ಶಿಕ್ಷಣ ತಜ್ಞ ಶ್ರೀಕಾಂತ ಎಸ್.ಉಳ್ಳೇಗಡ್ಡಿ ಅವರಿಗೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ
ಬೈಲಹೊಂಗಲ-ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಹೋಬಳಿಯ ಕಿತ್ತೂರ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಂಪಗಾಂವ ಗ್ರಾಮದ ಗಣ್ಯ ಮನೆತನದ, ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರು, ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ, ಆರ್.ಇ.ಎಸ್.ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಶ್ರೀಕಾಂತ ಎಸ್.ಉಳ್ಳೇಗಡ್ಡಿ ಅವರ ಹುಟ್ಟುಹಬ್ಬದ, ವಜ್ರಮಹೋತ್ಸವ Dimond Jubilee ನಿಮಿತ್ತ ಬೈಲಹೊಂಗಲ ವಿಜಯ ಸೋಶಿಯಲ್ ಕ್ಲಬ್ ಆವರಣದಲ್ಲಿರುವ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ, ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕರಾದ ಶ್ರೀ ರಮೇಶ ಸೂರನಾಯ್ಕ ಪರವಿನಾಯ್ಕರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಹಕ್ಕಿ, ಖ್ಯಾತ ಉದ್ದಿಮೆದಾರರಾದ ಮಿಥುನ ವಿಠ್ಠಲ ಹುಗ್ಗಿ,ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲ್ಲೂಕಿನ ಅಧ್ಯಕ್ಷರಾದ ಶ್ರೀ ಎನ್.ಆರ್.ಠಕ್ಕಾಯಿ,ಶಿಕ್ಷಣ ತಜ್ಞ ಶ್ರೀ ಮಹೇಶ ಶಂಕರೆಪ್ಪ ಅಂಗಡಿ ಅವರು ಸನ್ಮಾನಿಸಿ,ಅಭಿನಂದಿಸಿ,ಶುಭಕೋರಿದರು.