ಸುಮಾರು 3 ಕೋಟಿ 15 ಲಕ್ಷ ರೂಗಳ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಸುಮಾರು 3 ಕೋಟಿ 15 ಲಕ್ಷ ರೂಗಳ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

       ಮೇಲುಕೋಟೆ ವಿಧಾನ ಸಭೆ ವ್ಯಾಪ್ತಿಯ  ದುದ್ದ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆ 
ಈ ದಿನ ದುದ್ದ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರು ಸುಮಾರು 3.ಕೋಟಿ 15 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡುತ್ತಾ   ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಈ ದಿನ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ .
ಶ್ರೀ ಸಾಯಿ ನಿಕೇತನ ಶಾಲೆಯ ಮುಖ್ಯರಸ್ತೆ, ರಸ್ತೆ ಕಾಮಗಾರಿಗೆ ಸುಮಾರು ಒಂದು ಕೋಟಿ ರೂ,  ಅವ್ವೇರಹಳ್ಳಿ 15 ಲಕ್ಷ ರೂ , ಬಿಳಗುಲಿ 25 ಲಕ್ಷ ರೂ, ಕುರಿ ಕೊಪ್ಪಲು 20 ಲಕ್ಷರೂ, ಚಂದಗಾಲು 20 ಲಕ್ಷ ರೂ, ಬೀರೇಗೌಡನಹಳ್ಳಿ 45 ಲಕ್ಷ ರೂ, ಸಂಪಹಳ್ಳಿ 15 ಲಕ್ಷ ರೂ, ಶಿವಳ್ಳಿ 25 ಲಕ್ಷ ರೂ, ಹುಳ್ಳೇನಹಳ್ಳಿ 50 ಲಕ್ಷ ರೂ, ಒಟ್ಟು ಮೂರು ಕೋಟಿ ಹದಿನೈದು ಲಕ್ಷ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮಾಡಿದ್ದೇವೆ.
ನಿಗದಿತ ಸಮಯಕ್ಕೆ ಸರಿಯಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಚಂದಗಾಲು ಗ್ರಾಮದ ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಕೆ. ನಾಗರಾಜ್, ಸೊಸೈಟಿ ಅಧ್ಯಕ್ಷ ರಾಮಕೃಷ್ಣ, ನಿಂಗೇಗೌಡ, ಸಿದ್ದರಾಜು, ಬಿಳಗುಲಿ ಗ್ರಾಮದ ಮುಖಂಡರಾದ ಪಟೇಲ್ ಶಿವಕುಮಾರ್, ಮಹದೇವಪ್ಪ,  ಎಲ್ಲರೊಳಗೊಂದಾಗು  ಮಂಕುತಿಮ್ಮ ಟೆಸ್ಟ್ ಅಧ್ಯಕ್ಷ ವಿನಯ್ ಕುಮಾರ್, ಅಣ್ಣ ಬಸವರಾಜ್, ರೇಣುಕಾರಾಧ್ಯ,  ಕೆಂಪಾಚಾರಿ,  ರಾಜೇಶ್, ರಾಜಶ್ವ ನಿರೀಕ್ಷಕರಾದ ಲೋಹಿತ್, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್, ಗುತ್ತಿಗೆದಾರರ ಉಮೇಶ್, ರವಿ ,ಶರತ್ ,ಹಾಗೂ ಆಯಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.