ಸಾಹಿತಿ,ಪರಿಸರ ಚಿಂತಕ ಭೇರ್ಯ ರಾಮಕುಮಾರ್ ಗೆ ಪೂರ್ಣಚಂದ್ರ ತೇಜಸ್ವಿ ಪ್ರಶಸ್ತಿ

ಸಾಹಿತಿ,ಪರಿಸರ ಚಿಂತಕ ಭೇರ್ಯ ರಾಮಕುಮಾರ್ ಗೆ ಪೂರ್ಣಚಂದ್ರ ತೇಜಸ್ವಿ ಪ್ರಶಸ್ತಿ

       ಮೈಸೂರು ಜಿಲ್ಲೆಯ ಹಿರಿಯ ಸಾಹಿತಿ,ಪರಿಸರ ಚಿಂತಕ, ದೇಹದಾನ ಹಾಗೂ ನೇತ್ರದಾನಕ್ಕೆ ಒಪ್ಪಿಗೆ ಪತ್ರ ನೀಡಿರುವ  ಸಮಾಜಸೇವಕ ಭೇರ್ಯ 
ರಾಮಕುಮಾರ ಅವರು ರಾಜ್ಯಮಟ್ಟದ ಪೂರ್ಣಚಂದ್ರ ತೇಜಸ್ವಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದು ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾದ ಕೃಷ್ಣಯ್ಯ ತಿಳಿಸಿದ್ದಾರೆ.

  ಕಳೆದ 50 ವರ್ಷಗಳಿಂದ  357 ರಾಜ್ಯಮಟ್ಟದ ಸಾಹಿತ್ಯ, ಕಾರ್ಯಕ್ರಮಗಳ ಸಂಘಟನೆ,  ಶಾಲಾ ಕಾಲೇಜುಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸುಮಾರು1000  ಪರಿಸರ ಉಪನ್ಯಾಸಗಳು ಹಾಗೂ ಎಲ್ಲ ಉಪನ್ಯಾಸಗಳಲ್ಲೂ  ಪರಿಸರ ಪ್ರಮಾಣವಚನ ಭೋದನೆ,ಮೈಸೂರು ವೈದ್ಯಕೀಯ ಕಾಲೇಜಿಗೆ ತಮ್ಮ ದೇಹದಾನಕ್ಕೆ ಒಪ್ಪಿಗೆ ಪತ್ರ ಸಲ್ಲಿಕೆ ಹಾಗೂ ಮೈಸೂರು ಕೆ .ಆರ್ .ಆಸ್ಪತ್ರೆಗೆ ತಮ್ಮ ನೇತ್ರದಾನಕ್ಕೆ ಒಪ್ಪಿಗೆ ಪತ್ರ ಸಲ್ಲಿಕೆ ಹೀಗೆ  ಸಮಾಜದ ಅಭ್ಯುದಯಕ್ಕೆ ಭೇರ್ಯ  ರಾಮಕುಮಾರ ಸಲ್ಲಿಸಿರುವ ಅಪೂರ್ವ ಸೇವೆಯನ್ನು ಪರಿಗಣಿಸಿ ಅವರಿಗೆ ತೇಜಸ್ವಿ ಪ್ರಶಸ್ತಿ ನೀಡಿ ಅವರನ್ನು ಸನ್ಮಾನಿಸಲಾಗುವುದು.

  ಪೂರ್ಣ ಚಂದ್ರ ತೇಜಸ್ವಿ ಅವರ ಜನ್ಮದಿನವಾದ ಆಗಸ್ಟ್ 8 ರಂದು ನಡೆಯುವ ಸಮಾರಂಭದಲ್ಲಿ ಹಿರಿಯ ಸಾಧಕರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು. ಸಂಸ್ಥೆಯ ಪ್ರಕಟಣೆ ತಿಳಿಸಿದೆ