ತಾಪಮಾನದ ವೈಪರಿತ್ಯ ತಡೆಗಟ್ಟಲು ಪ್ರತಿಯೊಬ್ಬ ಪ್ರಜೆಯು ಮುಂದಾಗ ಬೇಕಿದೆ ದರ್ಶನ್ ಪುಟ್ಟಣ್ಣಯ್ಯ
ಮಂಡ್ಯ : ತಾಪಮಾನದ ವೈಪರೀತ್ಯ ತಡೆಗಟ್ಟಲು ಪ್ರತಿಯೊಬ್ಬ ಪ್ರಜೆಯೂ ಮುಂದಾಗಬೇಕಿದೆ ಎಂದು ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಿಸಿದರು.
ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಸಮಾಜ ಕಾರ್ಯ ವಿಭಾಗ, ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದ ಪರಿಸರ ಸಮೃದ್ದಿ ಗ್ರಾಮೀಣ ಕಾರ್ಯ ಶಿಬಿರದಲ್ಲಿ ಸಮಾರೋಪ ಭಾಷಣ ಮಾಡಿ ಮಾತನಾಡಿದರು.
ಪರಿಸರದಲ್ಲಿ ಸಮನ್ವಯ ಸಾಽಸಲು ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕಾದದ್ದು ಜರೂರಾಗಬೇಕಿದೆ. ಮುಂಗಾರು ಮಳೆಯ ಪ್ರಸ್ತುತ ಸೂಚನೆಗಳು ತಲ್ಲಣಗೊಳಿಸಿದೆ. ಇದರಿಂದ ನಾವು ಕಲಿಯಬೇಕಾದ ಪಾಠಗಳು ಸಾಕಷ್ಟಿದೆ. ಜಾಗತಿಕ ತಾಪಮಾನ ಸಾಕಷ್ಟು ಅವಘಡಗಳನ್ನು ಸೃಷ್ಠಿಸುತ್ತಿದೆ. ಇಂದಿನ ನಾಗರೀಕರು ಸಸಿ ಅಥವಾ ಪರಿಸರಕ್ಕೆ ಸಂಬಂಽಸಿದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕಿರುವುದು ತುಂಬಾ ಅವಶ್ಯಕವಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸಮೃದ್ದಿಯ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಕಾಮಗಾರಿಗುಚ್ಚಗಳಲ್ಲಿ ಜಲಸಂರಕ್ಷಣೆ, ಅರಣ್ಯೀಕರಣ, ಸ್ವಚ್ಛತೆಗೆ ವಿಶೇಷ ಗಮನ ಕೊಡಬೇಕಾಗಿದೆ ಎಂದು ಆಡಳಿತ ವರ್ಗಕ್ಕೆ ಸಲಹೆ ನೀಡಿದರು.
ಸಮಾಜ ಕಾರ್ಯವಿದ್ಯಾರ್ಥಿಗಳು ಗ್ರಾಮದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯೊಡನೆ ಶ್ರಮದಾನದ ಮೂಲಕ ಸಸ್ಯ ಸಂಕುಲಗಳ ಬೆಳವಣಿಗೆಗೆ ವಿಶೇಷ ಗಮನ ಹರಿಸಿರುವುದಕ್ಕೆ ಶ್ಲಾಸಿದರು.
ಮಾಜಿ ಶಾಸಕ ಎಚ್.ಬಿ. ರಾಮು ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಒಗ್ಗಟ್ಟಿನಿಂದ ಗ್ರಾಮಾಭಿವೃದ್ದಿ ಯೋಜನೆಗಳಿಗೆ ಸಹಕರಿಸಬೇಕಿದೆ. ಪರಿಸರ, ಶಿಕ್ಷಣ, ಆರೋಗ್ಯ ಇವು ದೈನಂದಿನ ಕಾರ್ಯಗಳಾಗಿದೆ. ಇಂದಿನ ದಿನಗಳಲ್ಲಿ ಸದ್ಭಾವನೆ ಹೊಂದಿರುವ ಜನರು ಶ್ರೇಷ್ಠ ಕಾರ್ಯಗಳಲ್ಲಿ ಮಗ್ನರಾಗಿ ಇಂದಿನ ಮಕ್ಕಳು ಮತ್ತು ಯುವಜನರಿಗೆ ಮಾದರಿಆಗಬೇಕಿದೆ ಎಂದರು.
