ಸೊಲ್ಲಾಪುರದಮ್ಮ ದೇವಿ ವಾರ್ಷಿಕೋತ್ಸವ: ದೇವರ ದರ್ಶನ ಪಡೆದ ಶಾಸಕಿ ರೂಪಕಲಾ
ಬೇತಮಂಗಲ: ಇಲ್ಲಿಗೆ ಸಮೀಪದ ಬೆಟ್ಕೂರು ಗ್ರಾಮದ ಗಂಗಮ್ಮ-ಸಲ್ಲಾಪುರಮ್ಮ ದೇವಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಶಾಸಕಿ ರೂಪಕಲಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ವಾರ್ಷಿಕೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಲಂಕಾರ ಅಳವಡಿಸಲಾಗಿತ್ತು ಹಾಗೂ ದೇವಸ್ಥಾನವನ್ನು ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಗೊಳಿಸುತಿತ್ತು.
ಶಾಸಕಿ ರೂಪಕಲಾ ಮಾತನಾಡಿ ಗ್ರಾಮದಲ್ಲಿ ಒಗ್ಗಟ್ಟಿದ್ದರೆ ಮಾತ್ರ ಇಂತಹ ದೈವ ಕಾರ್ಯಗಳನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತದೆ, ಗ್ರಾಮೀಣ ಭಾಗದ ಇಂತಹ ಸಾಂಪ್ರದಾಯಿಕ ಹಬ್ಬಗಳು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸುತ್ತವೆ. ಜನರಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಮೂಡಿಸುತ್ತವೆ. ಶ್ರೀ ಗಂಗಮ್ಮ ಹಾಗೂ ಸಲ್ಲಾಪುರಮ್ಮ ದೇವಿಯು ಕ್ಷೇತ್ರದ ಎಲ್ಲಾ ಜನರಿಗೂ ಆಯುಷ್ಯ, ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಾಯಿ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸಿದರು.
ಸಮುದಾಯ ಭವನಕ್ಕೆ ಗ್ರಾಮಸ್ಥರ ಬೇಡಿಕೆ ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಸಮುದಾಯದ ಭವನ ನಿರ್ಮಾಣದ ಬೇಡಿಕೆಯನ್ನು ಶಾಸಕಿಯವರ ಮುಂದಿಟ್ಟರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕಿ ರೂಪಕಲಾ, ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಶಾಸಕರಿಂದ ರಸಮಂಜರಿ ಕಾರ್ಯಕ್ರಮ ಆಯೋಜನೆ: ಗಂಗಮ್ಮ ಹಾಗೂ ಸಲ್ಲಾಪುರಮ್ಮ ಉರ ಹಬ್ಬದ ಪ್ರಯುಕ್ತ ಶಾಸಕಿ ರೂಪಕಲಾ ರಿಂದ ರಸಮಂಜರಿ (ಆರ್ಕೆಷ್ಟ್ರ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಖಂಡರಾದ ಆಂಜಪ್ಪ, ಶ್ರೀನಿವಾಸ್ ಗೌಡ, ಆನಂದ ಗೌಡ, ಮುನೇಗೌಡ, ಗಂಗರಾಜು, ಗಂಗಿರೆಡ್ಡಿ, ಕಾರಿ ಪ್ರಸನ್ನ, ಸುರೇಂದ್ರ ಗೌಡ, ಪದ್ಮನಾಭರೆಡ್ಡಿ, ಸೇರಿದಂತೆ ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು.
What's Your Reaction?