ಕೆಜಿಎಫ್ ನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆ

ಕೆಜಿಎಫ್ ನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆ

       ಕೆಜಿಎಫ್: ನಗರದಲ್ಲಿ ಇದೇ 27 ರಂದು ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸರಳವಾಗಿ ವಿಜೃಂಭಣೆಯಿಂದ ನಡಿಸಲು ತೀರ್ಮಾನಿಸಲಾಯಿತು. 

ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ನಾಡ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಇದೇ ತಿಂಗಳು 27 ನೇ ತಾರೀಕು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರು ಎಸ್.ಎನ್. ರಾಜಗೋಪಾಲಗೌಡ. ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಎಲ್ಲಾ ಸಮುದಾಯದವರನ್ನು. ಗೌರವದಿಂದ ನೋಡಿದ ಮಹಾನ್ ನಾಯಕ ಅಂಥವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಾವು ಪ್ರತಿ ವರ್ಷದಂತೆ ಈ ವರ್ಷ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು. ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪ ಅಲಂಕಾರ ಮಾಡಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಾಡಪ್ರಭು ಕೆಂಪೇಗೌಡ ಭಾವಚಿತ್ರವನ್ನು ಇಟ್ಟು. ಗೌರವ ಸಲ್ಲಿಸಬೇಕು. 
ತಾಲೂಕ್ ಆಡಳಿತ ವತಿಯಿಂದ. ನಮ್ಮ ಒಕ್ಕಲಿಗ ಸಮುದಾಯದ ಪ್ರಗತಿಪರ ರೈತರಿಗೆ. ಹಾಗೂ ಇತರ ರೈತರಿಗೂ ಸಹ. ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ  ಗೌರವ ಸಲ್ಲಿಸಬೇಕೆಂದು ತಿಳಿಸಿದರು. 

ರೆಡ್ಡಿ ಸಮುದಾಯದ ಮುಖಂಡರಾದ ವೆಂಕಣ್ಣ ರೆಡ್ಡಿ ಮಾತನಾಡಿ ಕೆಂಪೇಗೌಡರು. ಎಲ್ಲಾ ಜಾತಿ ಧರ್ಮಗಳಿಗೆ ಬೇಕಾದ ವ್ಯಕ್ತಿ. ಅವರು ನಿರ್ಮಿಸಿರುವ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಅಲ್ಲಿ ಎಲ್ಲಾ ಧರ್ಮ ಜಾತಿ ಭೇದವಿಲ್ಲದೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರ ಉದ್ದೇಶ ಒಂದೇ ದೂರ ದೃಷ್ಟಿ ಇಟ್ಟುಕೊಂಡು ನಾಡನ್ನ ನಿರ್ಮಿಸಿದ್ದು, ಅವರಿಗೆ ನಾವು ಗೌರವ ನೀಡುವುದು ನಮ್ಮ ಅದ್ಯ ಕರ್ತವ್ಯ ಎಂದು ತಿಳಿಸಿದರು.

ಒಕ್ಕಲಿಗ ಸಮುದಾಯದ ಮುಖಂಡರು. ಆ ಮು.ಲಕ್ಷ್ಮ ನಾರಾಯಣ ಮಾತನಾಡಿ ಕೆಂಪೇಗೌಡರಂತ ಮಹಾ ನಾಯಕರ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಣೆ ಮಾಡೋಣ ಅವರಿಗೆ ಗೌರವ ಸಲ್ಲಿಸೋಣ ಎಂದರು. 
ಈ ಸಂದರ್ಭದಲ್ಲಿ. ತಹಶೀಲ್ದಾರ್. ಎಚ್‌.ಜೆ ಭರತ್. ನಾಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು. ಧರ್ಮೇಂದ್ರ. ಸಿಡಿಪಿಓ. ರಾಜೇಶ್.  ನಗರಸಭೆ. ಜಯರಾಮ್. ಬೆಸ್ಕಾಂ. ಹೇಮಲತಾ. ಹಾಗೂ ಒಕ್ಕಲಿಗ ಸಮುದಾಯದ ಮುಖಂಡರಾದ ವರದರಾಜಯ್ಯ. ವಕೀಲರು ವೆಂಕಟರಾಮಯ್ಯ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾಣಿಕ್ಯಂ. ಸುರೇಶ್ ಕುಮಾರ್ ಯರನಾಗನಹಳ್ಳಿ . ಮೂರ್ತಿ.ನಂದಿನಿ ಶ್ರೀನಿವಾಸ್. ತರನಾಥ್.ಸುರೇಶ್ ಚಂಬಾಸ್ನಳ್ಳಿ .ನಾಗರಾಜ್.ಫ್ರೂಟ್ಸ್ •ಮಂಜು ಮಸ್ಕಾಂ.
ಕೋದಂಡರಾಮಯ್ಯ ಮಸ್ಕಾಂ.