ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಡಬಲ್ ಚಿನ್ನ : ಸಾಧನೆಗೆ ಅಭಿನಂದನೆ 

ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಡಬಲ್ ಚಿನ್ನ : ಸಾಧನೆಗೆ ಅಭಿನಂದನೆ 

    ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜಾಜಿನಗರದ 
ಎನ್ ಸಿ ಸಿ ಕೆಡೆಟ್ ಸಾರ್ಜೆಂಟ್ ಗೌರಿ ಅವರು 2026 ರ ಜಿ ವಿ ಮೌಲಂಕಾರ್  ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ  ಚಿನ್ನದ ಪದಕಗಳನ್ನು  ಗಳಿಸುವುದರೊಂದಿಗೆ   ದಾಖಲೆಯ ಸಾಧನೆ ಮಾಡಿದ್ದಾರೆ.

 ಓಪನ್ ಸೈಟ್ ವಿಭಾಗದಲ್ಲಿ ಸ್ಪರ್ಧಿಸಿದ್ದ SGT ಗೌರಿ ಅವರು ತಮ್ಮ ಅದ್ಭುತ ಶೂಟಿಂಗ್ ಕೌಶಲ್ಯ ಮತ್ತು ಏಕಾಗ್ರತೆಯಿಂದ ಜೂನಿಯರ್ ಮಹಿಳಾ ಹಾಗೂ ಸೀನಿಯರ್ ಮಹಿಳಾ ವಿಭಾಗಗಳೆರಡರಲ್ಲೂ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದಾರೆ.

ವಿಶೇಷವಾಗಿ, ಎರಡೂ ವಿಭಾಗಗಳಲ್ಲಿ 512 ಅಂಕಗಳನ್ನು ಗಳಿಸಿ ಹೊಸ  ದಾಖಲೆಯನ್ನು ನಿರ್ಮಿಸಿರುವುದು ಅವರ ಸಾಧನೆಯ ಮತ್ತೊಂದು ಮಹತ್ವದ ಹೆಗ್ಗುರುತಾಗಿದೆ. ಅವರ ಶಿಸ್ತು, ನಿರಂತರ ಅಭ್ಯಾಸ, ಆತ್ಮವಿಶ್ವಾಸ ಮತ್ತು ಕ್ರೀಡಾ ಮನೋಭಾವ ಈ ಅದ್ಭುತ ಯಶಸ್ಸಿಗೆ ಕಾರಣವಾಗಿದೆ.
 ಸಾರ್ಜೆಂಟ್. ಗೌರಿ ಅವರ ಈ ಸಾಧನೆಗೆ  ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಗ್ರೂಪ್ ಕಮಾಂಡರ್ ಹಾಗೂ  ಒಂದನೇ ಕರ್ನಾಟಕ 
ಬೆಟಾಲಿಯನ್ ವತಿಯಿಂದ ಮೆಚ್ಚುಗೆ ಮತ್ತು ಅಭಿನಂದನೆ ವ್ಯಕ್ತವಾಗಿದೆ. ಅವರ ಸಾಧನೆಯು ಎನ್ ಸಿ ಸಿ  ಘಟಕಕ್ಕೆ ಮಾತ್ರವಲ್ಲದೆ   ಕಾಲೇಜಿಗೂ ಹೆಮ್ಮೆಯ ವಿಷಯವಾಗಿದೆ.
 ರಾಜಾಜಿನಗರ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಸುರೇಶ್ ಕುಮಾರ್  ಅವರು ಕೂಡ ಸಾರ್ಜೆಂಟ್. ಗೌರಿ ಅವರ ಸಾಧನೆಯನ್ನು ಮೆಚ್ಚಿ ಸನ್ಮಾನಿಸಿ  ಅಭಿನಂದನೆ ಸಲ್ಲಿಸಿ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ  
ಕೆಡೆಟ್‌ಗಳು ಶಿಕ್ಷಣದ ಜೊತೆಗೆ ಕ್ರೀಡೆ, ಶಿಸ್ತು, ನಾಯಕತ್ವ ಮತ್ತು ದೇಶಸೇವೆಯ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
 ಸಾರ್ಜೆಂಟ್  ಗೌರಿ ಅವರ ಈ ಅಪೂರ್ವ ಸಾಧನೆಗೆ ರಾಜಾಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ   ಪ್ರಾಂಶುಪಾಲರು, ಎನ್‌ಸಿಸಿ  ಘಟಕ, ಅಧ್ಯಾಪಕ ವೃಂದ ಹಾಗೂ ಆಡಳಿತ ಸಿಬ್ಬಂದಿ  ಮತ್ತು ಕಾಲೇಜಿನ ಸಮಸ್ತ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.