ಶ್ರೀ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಶ್ರೀ ಗದಿಗೆಪ್ಪ ಮ್ಯಾಚರ್

ಶ್ರೀ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಶ್ರೀ ಗದಿಗೆಪ್ಪ ಮ್ಯಾಚರ್
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಶ್ರೀ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ ಗದಿಗೆಪ್ಪ ಮ್ಯಾಚಾರ್ ಕುಕುನೂರು ಗ್ರಾಮ ಹರಿಹರ ತಾಲೂಕು ದಾವಣಗೆರೆ ಜಿಲ್ಲೆಯ ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 26ರಂದು ಧಾರವಾಡದಲ್ಲಿ ನೀಡಿ ಗೌರವಿಸಲಾಗಿದೆ ಶ್ರೀ ಸರ್ವಜನ ಆರ್ಟ್ಸ್ ಕಲರ್ ಟ್ರಸ್ಟ್ ( ರಿ) ಬೆಂಗಳೂರು ಕನ್ನಡ ಮತ್ತು ಸಂಸ್ಕೃತ ಇಲಾಖೆ ಧಾರವಾಡ ಇವರ ಸಹಭಾಗಿತ್ವದಲ್ಲಿ ಎಸ್ ಎಸ್ ಎ ಸಿ ಟಿ ಗೋಲ್ಡನ್ ಅವಾರ್ಡ್ಸ್ ಟ್ರಸ್ಟಿನ 9ನೇ ವರ್ಷದ ವಾರ್ಷಿಕೋತ್ಸವದ ಸಾಂಸ್ಕೃತಿಕ ವೈಭವದೊಂದಿಗೆ ಈ ಕಾರ್ಯಕ್ರಮವನ್ನು ಶ್ರೀ ಸಂತೋಷ್ ಹೆಗಡೆ ನಿವೃತ್ತ ನ್ಯಾಯಾಧೀಶರು ಹಾಗೂ ಲೋಕಾಯುಕ್ತ ಬೆಂಗಳೂರು ಉದ್ಘಾಟನೆಯನ್ನು ಮಾಡಿದರು ಈ ಕಾರ್ಯಕ್ರಮದಲ್ಲಿ ರಾಜ್ಯದ 36 ಜಿಲ್ಲೆಗಳಿಂದ ತಲಾಒಬ್ಬರಂತೆ ಆಯ್ಕೆ ಮಾಡಿ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಇವರಿಗೆ ತಾಲೂಕ್ ಮಟ್ಟ ಪ್ರಶಸ್ತಿ ಜಿಲ್ಲಾಮಟ್ಟ ಪ್ರಶಸ್ತಿಗಳು ರಾಜ್ಯಮಟ್ಟ ಪ್ರಶಸ್ತಿಗಳು ಲಭಿಸಿವೆ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡಿ ಶಿಕ್ಷಕರ ಕುಂದು ಕೊರತೆಗಳನ್ನು ಈಡೇರಿಸುವ ಮೂಲಕ ಮುಂಚೂಣಿಯಲ್ಲಿರುವ ಒಬ್ಬ ಶ್ರೇಷ್ಠ ವ್ಯಕ್ತಿ ಎಂದು ಹೇಳಲಾಗುತ್ತದೆ ಇವರ ಸಮಾಜ ಸೇವೆಯನ್ನು ಗುರುತಿಸಿ ಇಲಾಖೆಯ ದಾವಣಗೆರೆ ಜಿಲ್ಲೆಯ ಉಪನಿರ್ದೇಶಕರು ಹಾಗೂ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲಾ ಶಿಕ್ಷಕ ವೃಂದದವರು ಅವರ ಹಿತೈಷಿಗಳು ಬಂದು ಮಿತ್ರರು ಶುಭಕೋರಿರುತ್ತಾರೆ.