ರಾಮಲಿಂಗಾರೆಡ್ಡಿಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆಗೆ ಅರ್ಚಕರ ಸಂಘ ಆಗ್ರಹ
ಕೆಜಿಎಫ್:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆ ನೀಡಬೇಕೆಂದು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕೆಜಿಎಫ್ ತಾಲೂಕಿನ ಅಧ್ಯಕ್ಷ ಡಾ.N. ಮಂಜುನಾಥ್ ದೀಕ್ಷಿತ್ ಒತ್ತಾಯಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ, ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ರಾಮಲಿಂಗಾರೆಡ್ಡಿಯವರು ಮುಜರಾಯಿ ಖಾತೆಯನ್ನು ಯಶಸ್ವಿಯಾಗಿ ನಡೆಸಿದ್ದು, ಅವರ ಅಧಿಕಾರದಲ್ಲಿ ಹಿಂದೆ ಆಗದ ಅನೇಕ ಅಭಿವೃದ್ಧಿಯ ಕೆಲಸಗಳು ನಡೆದವು. ಅರ್ಚಕರ ನೋವುಗಳಿಗೆ ಸ್ಪಂದಿಸಿದ ಅವರು ರಾಜ್ಯ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಶ್ರೀವತ್ಸ ಅವರ ಮನವಿಗೆ ಸ್ಪಂದಿಸಿ ಒಂದೇ ದಿನದಲ್ಲಿ ಹಲವು ಆದೇಶಗಳನ್ನು ಮಾಡಿಸಿ ಇತಿಹಾಸ ನಿರ್ಮಿಸಿದರೆಂದು ತಿಳಿಸಿದರು.
ಜತೆಗೆ 'ಸಿ' ವರ್ಗದ ಮುಜರಾಯಿ ದೇವಾಲಯಗಳ ಅರ್ಚಕರ ಮಕ್ಕಳಿಗೆ 7 ಸಾವಿರ ರೂಗಳಿಂದ 1 ಲಕ್ಷದವರೆಗೆ ವಿದ್ಯಾ ಧನಸಹಾಯ ನೀಡಲು ಆದೇಶ ಮಾಡಿಸಿದ್ದಾರೆ. ಅರ್ಚಕರು ಮರಣ ಹೊಂದಿದರೆ 2 ಲಕ್ಷದವರೆಗೆ ಪರಿಹಾರ ಧನಸಹಾಯ ಮಾಡಲು ಆದೇಶ, ಬೆಂಗಳೂರು ಎಂಎಸ್ ಬಿಲ್ಡಿಂಗ್ ಎದುರು ಇರುವ ಮುಜರಾಯಿ ಇಲಾಖೆಗೆ ಸೇರಿದ ಸಾವಿರಾರು ಕೋಟಿ ಬೆಲೆ ಬಾಳುವ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಆಯಾಯ ದೇವಾಲಯದ ಹೆಸರಿಗೆ ಖಾತೆ ಪಹಣಿ ಇಂಡೀಕರಣ ಮಾಡಿಸಿದ ಕೀರ್ತಿ ರಾಮಲಿಂಗಾರೆಡ್ಡಿ ಯವರಿಗೆ ಸೇರಿದ್ದು ಎಂದರು.
ಮುಜರಾಯಿ ಇಲಾಖೆಯಲ್ಲಿ ಅನೇಕ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ರಾಮಲಿಂಗಾರೆಡ್ಡಿಯವರಿಗೆ ಜಲಸಂಪನ್ಮೂಲ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಮುಜರಾಯಿ ಇಲಾಖೆಯ ಖಾತೆಯನ್ನು ನೀಡಬೇಕೆಂದು ಮುಜರಾಯಿ ಅರ್ಚಕರು ಹಾಗೂ ಆಗಮಿಕರ ಸಂಘದ ಸದಸ್ಯರ ಒತ್ತಾಯವಾಗಿದ್ದು, ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಂಘದಿಂದ ಶಾಂತಿಯುತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರು ಗುರು ದೀಕ್ಷಿತ್. ಪ್ರಧಾನ ಕಾರ್ಯದರ್ಶಿ ಮನೋಹರ್ ದೀಕ್ಷಿತ್. ಖಜಂಚಿ ಸುದರ್ಶನ್ ಚಾರ್. ಉಪಾಧ್ಯಕ್ಷರು ಶ್ಯಾಮ್ ಸುಂದರ್ ಭಟ್. ಉಪಾಧ್ಯಕ್ಷರು ರಾಮರಾವ್. ಸಹ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ. ಶ್ರೀಮನ್ ಚಾರ್. ಅನಂತಚಾರ್. ಇನ್ನು ಪ್ರಮುಖರು ಹಾಜರಿದ್ದರು.
What's Your Reaction?