"ಸಮಕಾಲಿನ ಸಮಸ್ಯಗಳಿಗೆ ಸ್ಪಂದಿಸುವಂತ ಕಾವ್ಯವನ್ನು ಕವಿಗಳು ರಚಿಸಬೇಕು" ಗಣಪತಿ ಗೋ ಚಲವಾದಿ ಅಭಿಮತ

"ಸಮಕಾಲಿನ ಸಮಸ್ಯಗಳಿಗೆ ಸ್ಪಂದಿಸುವಂತ ಕಾವ್ಯವನ್ನು ಕವಿಗಳು ರಚಿಸಬೇಕು" ಗಣಪತಿ ಗೋ ಚಲವಾದಿ ಅಭಿಮತ

 ಮಾಲೂರು ತಾಲ್ಲೂಕು ನಮ್ಮ ಕರ್ನಾಟಕ ಸೇನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ೭೧ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಾಕ್ಟರ್. ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರದಲ್ಲಿ ರಾಜ್ಯೋತ್ಸವ ಕವಿಗೋಷ್ಠಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
  ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣಪತಿ ಗೋ ಚಲವಾದಿ "ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕಾವ್ಯವನ್ನು ರಚಿಸುವ ಜವಾಬ್ದಾರಿ ಇಂದಿನ ತಲೆಮಾರಿನ ಕವಿಗಳ ಮೇಲಿದ್ದು ಕಾವ್ಯವು ಸಹೃದಯರ ಮನವನ್ನು ಮುಟ್ಟುವಂತಿರಬೇಕು ". ಎಂದು ತಿಳಿಸಿದರು. 
    ಕನ್ನಡ ಭಾಷೆಯ ಮಹತ್ವವನ್ನು ಹಾಗೂ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದ ಅಂದಿನ ಸಾಹಿತಿಗಳು ಹಾಗೂ ಹೋರಾಟಗಾರರ ಕುರಿತು ಮಾತನಾಡಿದರು. 
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಹಿರಿಯ ಸಾಹಿತಿ ಡಾ. ಯಲ್ಲಪ್ಪ ಕೆಕೆಪುರ ಅವರು "ಕನ್ನಡ ಸಾಹಿತ್ಯಕ್ಕೆ ಪ್ರಾಚೀನ ಪರಂಪರೆಯಿದ್ದು, ಭಾಷೆಗಾಗಿ ಪಂಪ, ಪೊನ್ನ, ರನ್ನ ಕವಿಗಳಿಂದ ಹಿಡಿದು ವಚನ ಸಾಹಿತ್ಯ, ದಾಸ ಸಾಹಿತ್ಯ, ತತ್ವಪದ ಸಾಹಿತ್ಯದ ಕೊಡುಗೆ ಅನನ್ಯವಾದುದು. ಹಿಂದಿನ ತಲೆಮಾರುಗಳ ಸಾಹಿತ್ಯವನ್ನು ಅಧ್ಯಯನ ಮಾಡುವುದರ ಮೂಲಕ ಹೊಸ ಕಾವ್ಯವನ್ನು ಕಟ್ಟಬೇಕು ಎಂದು ತಿಳಿಸಿದರು.
 
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ನುಡಿದ ಕವಿ ಡಾ. ಜಯಮಂಗಲ ಚಂದ್ರಶೇಖರ್ ಅವರು "ಕವಿಗಳನ್ನು ಪ್ರೋತ್ಸಾನ್ನಡ ರಾಜ್ಯೋತ್ಸವದ ಅಂಗವಾಗಿ 16 ವರ್ಷಗಳಿಂದ ರಾಜ್ಯೋತ್ಸವ ಕವಿಗೋಷ್ಠಿಯನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಕಾವ್ಯಕ್ಕೆ ಮನರಂಜನೆಗಿಂತಲೂ ಸಮಾಜ ಹಿತದ ಆಶಯವಿರಬೇಕು" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕವಿ ಡಾ. ಯಲ್ಲಪ್ಪ ಕೆಕೆಪುರ, ಕವಿ ಗಣಪತಿ ಗೋ ಚಲವಾದಿ ಹಾಗೂ ಎಲ್ಲಾ ಕವಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಗಾಯಕರಾದ ಗುಲ್ಜಾರ್ ಅವರ ನೇತೃತ್ವದಲ್ಲಿ ಸುಗಮ ಸಂಗೀತ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
    ಕವಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯ, ನಮ್ಮ ಕರ್ನಾಟಕ ಸೇನೆಯ ರಾಜ್ಯ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್, ಜಿಲ್ಲಾ ಅಧ್ಯಕ್ಷ ಎಸ್ಎಂ. ರಾಜು ತಾಲೂಕು ಅಧ್ಯಕ್ಷ ಮಾದನಹಟ್ಟಿ ರವಿಕುಮಾರ್, ಎ ಎನ್ ದಯಾನಂದ್, ಆಟೋ ಶೀನಿವಾಸ್ ಉಪಸ್ಥಿತರಿದ್ದರು‌.
  ವಿಶೇಷ ಆಹ್ವಾನಿತರಾಗಿರುವ ಮಾಸ್ತಿ ಕೃಷ್ಣಪ್ಪ, ಮಾಸ್ತಿ ಜಗನ್ನಾಥ, ಕವಿಗಳಾದ ಕೆ. ಮುನಿಕೃಷ್ಣಪ್ಪ, ನ. ಗುರುಮೂರ್ತಿ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ, ನಾರಿಗಾನಹಳ್ಳಿ ಶ್ರೀನಿವಾಸ್, ಟಿ.ಎಂ. ವೆಂಕಟೇಶ್, ಸಿ.ಎಂ. ನಂಜುಂಡಪ್ಪ (ಪಾಸ್ವಾನ್) ವನಿತಾ ಅರಳೇರಿ, ಸಿ.ವೈ. ರಾಧಮ್ಮ, ತಾನೀಶ್, ಲಕ್ಕೂರು ನಾಗರಾಜ್, ದೇವರಾಜ್ ತಂಬಳ್ಳಿ ನಾರಾಯಣಸ್ವಾಮಿ ಬಂಡಹಟ್ಟಿ ಪಿ.ಎಂ. ಕೃಷ್ಣಪ್ಪ, ಲಕ್ಷ್ಮೀಪುರ ಶ್ರೀನಿವಾಸ್, ಅಶೋಕ್ ಬಾಬು, ಚಿನ್ನಯ್ಯ, ಅರಸನಹಳ್ಳಿ ನಾರಾಯಣಸ್ವಾಮಿ, ಕುಡಿಯನೂರು ತಿಮ್ಮರಾಯಪ್ಪ, ನೋ.ಮು. ಕೃಷ್ಣಪ್ಪ, ಸರ್ವೇಶ್ ನಾಗೊಂಡಹಳ್ಳಿ, ಶ್ರೀನಾಥ್ ಆಜಾದ್, ಮಾಲತಿ ಮಂಜುನಾಥ್, ಎ.ಜಿ. ಲಕ್ಷ್ಮಮ್ಮ, ಪುಣ್ಯವತಿ ಬಿ.ವಿ. ಕೃಷ್ಣವೇಣಿ ಮುಂತಾದವರು ಕವನ ವಾಚಿಸಿದರು.