ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬ: ಜಗಳೂರಿನಲ್ಲಿ ರೈತರ ಹೋರಾಟಕ್ಕೆ ಸಜ್ಜು

ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬ: ಜಗಳೂರಿನಲ್ಲಿ ರೈತರ ಹೋರಾಟಕ್ಕೆ ಸಜ್ಜು

      ಜಗಳೂರು: ಮಾಜಿ ಶಾಸಕರಾದ ಹೆಚ್.ಪಿ. ರಾಜೇಶ್ ಅವರು ಜಗಳೂರು ತಾಲೂಕಿನ ಶಕ್ತಿ ಕೇಂದ್ರ ಕಲ್ಲೇದೇವರಪುರದ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ಜಗಳೂರು ತಾಲೂಕು "ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ" ಸಭೆಯಲ್ಲಿ ಭಾಗವಹಿಸಿ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿ ವಿಳಂಬದ ಕುರಿತು ತೀವ್ರವಾಗಿ ಚರ್ಚಿಸಿದರು.

ವರ್ಷಗಳಿಂದ ಜಗಳೂರಿನ ರೈತರು ನೀರಿಗಾಗಿ ಕಾಯುತ್ತಿದ್ದಾರೆ. ಯೋಜನೆ ಜಾರಿಯಾಗಬೇಕಾದ ಸಮಯದಲ್ಲಿ ವಿಳಂಬ ಮುಂದುವರಿಯುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಇದು ಕೇವಲ ನೀರಿನ ಯೋಜನೆಯಲ್ಲ — ಜಗಳೂರಿನ ರೈತರ ಬದುಕು, ಕೃಷಿ ಮತ್ತು ಭವಿಷ್ಯದ ಪ್ರಶ್ನೆ.

ಸರ್ಕಾರ ಇನ್ನು ವಿಳಂಬದ ನೆಪಗಳನ್ನು ಬದಿಗಿಟ್ಟು, ಕಾಮಗಾರಿಗೆ ವೇಗ ನೀಡಿ, ನಿಗದಿತ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಮುಂದಿನ ಹೋರಾಟದ ರೂಪುರೇಷೆಗಳನ್ನು ಪೂರ್ವ ಬಾವಿ ಸಭೆಯಲ್ಲಿ ಸಿದ್ಧಪಡಿಸಲಾಯಿತು.

ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆಯ ಅಧ್ಯಕ್ಷರು ಸದಸ್ಯರು ಪದಾಧಿಕಾರಿಗಳು. ರೈತ ಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು