ನಾಗಶೆಟ್ಟಿಹಳ್ಳಿ ಪ್ರೀಮಿಯರ್ ಲೀಗ್ ಸೀಸನ್-1 ಕ್ರಿಕೆಟ್ ಪಂದ್ಯಾವಳಿ ಯಶಸ್ವಿ
ಬೇತಮಂಗಲ:ನಾಗಶೆಟ್ಟಿಹಳ್ಳಿಯಲ್ಲಿ ಆಯೋಜಿಸಲಾಗಿದ್ದ ನಾಗಶೆಟ್ಟಿಹಳ್ಳಿ ಪ್ರೀಮಿಯರ್ ಲೀಗ್ (NPL) ಸೀಸನ್-1 ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ಗ್ರಾಮೀಣ ಪ್ರದೇಶದ ಯುವಕರ ಕ್ರೀಡಾ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವು.
ಕ್ರೀಡಾಕೂಟಗಳು ಯುವಕರಲ್ಲಿ ಕ್ರೀಡಾ ಮನೋಭಾವ ಸ್ನೇಹ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಆಯೋಜಕರು ತಿಳಿಸಿದರು.
ಬಹುಮಾನದ ಪ್ರಯೋಜಕರು: ಪ್ರಥಮ ನಗದು ಬಹುಮಾನ 15500 ರವಿ ಅವರಿಂದ ದ್ವಿತೀಯ ಬಹುಮಾನ 7500 ಮೇಸ್ತ್ರಿ ಪ್ರಕಾಶ್ ಮತ್ತು ಚಂದ್ರಶೇಖರ್ ಟ್ರೋಫಿ ನಾಗಶೆಟ್ಟಿಹಳ್ಳಿ ಯುವಕರು ಆಯೋಜನೆ ಮಾಡಿದ್ದರು.
ವಿಜೇತ ತಂಡಗಳು: ಪ್ರಥಮ ಬಹುಮಾನ ಐಸಂದ್ರ ಮಿಟ್ಟೂರು ಹಂಟರ್ಸ್
ದ್ವಿತೀಯ ಬಹುಮಾನ ಗಣೇಶ್ ಇಳೆವನ್ಸ್ ತಂಡಗಳು ಪಡೆದುಕೊಂಡವು.
ಈ ಸಂದರ್ಭದಲ್ಲಿ ಪ್ರಾಯೋಜಕರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
What's Your Reaction?