ಗ್ರಾಮದಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಪರಿಸರ ಸಂರಕ್ಷಣೆ ಕಾರ್ಯಗಳನ್ನು ಮುಂದುವರಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಮೀಕ್ಷೆ ಅಥವಾ ನಕ್ಷೆ ತಯಾರಿಕೆಗೆ ಸೀಮಿತವಾಗಿದೆ ಮಾಟೆಂಗ್ಸಿಂಗ್ ಔಲುವಾಲಿಯಾ ಅವರ ಆಲೋಚನಾ ಕ್ರಮವನ್ನು ಅರ್ಥೈಸಿಕೊಂಡು ಹಳ್ಳಿಯಿಂದ ನಗರ ಪ್ರದೇಶಕ್ಕೆ ವಲಸೆ ಹೋಗುವ ಜನರನ್ನು ಗಮನದಲ್ಲಿಟ್ಟುಕೊಂಡು ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸುವಂತಾಗಲು ಈ ಶಿಬಿರಗಳು ಸಾಧ್ಯವಾಗಿದೆ ಎಂದರು.
ಸರ್ ಎಂ.ವಿ. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಎಚ್.ವಿ. ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಹೊಳಲು ಗ್ರಾಮದಲ್ಲಿ ಅಧ್ಯಯನ ನಡೆಸಿದ ವಿವರಗಳನ್ನು ಗ್ರಾಮಾಡಳಿತ, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ತಲುಪಿಸುತ್ತೇವೆ. ಗ್ರಾಮದಲ್ಲಿನ ಆರೋಗ್ಯ, ಶಿಕ್ಷಣ, ಆರ್ಥಿಕ ಸಮಾನತೆಯನ್ನು ಪಾಲಿಸುವ ವರದಿಯನ್ನು ಮಕ್ಕಳು ಸಮೀಕ್ಷೆ ಮಾಡಿರುತ್ತಾರೆ. ಇದರ ಆಧಾರದ ಮೇಲೆ ಅಭಿವೃದ್ದಿಪರ ಯೋಜನೆಗಳನ್ನು ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್. ಶಿವಣ್ಣ ಕ್ರೀಡಾ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿದರು. ಬ್ಯಾಂಕ್ ಆ್ ಬರೋಡದ ಸಾರ್ಥಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಕೆ.ಪಿ. ಅರುಣಕುಮಾರಿ, ಮೈಸೂರು ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರವೌಳಿ, ತಾಂಡವೇಶ್ವರ ದೇವಾಲಯದ ಅಭಿವೃದ್ದಿ ಸಮಿತಿ ಅಧ್ಯಕ್ಷ ರಾಮು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಧಾ, ಪಂಚಾಯಿತಿ ಅಭಿವೃದ್ದಿ ಅಽಕಾರಿ ಸುನಿಲ್, ಗ್ರಾಮ ಆಡಳಿತ ಅಽಕಾರಿ ಗುಣಶೇಖರ್, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಸುನಿಲ್, ಕಿರಣ್, ಯುವ ಮುಖಂಡ ಸಂತೋಷ್, ಕೆ.ಎಂ. ಕೃಷ್ಣೇಗೌಡ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಹೊಳಲು ಗ್ರಾಮದ ದೊಡ್ಡಯ್ಯಸ್ವಾಮಿ, ಮೂಡಲು ಬಸವೇಶ್ವರ ಹಾಗೂ ಸಾರ್ವಜನಿಕ ಸ್ಮಶಾನದಲ್ಲಿ 300 ಗಿಡಗಳನ್ನು ನಾಟಿ ಮಾಡಲಾಯಿತು. ತರುವಾಯ ಗ್ರಾಮಸ್ಥರುಗಳಿಗೆ ಸಾವಿರಾರು ಹಣ್ಣಿನ ಗಿಡಗಳು ಮತ್ತು ಅರಣ್ಯಕ್ಕೆ ಪೂರಕವಾದ ಗಿಡಗಳನ್ನು ವಿತರಿಸಲಾಯಿತು. ರಕ್ತದಾನ ಶಿಬಿರ, ಗ್ರಾಮೀಣ ಕ್ರೀಡಾಕೂಟ, ಆರೋಗ್ಯ ತಪಾಸಣೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗ್ರಾಮೀಣ ರೈತ ಮಹಿಳೆಯರಿಗೆ ಬಟ್ಟೆ ಬ್ಯಾಗ್ ವಿತರಣೆ, ಆರ್ಥಿಕ ಸಾಕ್ಷರತೆ ಹಾಗೂ ಬ್ಯಾಂಕುಗಳಲ್ಲಿ ಸಿಗುವ ವಿಮೆಗಳ ಕುರಿತು ಸಾಮಾಜಿಕ ಭದ್ರತಾ ಯೋಜನೆಗಳ ನೋಂದಾವಣೆ ಆಂದೋಲನ ಕಾರ್ಯಕ್ರಮ ಹಾಗೂ ಗ್ರಾಮೀಣ ಮಹಿಳೆಯರಿಗೆ ಕೋಲಾಟ ತರಬೇತಿ ನೀಡಿ ಪ್ರದರ್ಶನ ನಡೆಯಿತು.