವಿಶ್ವ ಕನ್ನಡ ಕಲಾ ಸಂಸ್ಥೆಯಿಂದ ರಾಜ್ಯ ಮಟ್ಟದ ಆಷಾಢ ಮಾಸದ ಕವಿಗೋಷ್ಠಿ ಯಶಸ್ವಿ

Jun 15, 2026 - 08:09
 0  23
ವಿಶ್ವ ಕನ್ನಡ ಕಲಾ ಸಂಸ್ಥೆಯಿಂದ ರಾಜ್ಯ ಮಟ್ಟದ ಆಷಾಢ ಮಾಸದ ಕವಿಗೋಷ್ಠಿ ಯಶಸ್ವಿ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ತೋಟದ ಗುಡ್ಡದಹಳ್ಳಿ, ಜೂನ್ 14: ವಿಶ್ವ ಕನ್ನಡ ಕಲಾ ಸಂಸ್ಥೆಯ ವತಿಯಿಂದ ರಾಜ್ಯ ಮಟ್ಟದ ಆಷಾಢ ಮಾಸದ ಕವಿಗೋಷ್ಠಿಯು ದಿನಾಂಕ 14-06-2026 ರಂದು ತೋಟದ ಗುಡ್ಡದಹಳ್ಳಿ ಪ್ರಕೃತಿ ಬಡಾವಣೆಯ ಆನಘ ನಿಲಯದ ಮನೆ ಅಂಗಳದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕವಿ ಹಾಗೂ ಕನ್ನಡ ಪರ ಚಿಂತಕರಾದ ವೈ.ಬಿ.ಎಚ್. ಜಯದೇವ್ ವಹಿಸಿದ್ದರು. ಅವರು ಮಾತನಾಡಿ, ಕನ್ನಡ ಕಾರ್ಯಕ್ರಮಗಳನ್ನು ವಿವಿಧ ಪ್ರದೇಶಗಳಲ್ಲಿ ಆಯೋಜಿಸುವುದರಿಂದ ಕನ್ನಡ ಭಾಷೆಯ ಪ್ರಸಾರ ಹೆಚ್ಚಾಗುವುದರ ಜೊತೆಗೆ ಭಾಷೆಯ ಬಗ್ಗೆ ಜನರಲ್ಲಿ ಅಭಿಮಾನ ಮತ್ತು ಆಸಕ್ತಿ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಮನೆ ಅಂಗಳದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ವಿಶ್ವ ಕನ್ನಡ ಕಲಾ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಅವರು, ಇದು ಹಲವರಿಗೆ ಸ್ಪೂರ್ತಿದಾಯಕವಾಗಲಿದೆ ಎಂದರು.

ವಿಶ್ವ ಕನ್ನಡ ಕಲಾ ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷರಾದ ಈ. ರವೀಶ ಅಕ್ಕರ ಅವರು ಮಾತನಾಡಿ, ಕವಿಗಳು ತಮ್ಮ ಕವನ ವಾಚನ ಮುಗಿದ ಕೂಡಲೇ ಕಾರ್ಯಕ್ರಮದಿಂದ ನಿರ್ಗಮಿಸದೆ, ಇತರ ಕವಿಗಳ ಕವಿತೆಗಳನ್ನು ಆಲಿಸಿ ಅನುಭವ ಪಡೆದು ತಮ್ಮ ಸಾಹಿತ್ಯಿಕ ಬೆಳವಣಿಗೆಗೆ ಅವಕಾಶ ಕಲ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಕಾದಂಬರಿಕಾರ್ತಿ, ಪ್ರಾಧ್ಯಾಪಕಿ ಹಾಗೂ ಕವಯತ್ರಿ ಡಾ.ಸಿ.ನಂದಿನಿ ಅವರು, ಕವಿಗಳು ಹೆಚ್ಚು ಹೆಚ್ಚು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಹಳೆಗನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿ ಅದರ ಶೈಲಿಯಲ್ಲಿ ಕವನ ರಚನೆಗೆ ಪ್ರಯತ್ನಿಸಬೇಕು ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಹಳೆಗನ್ನಡದ ಬಳಕೆ ಕಡಿಮೆಯಾಗುತ್ತಿರುವುದರಿಂದ ಯುವ ಕವಿಗಳು ಅದನ್ನು ಅಭ್ಯಾಸ ಮಾಡಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯಿಂದ ಆಗಮಿಸಿದ್ದ ಕು.ಮೌನ ಹಾಗೂ ಪಾವಗಡದಿಂದ ಬಂದ ನಿಹಾರಿಕಾ ಅವರು ಮನಮೋಹಕ ನೃತ್ಯ ಪ್ರದರ್ಶನ ನೀಡಿ ನೆರೆದಿದ್ದವರನ್ನು ರಂಜಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 35ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿ ಸಾಹಿತ್ಯಾಸಕ್ತರ ಮೆಚ್ಚುಗೆ ಗಳಿಸಿದರು.

ಈ ಸಂದರ್ಭದಲ್ಲಿ ಹಿರಿಯೂರಿನ ವಿಶ್ವ ಕನ್ನಡ ಕಲಾ ಸಂಸ್ಥೆಯು ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ, ಸೆಪ್ಟೆಂಬರ್ 6 ರಂದು ಭಾನುವಾರದಂದು ಬೃಹತ್ ಕನ್ನಡ ಸಂಭ್ರಮೋತ್ಸವ ವನ್ನು ಆಚರಿಸಲು ನಿರ್ಧರಿಸಿರುವುದಾಗಿ ಘೋಷಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕವಿಗಳಿಗೆ ವಿಶ್ವ ಕನ್ನಡ ಕಲಾ ಸಂಸ್ಥೆಯ ಅಧ್ಯಕ್ಷ ರವೀಶ ಅಕ್ಕರ ಅವರು ನೆನಪಿನ ಕಾಣಿಕೆ, ವಿಶೇಷ ಸನ್ಮಾನ ಪತ್ರ ಹಾಗೂ ಕನ್ನಡ ಶಾಲು ನೀಡಿ ಗೌರವಿಸಿದರು.

ಜೊತೆಗೆ ನಿಹಾರಿಕಾ ನಟಿಸಿರುವ ಒಲವಿನ ಲಾಲಿ ಸಿನಿಮಾ ಆಲ್ಬಮ್ ಅನ್ನು ಸಂಸ್ಥಾಪಕ ಅಧ್ಯಕ್ಷರಾದ ಡಾ ಈ ರವೀಶ ಅಕ್ಕರ ಬಿಡುಗಡೆಗೊಳಿಸಿದರು 

ಕಾರ್ಯಕ್ರಮವನ್ನು ಯಯಬಸವರಾಜ ಆರಬಘಟ್ಟ (ದೂರದರ್ಶನ ವಾಹಿನಿಯ ನಿರೂಪಕರು) ಅವರು ನಿರೂಪಿಸಿದರು. ಕು. ಮೌನ ಪ್ರಾರ್ಥನೆ ನೆರವೇರಿಸಿದರು. ಸಾ.ರಾ. ಗೀತಾ ಭಾರತಿ ಮತಿಘಟ್ಟ ಅವರು ಸ್ವಾಗತಿಸಿದರು. ಚೈತ್ರಾ ಅವರು ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮವು ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡಾಭಿಮಾನದ ಸಮನ್ವಯದೊಂದಿಗೆ ಯಶಸ್ವಿಯಾಗಿ ನೆರವೇರಿತು.

What's Your Reaction?

like

dislike

love

funny

angry

sad

wow

Suddi Kirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268, 9686665456 #suddikiranatv #suddikiranaott